ಭಾರತ ಒಕ್ಕೂಟ ವ್ಯವಸ್ಥೆಯಲ್ಲಿನ ಇತ್ತೀಚಿನ ಪ್ರವೃತ್ತಿಗಳು: ಒಂದು ವಿಶ್ಲೇಷಣೆ
Main Article Content
Abstract
ಭಾರತವು ವೈವಿಧ್ಯತೆಯನ್ನು ಹೊಂದಿರುವ ವಿಶಾಲವಾದಂತಹ ರಾಜ್ಯವಾಗಿದ್ದು, ಈ ವೈವಿಧ್ಯತೆಯೇ ಜೀವಾಳವಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಜೊತೆಗೆ ಭಾರತದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಹೋಗಬೇಕೆನ್ನುವ ಹಿನ್ನೆಲೆಯಲ್ಲಿ ಸಂವಿಧಾನ ರಚನಾಕಾರರು ಸಂವಿಧಾನದ ಯಾವ ಭಾಗದಲ್ಲೂ ಸಂಯುಕ್ತ ಎಂಬ ಪದವನ್ನು ಬಳಸದೆ ‘ಒಕ್ಕೂಟ ವ್ಯವಸ್ಥೆ’ಯನ್ನು ಸ್ಥಾಪಿಸಿದರು. ಒಕ್ಕೂಟ ತತ್ವಕ್ಕನುಗುಣವಾಗಿ ಸಂವಿಧಾನಾತ್ಮಕವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಅಧಿಕಾರ ಸಂಬಂಧವನ್ನು ಕುರಿತು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಸಂಬಂಧಗಳಲ್ಲಿ 60ರ ದಶಕದವರೆಗೂ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಅಧಿಕಾರವಿರುವವರೆಗೆ ಕೇಂದ್ರ-ರಾಜ್ಯಗಳ ಮಧ್ಯೆ ಯಾವುದೇ ಸಂಘರ್ಷವಿಲ್ಲದೆ ಸಹಕಾರಾತ್ಮಕವಾದಂತಹ ಒಕ್ಕೂಟ ವ್ಯವಸ್ಥೆಯಾಗಿತ್ತು. ಆದರೆ ಕಾಲಾನಂತರದಲ್ಲಿ ಬೇರೆ ಬೇರೆ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಪ್ರವರ್ಧಮಾನಕ್ಕೆ ಬಂದು ರಾಜ್ಯಗಳಲ್ಲಿ ಅಧಿಕಾರಕ್ಕೇರಿದ ನಂತರ, ಸಹಕಾರಾತ್ಮಕವಾದಂತಹ ಒಕ್ಕೂಟ ವ್ಯವಸ್ಥೆ ಸಂಘರ್ಷಾತ್ಮಕ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳಲ್ಲಿ ತೀವ್ರ ತೆರನಾದಂತಹ ಸಂಘರ್ಷಗಳು ಏರ್ಪಟ್ಟಿರುವ ಹಿನ್ನೆಲೆಯಲ್ಲಿ, ಅವುಗಳ ಸಂಬಂಧಗಳಲ್ಲಿನ ಸಂಘರ್ಷಗಳಿಗೆ ಕಾರಣಗಳೇನು ಎಂಬುದನ್ನು ತಿಳಿಯುವ ಹಿನ್ನೆಲೆಯಲ್ಲಿ ಈ ಲೇಖನವು ಮಹತ್ವವನ್ನು ಪಡೆಯುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Fadia. B.L, (2010), Indian Government and Politics, Agra: Sahitya Bhavan Publications.
Avasthi A.P, (2023), Indian Political System, Agra: Lakshmi Narain Agarwal Educational Publishers.
Basu. D.D, (2001), Introduction to the Constitution of India, Gurgaon: LexisNexis.
ರಾಜಶೇಖರ ಹೆಚ್.ಎಂ., (2017), ಭಾರತ ಸರ್ಕಾರ ಮತ್ತು ರಾಜಕೀಯ, ಮೈಸೂರು: ಕಿರಣ್ ಪ್ರಕಾಶನ.
ಗಂಗಾಧರ ಪಿ.ಎಸ್., (2024), ಭಾರತ ಸಂವಿಧಾನ ಮತ್ತು ರಾಜಕೀಯ, ಬೆಂಗಳೂರು: ಚೈತ್ರ ಪ್ರಕಾಶನ.
ಹಾಲಪ್ಪ ಎನ್., (1998), ರಾಜ್ಯಶಾಸ್ತ್ರ, ಬೆಂಗಳೂರು: ನವೀನ್ ಪ್ರಕಾಶನ.
ಪ್ರವೀಣ್ ಚಕ್ರವರ್ತಿ, (2022), ಲಯ ತಪ್ಪಬಹುದು ಒಂದು ರಾಷ್ಟ್ರ ಮಂತ್ರ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2022), ಬಿಜೆಪಿಯೇತರ ಸರ್ಕಾರಗಳಿಗೆ ರಾಜ್ಯಪಾಲರ ರಗಳೆ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರವೀಣ್ ಬಿ.ಎಸ್., (2022), ಒಕ್ಕೂಟದ ಕಹಿಬಂಧ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
Draupadi Murmu, (2023), Multiple Creed and Language essence of India, New Delhi: The Hindu Daily.
ಪ್ರಜಾವಾಣಿ ಸಂಪಾದಕೀಯ, (2023), ಕೇಂದ್ರದ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಗೆ ಬಲ ತುಂಬಿದ ಸುಪ್ರೀಂ ತೀರ್ಪುಗಳು, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2023), ಬಿಜೆಪಿಯೇತರ ಪಕ್ಷಗಳಿರುವ ರಾಜ್ಯ ಸರ್ಕಾರಗಳಿಗೆ ರಾಜ್ಯಪಾಲರ ಕಿರುಕುಳ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವಾರ್ತೆ, (2023), ಬೆಂಕಿ ಜೊತೆ ಆಟ - ಸುಪ್ರೀಂ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2023), ತಡೆ ಹಿಡಿದ ಮಸೂದೆ ರಾಷ್ಟ್ರಪತಿಗೆ ಕಳುಹಿಸುವಂತಿಲ್ಲ - ಸುಪ್ರೀಂ ಕೋರ್ಟ್, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2024), ರಾಜ್ಯಪಾಲರಿಗಿಲ್ಲ ವಿವೇಚನಾಧಿಕಾರ - ಸುಪ್ರೀಂ ಕೋರ್ಟ್, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವಾರ್ತೆ, (2024), ಸೆಸ್ ಮತ್ತು ಸರ್ಚಾರ್ಜ್‌ನಲ್ಲೂ ಪಾಲು ನೀಡಬೇಕು ಕರ್ನಾಟಕದ ಸಿಎಂ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2024), ರಾಷ್ಟ್ರ ರಾಜಧಾನಿಯಲ್ಲಿ ‘ಮೆರೆದ’ ರಾಜ್ಯದ ಕಳಕಳಿ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2024), ಕೇಂದ್ರದ ವಿರುದ್ಧ ಎಡ ಪಕ್ಷಗಳ ಪ್ರತಿಭಟನೆ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2024), ಕೇಂದ್ರದ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದ ಸುತ್ತ, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ಪ್ರಜಾವಾಣಿ ವರದಿ, (2025), ರಾಷ್ಟ್ರಪತಿಗೆ 3 ತಿಂಗಳ ಗಡುವು, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.
ದೇವನೂರು ಮಹಾದೇವ, (2025), ರಾಜ್ಯಗಳ ಕಾಲಿಗೆ ತೆರಿಗೆಯ ಗುಂಡು, ಬೆಂಗಳೂರು: ಪ್ರಜಾವಾಣಿ ದಿನಪತ್ರಿಕೆ.