ಜಾಗತೀಕರಣದ ಪ್ರಭಾವದಲ್ಲಿ ಐತಿಹಾಸಿಕ ನಾಟಕಗಳ ಪ್ರಸ್ತುತತೆ: ಒಂದು ಅಧ್ಯಯನ

Main Article Content

ಅನಿತಾ ಪಾಟೀಲ್ ಟಿ.ಹೆಚ್.

Abstract

ಜಾಗತೀಕರಣದ ಹಿನ್ನೆಲೆಯಲ್ಲಿ ಐತಿಹಾಸಿಕ ನಾಟಕಗಳ ಪ್ರಸ್ತುತತೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ಆತ್ಮವಿಶ್ವಾಸ ಮೂಡಿಸುವಲ್ಲಿ ಚಾರಿತ್ರಿಕ ನಾಟಕಗಳು ವಹಿಸಿದ ಪಾತ್ರವನ್ನು ಇಲ್ಲಿ ಚರ್ಚಿಸಲಾಗಿದೆ. ‘ಸಂಸ’ರಿಂದ ಹಿಡಿದು ಕುವೆಂಪು, ಗಿರೀಶ್ ಕಾರ್ನಾಡ್ ಮತ್ತು ಆಧುನಿಕ ನಾಟಕಕಾರರವರೆಗೆ, ಇತಿಹಾಸದ ಸತ್ಯಾಂಶಗಳಿಗೆ ಚ್ಯುತಿ ಬಾರದಂತೆ ಹೇಗೆ ಮಾನವೀಯ ಮೌಲ್ಯಗಳು ಮತ್ತು ರಾಜಕೀಯ ಸಂಘರ್ಷಗಳನ್ನು ರಂಗರೂಪಕ್ಕೆ ತರಲಾಗಿದೆ ಎಂಬುದನ್ನು ವಿವರಿಸಲಾಗಿದೆ. ತುಘಲಕ್, ರಕ್ತಾಕ್ಷಿ, ಮತ್ತು ಕಿತ್ತೂರು ಚೆನ್ನಮ್ಮ ಮುಂತಾದ ನಾಟಕಗಳ ಮೂಲಕ ಇತಿಹಾಸದ ಪುನರ್ಮನನ ಮತ್ತು ಸಮಕಾಲೀನ ಸಮಾಜಕ್ಕೆ ಅವು ನೀಡುವ ಸಂದೇಶಗಳ ಮಹತ್ವವನ್ನು ಲೇಖನವು ಎತ್ತಿ ಹಿಡಿಯುತ್ತದೆ.

Article Details

Section

Research Articles

Author Biography

ಅನಿತಾ ಪಾಟೀಲ್ ಟಿ.ಹೆಚ್.

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು.

References

ಕಲಬುರ್ಗಿ ಎಂ.ಎಂ., (2016), ಖರೇ ಖರೇ ಕಿತ್ತೂರು ಬಂಡಾಯ (ನಾಟಕ), ಧಾರವಾಡ: ಕಲ್ಲಾಪೂರ ಪ್ರಕಾಶನ.

ಉಷಾದೇವಿ ಸಿ.ಜಿ., (2008), ಕನ್ನಡದಲ್ಲಿ ಐತಿಹಾಸಿಕ ನಾಟಕಗಳು, ಮೈಸೂರು: ಉಷಾ ಸಾಹಿತ್ಯ ಮಾಲೆ.

ರಾಜಾನಂದ, (2002), ಸಂಗೊಳ್ಳಿ ರಾಯಣ್ಣ (ನಾಟಕ), ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.