ಸೋಲಿಗರ ಸಾಹಿತ್ಯ-ಸಂಸ್ಕೃತಿಯಲ್ಲಿ ಪ್ರಾಣಿಪ್ರಪಂಚ

Main Article Content

ವೀರಣ್ಣ ಎಂ. ಡಿ.

Abstract

ಅರಣ್ಯವಾಸಿಗಳಾದ ಸೋಲಿಗರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು, ಅವರ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಪ್ರಾಣಿ ಪ್ರಪಂಚವು ಪ್ರಮುಖ ಸ್ಥಾನವನ್ನು ಪಡೆದಿದೆ. ಗೋರುಕಾನ ಮತ್ತು ಹಾಡುಕೆಗಳಲ್ಲಿ ಬರುವ ಗೆಜ್ಜಲಕ್ಕಿ, ಆನೆ, ಹುಲಿ, ಕರಡಿ ಮುಂತಾದ ಪ್ರಾಣಿಗಳ ರೂಪಕಗಳು ಅವರ ಜೀವನದ ಮೌಲ್ಯಗಳನ್ನು ಮತ್ತು ದಾಂಪತ್ಯದ ಅರ್ಥವನ್ನು ವಿವರಿಸುತ್ತವೆ. ಬೇಟೆಗಾರಿಕೆ, ಪ್ರಾಣಿಗಳ ಚಲನವಲನಗಳ ಜ್ಞಾನ ಮತ್ತು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಬಳಸುವ ಮಂತ್ರಗಳು ಸೋಲಿಗರ ಆಳವಾದ ಪರಿಸರ ಜ್ಞಾನಕ್ಕೆ ಸಾಕ್ಷಿಯಾಗಿವೆ. ಮಾದೇಶ್ವರನ ಓಲೆಗ ಮತ್ತು ಗಿಡಮೂಲಿಕೆ ಔಷಧಿ ನೀಡುವ ಸಂದರ್ಭದಲ್ಲಿ ಬಳಸುವ ಮಂತ್ರಗಳಲ್ಲಿ ಪ್ರಾಣಿಗಳನ್ನು ದೈವಿಕವಾಗಿಯೂ, ಸಾಂಕೇತಿಕವಾಗಿಯೂ ಬಳಸಿಕೊಳ್ಳುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ. ಇದು ಬುಡಕಟ್ಟು ಜನರ ಬದುಕು, ನಂಬಿಕೆ ಮತ್ತು ಪರಿಸರ ಪ್ರಜ್ಞೆಯ ಮೇಲೆ ಬೆಳಕು ಚೆಲ್ಲುತ್ತದೆ.

Article Details

Section

Research Articles

Author Biography

ವೀರಣ್ಣ ಎಂ. ಡಿ.

ಸಂಶೋಧಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು.

How to Cite

ವೀರಣ್ಣ ಎಂ. ಡಿ. (2023). ಸೋಲಿಗರ ಸಾಹಿತ್ಯ-ಸಂಸ್ಕೃತಿಯಲ್ಲಿ ಪ್ರಾಣಿಪ್ರಪಂಚ. ಅಕ್ಷರಸೂರ್ಯ (AKSHARASURYA), 2(02), 63 to 67. https://aksharasurya.com/index.php/latest/article/view/61

References

ಚಂದ್ರುಕಾಳೇನಹಳ್ಳಿ, ಸೋಲಿಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 1993.

ನಾಗರಾಜಪ್ಪ ಎಚ್., ಅಳಿವಿನಿಂಚಿನಲ್ಲಿರುವ ಬುಡಕಟ್ಟು ಪ್ರವೃತ್ತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2019.

ಬೋರಲಿಂಗಯ್ಯ ಹಿ.ಚಿ (ಡಾ.), ಬುಡಕಟ್ಟು ದೈವಾರಾಧನೆ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, 2000.

ಮಹೇಶ್, ಆರ್., ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜಾನಪದ, ಪಿಎಚ್.ಡಿ ಮಹಾಪ್ರಬಂಧ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 2018.

ವೀರಣ್ಣ ಎಂ.ಡಿ, ಗಿರಿಜನರ ವೈದ್ಯಪದ್ಧತಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2016.

Most read articles by the same author(s)