ಉತ್ತಮ ಆಡಳಿತದ ಸಾಧನವಾಗಿ ನಾಗರಿಕ ಸಮಾಜ

Main Article Content

ಶಿವಣ್ಣ

Abstract

ಉತ್ತಮ ಆಡಳಿತದ ಸಾಧನವಾಗಿ ನಾಗರಿಕ ಸಮಾಜ ಎನ್ನುವ ಈ ಲೇಖನವು ಆಡಳಿತ ಉತ್ತಮವಾಗಿರಬೇಕಾದರೆ ಹೇಗೆ ನಾಗರಿಕ ಸಮಾಜವು ಪಾತ್ರವಹಿಸುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಮಾನವನಲ್ಲಿರುವ ಸಹಜವಾದಂತಹ ಸಾಂಘಿಕವಾದ ಸ್ವಭಾವದಿಂದ ಸಮಾಜ ರಚನೆಯಾಗುತ್ತದೆ. ಸಮಾಜದಲ್ಲಿರುವ ಜನರ ವರ್ತನೆಗಳನ್ನು ನಿಯಂತ್ರಿಸಲು ಕಂಡುಕೊಂಡ ಅಥವಾ ಸ್ಥಾಪಿಸಿಕೊಂಡ ಸಂಸ್ಥೆಯೇ ರಾಜ್ಯ. (ಇದಕ್ಕೆ ಸಂಬಂಧಿಸಿದಂತೆ ಹಲವಾರು ಸಿದ್ಧಾಂತಗಳಿರುವುದು ನಮಗೆ ತಿಳಿದೇ ಇದೆ) ಈ ರಾಜ್ಯ ಒಂದು ಕಾಲ್ಪನಿಕ ಸಂಸ್ಥೆಯಾಗಿದ್ದು, ಇದರ ಉದ್ದೇಶಗಳನ್ನು ಈಡೇರಿಸಲು ಸರ್ಕಾರ ಎನ್ನುವ ಮೂರ್ತರೂಪದ ಸಂಸ್ಥೆ ರಚನೆಯಾಗಿದೆ. (ಲಾಕ್‌ರವರ ಸಾಮಾಜಿಕ ಒಪ್ಪಂದ ಸಿದ್ಧಾಂತದಲ್ಲಿ ಕಾಣಬಹುದು) ಈ ಸರ್ಕಾರ ರಾಜ್ಯದ ಉದ್ದೇಶಗಳನ್ನು ಈಡೇರಿಸಲು ಕ್ರಿಯಾಶೀಲವಾಗುವುದನ್ನು ಅಥವಾ ಕಾರ್ಯೋನ್ಮುಖವಾಗುವುದನ್ನು ಆಳ್ವಿಕೆ ಎನ್ನಲಾಗುತ್ತದೆ. ಇದರ ಕಾರ್ಯ ಸ್ವರೂಪದ ಆಧಾರದ ಮೇಲೆ ಉತ್ತಮ ಮತ್ತು ಉತ್ತಮವಲ್ಲದ ಆಳ್ವಿಕೆ ಎಂದು ಗುರುತಿಸಲಾಗಿದ್ದು, ಉತ್ತಮವಾಗಿಲ್ಲದ ಆಳ್ವಿಕೆಯನ್ನು ಉತ್ತಮವಾಗಿಸಲು ಹಲವಾರು ಪ್ರಯತ್ನಗಳು, ಸಂಶೋಧನೆಗಳು ಆಗಿದ್ದು, ಇದರಿಂದ ಕಂಡುಕೊಂಡ ಹಲವಾರು ಪರಿಹಾರ ಮಾರ್ಗಗಳಲ್ಲಿ ನಾಗರಿಕ ಸಮಾಜವೂ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಆಡಳಿತದ ಸಾಧನವಾಗಿ ನಾಗರಿಕ ಸಮಾಜದ ಪಾತ್ರ ಎನ್ನುವ ಲೇಖನ ಪ್ರಸ್ತುತವೆನಿಸುತ್ತದೆ.

Article Details

Section

Research Articles

Author Biography

ಶಿವಣ್ಣ

ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಚಿತ್ರದುರ್ಗ.

 

How to Cite

ಶಿವಣ್ಣ. (2026). ಉತ್ತಮ ಆಡಳಿತದ ಸಾಧನವಾಗಿ ನಾಗರಿಕ ಸಮಾಜ. ಅಕ್ಷರಸೂರ್ಯ (AKSHARASURYA), 14(05), 188 to 198. https://aksharasurya.com/index.php/latest/article/view/952

References

ಮೀನಾದೇಶಪಾಂಡೆ, ಬಿ.ಕೆ.ದತ್ತಾತ್ರಿ, “ರಾಜಕೀಯ ಸಿದ್ಧಾಂತ ಸಮಕಾಲೀನ ಚಿಂತನೆ”, ಶ್ರೀ ರಂಗ ಪ್ರಿಂಟರ್ಸ್, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.

ಮುಜಾಫರ್ ಅಸ್ಸಾದಿ, ”ಜಾಗತೀಕರಣ ಮತ್ತು ನಾಗರಿಕ ಸಮಾಜ: ಭಾರತದ ಸಂದರ್ಭದಲ್ಲಿ ಸವಾಲುಗಳ ನಿರ್ವಹಣೆ” ಅಭಿವೃದ್ಧಿ ಅಧ್ಯಯನ, ಸಮಾಜವಿಜ್ಞಾನ ಪತ್ರಿಕೆ, ಸಂಪುಟ-1, ಸಂಚಿಕೆ -2, ಜೂನ್ 2002 ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ ಹಂಪಿ.

ಚಂದ್ರಪೂಜಾರಿ, “ಸೋಶಿಯಲ್ ಕ್ಯಾಪಿಟಲ್”- ಅಭಿವೃದ್ಧಿಯ ಹೊಸ ಮಿಸ್ಸಿಂಗ್ ಲಿಂಕ್, ಅಭಿವೃದ್ಧಿ ಅಧ್ಯಯನ, ಸಮಾಜವಿಜ್ಞಾನ ಪತ್ರಿಕೆ, ಸಂಪುಟ-1, ಸಂಚಿಕೆ-2, ಜೂನ್ 2002, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

ನಾಗರಿಕ ಸಮಾಜದ ಅರ್ಥ, ವ್ಯಾಖ್ಯೆ ಮತ್ತು ವ್ಯಾಪ್ತಿ, ಸ್ಪರ್ಧಾಚೈತ್ರ, ಫೆಬ್ರವರಿ 2012.

ಲಕ್ಷ್ಮಣ ಕೊಡಸೆ, “ಇ ಆಡಳಿತ: ವಿಳಂಬ ತಡೆಗೆ ಯಶಸ್ವಿಸೂತ್ರ”, ಯೋಜನಾ, ಜನವರಿ 2013.

ಜೈನ್. ಆರ್.ಬಿ, “ಉತ್ತಮ ಆಡಳಿತ ಪ್ರಯತ್ನ” ಯೋಜನಾ, ಮಾರ್ಚ್ 2014.