ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ

Main Article Content

ಮಂಜುನಾಥ ಎನ್. ಜಿ.

Abstract

ಸರ್ವರ ಸಮಾನತೆ ಕಾಪಾಡುವುದು ಇಂದಿನ ಜಗತ್ತಿನ ಬಹುದೊಡ್ಡ ಹೊಣೆಗಾರಿಕೆ. ನಾವೆಲ್ಲರೂ ಹೆಚ್ಚು ಹಣವಂತರಾಗಿ ಹೆಚ್ಚು ಹೆಚ್ಚು ಸುಖ ಸಂತೋಷಗಳನ್ನು ಅನುಭವಿಸಬೇಕೆಂಬ ಸಾರ್ವತ್ರಿಕ ಆಶಯ ಆಧುನಿಕ ಜಗತ್ತಿನ ಕೊಡುಗೆ. ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬ ಮಹಾನುಡಿ ಮನುಷ್ಯನ ಮನಸ್ಸಿನಲ್ಲಿ ಮೂಡಿ ಭಾಷೆಯಲ್ಲಿ ರೂಪಗೊಂಡಿದ್ದು ಶತಶತಮಾನಗಳ ಮಾನಸಿಕ ಮತ್ತು ಸಾಮಾಜಿಕ ವಿಕಾಸದ ಫಲ. ಆಧುನಿಕ ಜಗತ್ತಿನಲ್ಲಿ ಸಮಾನತೆಯ ಕೂಗು ಅತಿ ಹೆಚ್ಚಾಗಿ ಕೇಳಿಬರುತ್ತಿದ್ದರೂ, ಇಲ್ಲಿ ಭೇದಭಾವ ರಾರಾಜಿಸುತ್ತಿದೆ. ಈ ಸಮಾಜದಲ್ಲಿ ಎಷ್ಟೇ ಶಿಕ್ಷಣ, ತಾಂತ್ರಿಕ ಮೊದಲಾದ ಅಭಿವೃದ್ಧಿ ಕಾರ್ಯಗಳು ಘಟಿಸಿದರೂ ಇನ್ನೂ ಪುರುಷ ಮಹಿಳೆಯ ಸಮಾನತೆ ತನ್ನ ಗುರಿ ಮುಟ್ಟುವಲ್ಲಿ ಸಫಲವಾಗಿಲ್ಲವೆಂದೇ ಹೇಳಬಹುದು.
ಮಹಿಳಾ ಸಂವೇದನೆಯ ಕೂಗು ಇಂದು ನಿನ್ನೆಯದಲ್ಲ. ಶತಶತಮಾನಗಳ ಚರಿತ್ರೆಯುಳ್ಳ ಹೋರಾಟ ದಡ ಸೇರುವುದು ಇನ್ನೂ ಯಾವಾಗ? ಇದೊಂದು ಬಗೆಹರಿಯದ ಉತ್ತರ ಸಿಗದ ಪ್ರಶ್ನೆ. ತಾರತಮ್ಯದ ಕೂಪಮಂಡೂಕದಲ್ಲಿ ಸಿಲುಕಿ, ಒದ್ದಾಡುತ್ತಿರುವ ಮಹಿಳಾವರ್ಗ ಮಾನವೀಯ ನೆಲೆಗಟ್ಟಿಗೆ ಬಂದು ಸರ್ವಸಮಾನತೆಯ ಬಾಳ್ವೆ ನಡೆಸುವ ಜರೂರತ್ತು ಇಂದು ಅನಿವಾರ್ಯ. ಈ ನಿಟ್ಟಿನಲ್ಲಿ ಸಾಹಿತ್ಯದ ಸತತ ಪ್ರಯತ್ನದ ಫಲವಾಗಿ ಹುಟ್ಟಿದುದೇ ಈ ‘ಸ್ತ್ರೀ ಸಂವೇದನೆ’ ಎಂಬ ಸಾಹಿತ್ಯ ಸುಧಾರಣೆಯ ಮಂತ್ರ. ಸಾಹಿತ್ಯವೇನೋ ಈ ಮಹಿಳಾ ಸಂವೇದನೆಯ ನಿಟ್ಟಿನಲ್ಲಿ ಇಂದು ಕಾರ್ಯಪ್ರವೃತ್ತವಾಗಿದ್ದರೂ ಈ ಸಮಾನತೆ ಸಾಕಾರತೆ ಇನ್ನೂ ಗುರಿ ತಲುಪಿಲ್ಲ. ಈ ದಾರಿಯಲ್ಲಿ ಸಮಸ್ಯೆಗಳ ಸಾಕು ಬೇಕುಗಳೇ ಎದುರಾಗುತ್ತಿರುವುದು ವಿಷಾದನೀಯ ಸಂಗತಿ. ಏನೇ ಸಮಸ್ಯೆಗಳಿದ್ದರೂ ಎಲ್ಲವನ್ನೂ ಮೆಟ್ಟಿನಿಂತು ಪುರುಷ ಮಹಿಳಾ ಸಮಾನತೆಯನ್ನು ಸಾಧಿಸುವುದು ಮುಖ್ಯ. ಆಧುನಿಕೋತ್ತರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಪಕ್ಷಿನೋಟವೇ ಈ ಪುಟ್ಟ ಲೇಖನ.

Article Details

Section

Research Articles

Author Biography

ಮಂಜುನಾಥ ಎನ್. ಜಿ.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ.

References

ವೈದೇಹಿ, (2007), ಕಥೆಗಳು ಮತ್ತು ಕವಿತೆಗಳು, ಬೆಂಗಳೂರು: ಅಂಕಿತ ಪುಸ್ತಕ.

ತೇಜಸ್ವಿನಿ ನಿರಂಜನ, (2001), ಸ್ತ್ರೀವಾದ ಮತ್ತು ಸಾಹಿತ್ಯ, ಹೆಗ್ಗೋಡು: ಅಕ್ಷರ ಪ್ರಕಾಶನ.

ಶಿವಪ್ರಕಾಶ ಎಚ್.ಎಸ್. (ಸಂ), (1998), ಆಧುನಿಕ ಕನ್ನಡ ಸಾಹಿತ್ಯ ಚಳುವಳಿಗಳು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.

ಭಗವಾನ್ ಕೆ.ಎಸ್., (2004), ಸ್ತ್ರೀವಾದ: ಪರಿಕಲ್ಪನೆ ಮತ್ತು ಚಿಂತನೆ, ಮೈಸೂರು: ಅಭಿರುಚಿ ಪ್ರಕಾಶನ.

ಶಶಿಕಲಾ ವೀರಯ್ಯ, (2003), ಕನ್ನಡದಲ್ಲಿ ಸ್ತ್ರೀವಾದಿ ಸಾಹಿತ್ಯ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ವಸಂತಕುಮಾರಿ, (2006), ಆಧುನಿಕ ಕನ್ನಡ ಮಹಿಳಾ ಬರಹ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್.

ವಿಜಯಾ ದಬ್ಬೆ, (2002), ಸ್ತ್ರೀವಾದದ ನೋಟಗಳು, ಹೆಗ್ಗೋಡು: ಅಕ್ಷರ ಪ್ರಕಾಶನ.

ನಾಗವೇಣಿ, (2010), ಆಧುನಿಕ ಕನ್ನಡ ಮಹಿಳಾ ಕಾವ್ಯ ಅಧ್ಯಯನ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.