ದೇಶಿ ಅನುಭವ ಸಾಹಿತ್ಯದ ವಸ್ತುವಾಗಬೇಕು (ಕರ್ವಾಲೊ ಕಾದಂಬರಿಯನ್ನು ಅನುಲಕ್ಷಿಸಿ)
Abstract
ಪ್ರಸ್ತುತ ಲೇಖನದಲ್ಲಿ ಪುಸ್ತಕ ಜ್ಞಾನವನ್ನು (ಆಲೋಚನೆಯೆಂಬುದನ್ನು) ಶಿಷ್ಟವಾಗಿ ಹಾಗೂ ಅನುಭವವನ್ನು ದೇಶಿಯಾಗಿಯೂ (ಜಾನಪದವಾಗಿಯೂ) ನೋಡಲಾಗಿದೆ. ಪ್ರಮುಖವಾಗಿ ಈ ಲೇಖನದ ಉದ್ದೇಶ ಮೂರ್ತ-ಅಮೂರ್ತ, ಚಿಂತನೆ- ಅನುಭವ ಇವು ಪರಸ್ಪರ ಒಂದಾಗಬೇಕು ಎಂಬ ಹಿನ್ನೆಲೆಯಲ್ಲಿ ಚಿಂತನೆಯ ಬದುಕು ಅನುಭವದಿಂದಲೂ, ಅನುಭವದ ಬದುಕು ಚಿಂತನೆಯಿಂದಲೂ ಪುಷ್ಟಿ ಪಡೆಯಬೇಕು ಎನ್ನುವ ಉದ್ದೇಶದಿಂದ ಈ ಲೇಖನವನ್ನು ನೋಡುವ ಪ್ರಯತ್ನಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅನಂತಮೂರ್ತಿಯವರ ಹೇಳಿಕೆ ಬಹಳ ಪ್ರಮುಖವಾಗಿದೆ, ಗಮನಿಸಬಹುದಾದರೆ “ಬರಿಯ ಶೂದ್ರ ಪ್ರಜ್ಞೆಯಿಂದ ಜನಪದ ಸಾಹಿತ್ಯ ಸೃಷ್ಟಿಯಾಗುತ್ತದೆ. ಬರಿಯ ಬ್ರಾಹ್ಮಣ ಪ್ರಜ್ಞೆಯಿಂದ ನಿರ್ವೀಯವಾದ, ನಯನಾಜೂಕಿನ ಸ್ನಾಯುಶಕ್ತಿ ಹೀನವಾದ ಸಾಹಿತ್ಯ ಹೊರಬರುತ್ತದೆ. ಆದರೆ ಇವೆರಡೂ ಕೂಡಿದಾಗ ಮಾತ್ರ ಅಖಂಡ ಪ್ರಜ್ಞೆಯ ಸಾಹಿತ್ಯ ಸಾಧ್ಯವಾಗುತ್ತದೆ” ಎಂಬುದು ಬಹಳ ಮುಖ್ಯವಾದ ಅಂಶವಾಗಿದೆ. ಈ ಹಂತದಲ್ಲಿ ಚಿಂತನೆ ಮತ್ತು ಅನುಭವ, ಶಿಷ್ಟ ಮತ್ತು ಜನಪದ, ಇಂಗ್ಲಿಷ್ ಮತ್ತು ಕನ್ನಡ, ಬ್ರಾಹ್ಮಣಚಿಂತನೆಗಳು ಮತ್ತು ಶೂದ್ರನ ಮಣ್ಣಿನ ಅನುಭವಗಳು ಪರಸ್ಪರ ಒಂದಾದಾಗಾ ಬದುಕಿಗೊಂದು ವಿಶಿಷ್ಟ ಶಕ್ತಿ ದೊರಕುತ್ತದೆ. ಇದರಿಂದ ಬೆಳೆಯುವ ಸಾಹಿತ್ಯ ವಿಶಿಷ್ಟವಾಗಿರಬಲ್ಲದು ಎಂಬ ವಿಶಿಷ್ಟ ಕ್ರಮವೊಂದು ನವ್ಯ ಘಟ್ಟದಲ್ಲಿ ಬೆಳೆಯಿತು. ಮುಂದೆ ನವೋತ್ತರದ ಹಲವಾರು ಕಥೆ, ಕಾದಂಬರಿಯ ವಸ್ತುವಾಯಿತು.
References
ನಾಯಕ ಜಿ. ಎಚ್., ೨೦೧೧, ಮೌಲ್ಯ ಮಾರ್ಗ ಸಂಪುಟ-೧, ಸಿರಿವರ ಪ್ರಕಾಶನ, ಬೆಂಗಳೂರು.
ಪೂರ್ಣಚಂದ್ರ ತೇಜಸ್ವಿ ಕೆ. ಪಿ., ೨೦೧೬, ಕರ್ವಾಲೊ, ಪುಸ್ತಕ ಪ್ರಕಾಶನ, ಮೈಸೂರು.
ನಾರಾಯಣ ಕೆ. ವಿ., ೨೦೧೬, ತೊಂಡುಮೇವು-೩, ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು.