ಡಾ. ರಂ. ಶ್ರೀ. ಮುಗಳಿರವರ ವಿಮರ್ಶಾ ಸಾಹಿತ್ಯ : ಒಂದು ನೋಟ
Abstract
ಡಾ. ರಂ. ಶ್ರೀ. ಮುಗಳಿರವರು ಸುಪ್ರಸಿದ್ಧ ಸಾಹಿತಿಗಳು ಮತ್ತು ವಿದ್ವಾಂಸರು. ಇವರು ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ ಗಣನೀಯ ಸೇವೆಸಲ್ಲಿಸಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮೊದಲ ಮುಖ್ಯಸ್ಥರಾಗಿದ್ದವರು. ಇವರು ಡಾ. ಜಿ. ಎಸ್. ಶಿವರುದ್ರಪ್ಪನವರ ಜೊತೆಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ್ದಾರೆ. `ಇವರ `ಕನ್ನಡ ಸಾಹಿತ್ಯ ಚರಿತ್ರೆ’ ಪುಸ್ತಕವು ಪ್ರತಿಯೊಬ್ಬ ಕನ್ನಡದ ಓದುಗರಿಗೆ ಚಿರಪರಿಚಿತವಾಗಿದ್ದು ಭಾರತದ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಗಳಿಸಿದೆ. ಕನ್ನಡ ಸಾಹಿತ್ಯಕ್ಕೆ ಡಾ. ರಂ.ಶ್ರೀ. ಮುಗಳಿರವರ ಕೊಡುಗೆ ಅನನ್ಯವಾದುದು. ಇವರ ವಿಮರ್ಶನ ಸಾಹಿತ್ಯವು ಮೌಲಿಕವಾಗಿದ್ದು ಅಧ್ಯಯನ ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುಗಳಿರವರ ವಿಮರ್ಶನ ಸಾಹಿತ್ಯವನ್ನು ಪರಿಚಯ ಮಾಡಿಕೊಡುವುದು ಪ್ರಸ್ತುತ ಲೇಖನದ ಮುಖ್ಯ ಉದ್ದೇಶವಾಗಿದೆ.