ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ

Main Article Content

ಅಶ್ವಿನಿ ಬೆಳ್ಳುಂಡಗಿ

Abstract

ದಾಸ ಸಾಹಿತ್ಯವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ಹದಿನೈದನೇ ಶತಮಾನದಿಂದ ಆರಂಭವಾದ ದಾಸ ಪಂಥವು ಭಕ್ತಿಯ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಯಿತು. ಪುರಂದರದಾಸರು, ಕನಕದಾಸರು ಮುಂತಾದ ದಾಸಶ್ರೇಷ್ಠರು ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಡಾಂಭಿಕತೆಯನ್ನು ತಮ್ಮ ಕೀರ್ತನೆಗಳ ಮೂಲಕ ಖಂಡಿಸಿದರು. ಸರಳ ಕನ್ನಡದಲ್ಲಿ ವೇದಾಂತ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ದಾಸರಿಗೆ ಸಲ್ಲುತ್ತದೆ. ದಾಸ ಸಾಹಿತ್ಯದ ತಾತ್ವಿಕತೆ, ಸಾಮಾಜಿಕ ಕಳಕಳಿ ಮತ್ತು ಸಾಹಿತ್ಯಕ ಮೌಲ್ಯಗಳನ್ನು ಇಲ್ಲಿ ವಿವರಿಸಲಾಗಿದೆ. ಭಕ್ತಿ ಪಂಥವು ಹೇಗೆ ಸಾಮಾಜಿಕ ಸಮಾನತೆಯ ಅಸ್ತ್ರವಾಯಿತು ಎಂಬುದನ್ನು ಚರ್ಚಿಸಲಾಗಿದೆ. 

Article Details

Section

Research Articles

Author Biography

ಅಶ್ವಿನಿ ಬೆಳ್ಳುಂಡಗಿ

ಉಪನ್ಯಾಸಕರು, ಕೃಷಿ ಮಹಾವಿದ್ಯಾಲಯ, ವಿಜಯಪುರ.

How to Cite

ಅಶ್ವಿನಿ ಬೆಳ್ಳುಂಡಗಿ. (2023). ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ. ಅಕ್ಷರಸೂರ್ಯ (AKSHARASURYA), 2(02), 15 to 17. https://aksharasurya.com/index.php/latest/article/view/50

References

ಈಸಬೇಕು ಇದು ಜಯಿಸಬೇಕು - ಪ್ರೊ.ಎ.ನಾವಡ

ದಾಸ ಸಾಹಿತ್ಯದಲ್ಲಿ ಜನಪದ ಅಂಶಗಳು - ಡಾ.ಆರ್.ಸುನಂದಮ್ಮ

ದಾಸ ಸಾಹಿತ್ಯ ಭಾಷೆ - ಎಸ್.ಎಸ್.ಅಂಗಡಿ