ಮಾಸ್ತಿ ಮತ್ತು ಪುದುಮೈಪಿತ್ತನ್ ಒಂದು ಅನುಸಂಧಾನ

Authors

  • Malarvili K.

Abstract

‘ರಂಗಸ್ವಾಮಿಯ ಅವಿವೇಕ’ ಈ ಕಥೆಯನ್ನು ಮಾಸ್ತಿಯವರು ತುಂಬಾ ಆಕರ್ಷಕವಾಗಿ ರಚಿಸಿದ್ದಾರೆ. ಮನುಷ್ಯ ಸ್ವಭಾವದ ಸೂಕ್ಷ್ಮ ಒಳನೋಟಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಸ್ತಿಮಿತತೆ ಹೇಗೆ ಕೆಲಸ ಮಾಡುತ್ತದೆ. ಪುರುಷನ ಚಂಚಲ ಚಿತ್ತದ ಕಾರ್ಯವೈಖರಿ ಇವೆರಡನ್ನೂ ಒಟ್ಟೊಟ್ಟಿಗೇ ಇಟ್ಟು ನೋಡಿದ್ದಾರೆ. ಇದೂ ಸಹ ಒಂದು ನವೋದಯ ಮಾರ್ಗದ ಕಥೆ. ಮನಸ್ಸು ವಿವೇಕ ತಪ್ಪಿ ಪ್ರಲೋಭನೆಗಳಿಗೆ ಒಳಗಾಗುವುದು ಸಹಜ. ಅದು ಅವನನ್ನು ದಾರಿ ತಪ್ಪಿಸಿದರೂ ಕೊನೆಗೆ ಯಾವುದೇ ಅನಾಹುತವಾಗದೆ ಮಾನವೀಯ ಮೌಲ್ಯಗಳು ವಿಜೃಂಭಿಸಿ ಸರ್ವವೂ ಸುಖಾಂತವಾಗುವ ಹಾಗೆ ಕಥೆಯನ್ನು ಮುಗಿಸಿದ್ದಾರೆ. ಕಥೆಯು ಪಶ್ಚಾತ್ತಾಪದೊಂದಿಗೆ ಮುಗಿದಿರುವುದು ಪಾಪದ ಕೊಳೆಯನ್ನು ತೊಳೆಯುತ್ತದೆ. ಮನುಷ್ಯನನ್ನು ಸದಾ ಸನ್ಮಾರ್ಗದಲ್ಲೇ ನಡೆಯುವಂತೆ ಈ ಕಥೆ ಪ್ರೇರೇಪಿಸುತ್ತದೆ. ಅದರಲ್ಲಿ ಸಮಾಜದ ಮತ್ತು ವ್ಯಕ್ತಿಯ ದೀರ್ಘಕಾಲದ ಸುಖ ಶಾಂತಿಗಳು ಇರುವುದು ಎಂದು ಕಥೆ ಹೇಳುತ್ತಿರುವಂತೆ ತೋರುತ್ತದೆ”. ಎಂಬ ವಿಶ್ವನಾಥ್ ಹುಲಿಕಲ್‌ರವರ ಹೇಳಿಕೆ ಸಮಂಜಸವಾಗಿದೆ. ಒಟ್ಟಾರೆ ಇವೆರಡೂ ಕಥೆಗಳು ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಿಂದ ನೋಡಿದರೆ ಅತ್ಯಂತ ಯಶಸ್ವೀ ಕಥೆಗಳಾಗಿವೆ. ಈ ಮನುಕುಲದ ಮನುಷ್ಯನ ವಿಭಿನ್ನ ಗುಣಗಳನ್ನು ಮನಗಂಡ ಲೇಖಕರಿಬ್ಬರು ತೆಗೆದುಕೊಂಡ ಕಥಾವಸ್ತು ಒಂದೇ ಆಗಿ, ಕಥಾ ಪಾತ್ರಗಳ ವ್ಯಕ್ತಿತ್ವದಲ್ಲಿ ಭಿನ್ನತೆಯನ್ನು ತಂದು ಹೀಗೂ ಕೆಲವೊಮ್ಮೆ ಮನುಷ್ಯ ನಡೆದುಕೊಳ್ಳುತ್ತಾನೆ ಎಂಬ ವಾಸ್ತವ ಚಿತ್ರಣವನ್ನು ತಂದರೂ ಸಹ ಲೇಕಕರಿಬ್ಬರಲ್ಲಿಯೂ ಸಾಮಾಜಿಕ ಕಳಕಳಿ ಇರುವುದು ವ್ಯಕ್ತವಾಗುತ್ತದೆ. ಇಂಥ ಮನಸ್ಸುಗಳು ಮನುಷ್ಯನ ವಾಸ್ತವ ನೆಲೆಗಟ್ಟಿನಲ್ಲಿ ಇದ್ದರೂ ಸಂಯಮ ಹಾಗೂ ಪಶ್ಚಾತ್ತಾಪ ಎಂಬ ಎರಡು ಅಡಿಗಲ್ಲಿನ ಆಸರೆಯಲ್ಲಿ ಮಾನವನ ಸಾಂಸಾರಿಕ ಜೀವನ ಸುಗಮವಾಗಲು ಸಾಧ್ಯ ಎಂಬುದನ್ನು ಕಥೆಗಳ ಆಶಯ ಸಾರುತ್ತಿರುವಲ್ಲಿ ಸಾಮಾಜಿಕ ಜವಾಬ್ದಾರಿಯ ಹೊಣೆ ಇರುವುದನ್ನು ಮನಗಾಣಬಹುದು. ಇಂಥಲ್ಲಿ ತೌಲನಿಕ ಅಧ್ಯಯನದ ಅಗತ್ಯವನ್ನು ಅರಿತುಕೊಳ್ಳುವುದರೊಂದಿಗೆ ಜ್ಞಾನದ ಹರಹನ್ನು ವಿಸ್ತರಿಸಿಕೊಳ್ಳಲು ಅನುವುಮಾಡಿಕೊಡುತ್ತದೆ.

Downloads

Published

05.03.2023

How to Cite

Malarvili K. (2023). ಮಾಸ್ತಿ ಮತ್ತು ಪುದುಮೈಪಿತ್ತನ್ ಒಂದು ಅನುಸಂಧಾನ. AKSHARASURYA, 2(03), 94–96. Retrieved from https://aksharasurya.com/index.php/latest/article/view/90

Issue

Section

Article