ಭಾರತದಲ್ಲಿ ಕೃಷಿಯಲ್ಲಾಗುತ್ತಿರುವ ಬದಲಾವಣೆ ಮತ್ತು ಹಸಿರು ಕ್ರಾಂತಿಯ ನಂತರದಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು

Main Article Content

ಸುಜಾತ

Abstract

ಹೆಚ್ಚಿನ ಇಳುವರಿ ನೀಡುವಂತಹ ಮುಂದುವರೆದ ವೈವಿಧ್ಯಮಯ ಕೃಷಿ ಉಪಕರಣಗಳು, ಬಿತ್ತನೆ ಬೀಜಗಳು, ಅಜೈವಿಕ ರಸಗೊಬ್ಬರಗಳ ಹೆಚ್ಚಿದ ಬಳಕೆ ಮತ್ತು ವಿಸ್ತೃತ ನೀರಾವರಿ ಯೋಜನೆಗಳ ಪರಿವರ್ತಕ ಬದಲಾವಣೆ ಕೃಷಿ ಪದ್ಧತಿಗಳನ್ನು ಪರಿಚಯಿಸಿದ ಹಸಿರು ಕ್ರಾಂತಿಯು ಭಾರತದಲ್ಲಿ ಬೆಳೆಯ ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಿತು. ಆದಾಗ್ಯೂ, ಈ ಪ್ರಗತಿಗಳು ಹೆಚ್ಚಿದ ಆಹಾರ ಭದ್ರತೆಗೆ ಕೊಡುಗೆ ನೀಡಿದ್ದರೂ, ಅವು ಹಸಿರು ಕ್ರಾಂತಿಯ ನಂತರದ ಯುಗದಲ್ಲಿ ಕೃಷಿಕರ ಮೇಲೆ ಪ್ರತಿಕೂಲವಾದಂತಹ ಪರಿಣಾಮ ಬೀರಿದ ಕಾರಣ, ಸಾಮಾಜಿಕ, ಆರ್ಥಿಕ ಮತ್ತು ಪರಿಸರದಂತಹ ಸವಾಲುಗಳಿಗೆ ಕಾರಣವಾದವು ಎಂದೇ ಹೇಳಲಾಗುತ್ತದೆ. ಈ ಸವಾಲುಗಳಲ್ಲಿ ಆಳವಾದ ಆರ್ಥಿಕ ಅಸಮಾನತೆಗಳು, ನೀರಿನ ಕೊರತೆ, ರೈತರ ಆಂತರಿಕ ಮೊತ್ತಗಳು, ಮಣ್ಣಿನ ಸಂರಕ್ಷಣೆ ಮತ್ತು ಆರೋಗ್ಯ ಹೀಗೆ ಇತ್ಯಾದಿಗಳನ್ನು ನೋಡಬಹುದು. ಒಟ್ಟಾರೆಯಾಗಿ ಭಾರತದಲ್ಲಿ ಕೃಷಿಯಲ್ಲಾಗುವ ಬದಲಾವಣೆ ಮತ್ತು ಹಸಿರು ಕ್ರಾಂತಿಯ ನಂತರದ ಅವಧಿಯಲ್ಲಿ ಕೃಷಿಕರು ಎದುರಿಸುತ್ತಿರುವಂತಹ ಸವಾಲುಗಳನ್ನು ವಿಶ್ಲೇಷಿಸಲು ಈ ಲೇಖನ ಪ್ರಯತ್ನಿಸುತ್ತದೆ. ಪ್ರಸ್ತುತ ಲೇಖನವು, ದ್ವಿತೀಯ ದತ್ತಾಂಶಗಳು, ವೃತ್ತ ಪತ್ರಿಕೆಗಳು, ಜರ್ನಲ್‌ಗಳು, ಗ್ರಂಥಾಲಯ, ಸಂಶೋಧನಾ ಶೈಕ್ಷಣಿಕ ಲೇಖನಗಳನ್ನು ಪರಿಶೀಲಿಸುವ ಮೂಲಕ, ಕೃಷಿ ಸಂಕಷ್ಟಗಳ ಮೂಲ ಕಾರಣಗಳನ್ನು ಹಾಗೂ ರೈತರು ಪ್ರಸ್ತುತವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು, ಸಂಭಾವ್ಯ ಪರಿಹಾರಗಳನ್ನು ಪ್ರಸ್ತಾಪಿಸಲು ಈ ಲೇಖನ ಪ್ರಯತ್ನಿಸುತ್ತಿದೆ. ಅಂತೆಯೇ ಈ ಸಂಶೋಧನಾ ಲೇಖನದ ಮೂಲಕ ಸುಸ್ಥಿರ ಕೃಷಿ ಪದ್ಧತಿಗಳು, ಆಹಾರ ಭದ್ರತೆ, ಗ್ರಾಮೀಣ ಜನರ ಯೋಗಕ್ಷೇಮ ಮತ್ತು ಕೃಷಿ ಸುಧಾರಣೆಯ ಮಾರ್ಗಗಳನ್ನು ಸೂಚಿಸಲು ಈ ಲೇಖನವು ಪ್ರಯತ್ನಿಸುತ್ತದೆ.

Article Details

Section

Research Articles

Author Biography

ಸುಜಾತ

ಸಂಶೋಧನಾ ವಿದ್ಯಾರ್ಥಿ, ಗ್ರಾಮೀಣಾಭಿವೃದ್ಧಿ ವಿಭಾಗ (ಸಿ.ಆರ್.ಡಿ.ಎಸ್), ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು.

 

References

Patil K. H., (2021), A Study of Agriculture Transformation and Development in India, [Online/Journal]: International Journal of Geography, Geology and Environment.

Anuj Kumar, (2022), Sustainable Agricultural Development in India: An Overview, International Journal of Agricultural Extension and Social Development.

Indian Council of Agricultural Research (ICAR), (2023), Indian Agriculture After Independence, New Delhi: ICAR.

Patel R., (2012), The Long Green Revolution, [Online/Journal]: The Journal of Peasant Studies.

ಅಶೋಕ ಪಾತೇನವರ ಮತ್ತು ಸುನೀತ ಎನ್. ಎಚ್., (2016), ಭಾರತದ ಎರಡನೆ ಹಸಿರು ಕ್ರಾಂತಿಗೆ ಉದ್ದೇಶಿತ ತಂತ್ರಗಳು (ಸಿರಿ ಸಮೃದ್ಧಿ: ಸಂಪುಟ 2, ಸಂಚಿಕೆ 12), ಹನುಮನಮಟ್ಟಿ (ಹಾವೇರಿ): ಕೃಷಿ ವಿಜ್ಞಾನ ಕೇಂದ್ರ (KVK).

ಮಂಜುನಾಥ್ ಟಿ. ಎಂ., (2015), ಹಸಿರು ಕ್ರಾಂತಿ: ಗಡಿ ಮೀರಿದ ತಾಂತ್ರಿಕತೆ (ಸಂಗತ ಅಂಕಣ), ಬೆಂಗಳೂರು: ಪ್ರಜಾವಾಣಿ.

Douglass G. K. (Ed.), (1984), Agricultural Sustainability in a Changing World Order, Boulder (Colorado): Westview Press.