ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಮಹಿಳಾ ಸಂವೇದನೆ

Main Article Content

ಸೌಜನ್ಯ ಎಸ್.ಕೆ.

Abstract

ಬಾನು ಮುಷ್ತಾಕ್ ಅವರ ಸಾಹಿತ್ಯವು ಮುಸ್ಲಿಂ ಮಹಿಳೆಯರ ಅಂತರಾಳದ ದನಿ ಮತ್ತು ಸಾಮಾಜಿಕ ಸಂಘರ್ಷಗಳ ಪ್ರಬಲ ಅಭಿವ್ಯಕ್ತಿಯಾಗಿದೆ. ಪಿತೃಪ್ರಧಾನ ವ್ಯವಸ್ಥೆ, ಧಾರ್ಮಿಕ ಕಟ್ಟುಪಾಡುಗಳು ಮತ್ತು ಬಹುಪತ್ನಿತ್ವದಂತಹ ಅನಿಷ್ಟ ಪದ್ಧತಿಗಳ ನಡುವೆ ನಲುಗುವ ಸ್ತ್ರೀ ಬದುಕನ್ನು ಇವರ ಕಥೆಗಳು ಮಾರ್ಮಿಕವಾಗಿ ಚಿತ್ರಿಸುತ್ತವೆ. ʻಒಮ್ಮೆ ಹೆಣ್ಣಾಗು ಪ್ರಭುವೆʼ, ʻಎದೆಯ ಹಣತೆʼ ಮತ್ತು ʻಬೆಂಕಿಮಳೆʼಯಂತಹ ಕಥೆಗಳ ಮೂಲಕ ಸ್ತ್ರೀಯರ ಅಸಹಾಯಕತೆ, ಬಡತನ ಮತ್ತು ಅಸ್ತಿತ್ವದ ಹೋರಾಟವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಧರ್ಮ ಮತ್ತು ಪರಂಪರೆಯ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ಪ್ರಶ್ನಿಸುವ ಲೇಖಕಿಯ ದಿಟ್ಟ ನಿಲುವುಗಳು ಇಲ್ಲಿ ವ್ಯಕ್ತವಾಗಿವೆ. ಕೇವಲ ಕೌಟುಂಬಿಕ ಚಿತ್ರಣಕ್ಕೆ ಸೀಮಿತವಾಗದೆ, ಹೆಣ್ಣಿನ ಆತ್ಮಗೌರವ, ಪ್ರತಿರೋಧ ಮತ್ತು ಸಾಂವಿಧಾನಿಕ ಹಕ್ಕುಗಳ ಕುರಿತಾದ ಎಚ್ಚರವನ್ನು ಮೂಡಿಸುವಲ್ಲಿ ಬಾನು ಮುಷ್ತಾಕ್ ಅವರ ಕಥಾ ಸಾಹಿತ್ಯದ ಮಹತ್ವವನ್ನು ಗುರುತಿಸಲಾಗಿದೆ.

Article Details

Section

Research Articles

Author Biography

ಸೌಜನ್ಯ ಎಸ್.ಕೆ.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಕೇಂಬ್ರಿಡ್ಜ್ ಕಾಲೇಜು, ಕೆ.ಆರ್. ಪುರಂ, ಬೆಂಗಳೂರು.

How to Cite

ಸೌಜನ್ಯ ಎಸ್.ಕೆ. (2026). ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಮಹಿಳಾ ಸಂವೇದನೆ. ಅಕ್ಷರಸೂರ್ಯ (AKSHARASURYA), 13(06), 75 to 80. https://aksharasurya.com/index.php/latest/article/view/628

References

ಬಾನು ಮುಷ್ತಾಕ್, (2025), ಹಸೀನಾ ಮತ್ತು ಇತರ ಕಥೆಗಳು, ಮೈಸೂರು: ಅಭಿರುಚಿ ಪ್ರಕಾಶನ.

ಅನುಪಮಾ ಎಚ್.ಎಸ್., (2023), ಗಡಿದಾಟಿದ ಹೆಣ್ಣುಗಳ ಕಥನ, ಗದಗ: ಲಡಾಯಿ ಪ್ರಕಾಶನ.

ಬೆಲ್ ಹುಕ್ಸ್ (ಮೂಲ), ಶ್ರೀಮತಿ ಎಚ್.ಎಸ್. (ಅನು), (2020), ಸ್ತ್ರೀವಾದ, ಸುರತ್ಕಲ್: ಸಂಗಾತ ಪುಸ್ತಕ.

ಸಿಮೋನ್ ದ ಬೋವಾ (ಮೂಲ), ಶ್ರೀಮತಿ ಎಚ್.ಎಸ್. (ಅನು), (2017), ದ ಸೆಕೆಂಡ್ ಸೆಕ್ಸ್ (ಸಂಪುಟ 1-4), ಮಂಡ್ಯ: ಸಂಕಥನ.