ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳು

Main Article Content

ಅನುಷ ಹೆಚ್.ಸಿ.

Abstract

ಕನ್ನಡ ಸಾಹಿತ್ಯ ಚರಿತ್ರೆಯು ಸಂಸ್ಕೃತ ಮತ್ತು ಇಂಗ್ಲೀಷ್ ವಸಾಹತುಶಾಹಿ ಪ್ರಭಾವಗಳಿಂದ ರೂಪುಗೊಂಡ ವೈವಿಧ್ಯಮಯ ಘಟ್ಟಗಳನ್ನು ಒಳಗೊಂಡಿದೆ. ಆಧುನಿಕತೆಯು ಪಶ್ಚಿಮದ ಅನುಕರಣೆಯಾಗಿ ಮಾರ್ಪಟ್ಟಾಗ, ಅದರ ನ್ಯೂನತೆಗಳನ್ನು ನೀಗಲು ‘ಆಧುನಿಕೋತ್ತರ’ ಚಿಂತನೆಗಳು ಮುನ್ನೆಲೆಗೆ ಬಂದವು. ಕವಿರಾಜಮಾರ್ಗದಿಂದ ಹಿಡಿದು ಸಮಕಾಲೀನ ದಲಿತ, ಬಂಡಾಯ ಹಾಗೂ ಸ್ತ್ರೀವಾದಿ ಸಾಹಿತ್ಯದವರೆಗೆ ಕನ್ನಡ ಸಾಹಿತ್ಯವು ಸದಾ ಬಹುತ್ವವನ್ನು ಉಳಿಸಿಕೊಂಡು ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ನಿರ್ದಿಷ್ಟ ಪಂಥ ಅಥವಾ ಕೇಂದ್ರವಿಲ್ಲದೆ, ಸಾಹಿತ್ಯವು ವಿಕೇಂದ್ರೀಕರಣಗೊಂಡು ಅನೇಕ ಕಾಲುದಾರಿಗಳಾಗಿ ಒಡೆದಿದೆ. ಈ ಬಹುತ್ವದ ನಡುವೆ ಸತ್ಯಗಳು ಛಿದ್ರಗೊಂಡು ಅರಾಜಕತೆ ಸೃಷ್ಟಿಯಾಗದಂತೆ, ಎಲ್ಲ ವಿಭಿನ್ನ ದನಿಗಳನ್ನು ಸಾಮರಸ್ಯದಿಂದ ಒಪ್ಪಿಕೊಳ್ಳುವುದು ಇಂದಿನ ಸಾಹಿತ್ಯದ ಮುಂದಿರುವ ಪ್ರಮುಖ ಸವಾಲಾಗಿದೆ.

Article Details

Section

Research Articles

Author Biography

ಅನುಷ ಹೆಚ್.ಸಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ಜಗದ್ಗುರು ಫಕೀರೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿರಹಟ್ಟಿ, ಗದಗ

How to Cite

ಅನುಷ ಹೆಚ್.ಸಿ. (2026). ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸಮಸ್ಯೆ ಮತ್ತು ಸವಾಲುಗಳು. ಅಕ್ಷರಸೂರ್ಯ (AKSHARASURYA), 13(06), 113 to 122. https://aksharasurya.com/index.php/latest/article/view/633

References

ಸೀತಾರಾಮಯ್ಯ ಎಂ.ವಿ., (2005), ಕವಿರಾಜಮಾರ್ಗಂ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ರಾಮಚಂದ್ರನ್ ಸಿ.ಎನ್., (1990), ವಸಾಹತೋತ್ತರ ಚಿಂತನೆ, ಬೆಂಗಳೂರು: ಅಂಕಿತ ಪುಸ್ತಕ.

ಶ್ರೀಧರ್ ಹೆಗಡೆ ಭದ್ರನ್, (2018), ಸಾಹಿತ್ಯ ಚಳುವಳಿಗಳು, ಬೆಂಗಳೂರು: ಅಭಿನವ ಪ್ರಕಾಶನ.

ರಹಮತ್ ತರೀಕೆರೆ, (2004), ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಅಭಿನವ ಪ್ರಕಾಶನ.

ಮುಗಳಿ ರಂ. ಶ್ರೀ., (1953), ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಗೀತಾ ಬುಕ್ ಹೌಸ್.

ಶಿವರುದ್ರಪ್ಪ ಜಿ.ಎಸ್., (1975), ಕನ್ನಡ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.

ಕೀರ್ತಿನಾಥ ಕುರ್ತಕೋಟಿ, (2008), ಯುಗಧರ್ಮ ಮತ್ತು ಸಾಹಿತ್ಯ ದರ್ಶನ, ಧಾರವಾಡ: ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್.

ಗಿರಡ್ಡಿ ಗೋವಿಂದರಾಜ್, (1981), ಸಾಹಿತ್ಯ ಮತ್ತು ಪರಂಪರೆ, ಬೆಂಗಳೂರು: ಹೇಮಂತ ಪ್ರಕಾಶನ.

ನರಹಳ್ಳಿ ಬಾಲಸುಬ್ರಹ್ಮಣ್ಯ, (2024), ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ, ಬೆಂಗಳೂರು: ಅಭಿನವ ಪ್ರಕಾಶನ.

ಶೇಷಗಿರಿರಾವ್ ಎಲ್.ಎಸ್., (1975), ಹೊಸಗನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.

ಅನಂತನಾರಾಯಣ ಎಸ್., (1962), ಹೊಸಗನ್ನಡ ಕವಿತೆಯ ಮೇಲೆ ಇಂಗ್ಲೀಷ್ ಕಾವ್ಯದ ಪ್ರಭಾವ, ಮೈಸೂರು: ಡಿ.ವಿ.ಕೆ. ಪ್ರಕಾಶನ.