ಕಲಬುರಗಿಯ ಹಜ್ರತ್ ಸಯ್ಯದ್ ಮಹ್ಮದ ಹುಸೇನಿ
Abstract
ಹೈದ್ರಬಾದ ಕರ್ನಾಟಕದ ಸೂಫಿಗಳಲ್ಲಿ ಬಂದೇನವಾಜರು ಒಬ್ಬರು. ಇವರು ಸೂಫಿ ನಾಸಿರುದ್ದೀನ ಚಿಸ್ತಿಯ ಪರಮ ಶಿಷ್ಯರಾಗಿದ್ದರು. ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಖ್ಯಾತಿಯನ್ನು ಹೊಂದಿದ್ದಾರೆ. ಬಂದೇನವಾಜರು ಹಿಂದು-ಮುಸ್ಲಿಮನ ಏಕತ್ವದಿಂದ ಕೂಡಿರುವುದರಿಂದ ಅವರಿಗೆ ಬಹುದೊಡ್ಡ ಶಿಷ್ಯ ಪರಂಪರೆ ಹಾಗೂ ಭಕ್ತ ಸಮೂಹವು ಬೆಳೆಯಲು ಪ್ರಮುಖ ಕಾರಣವಾಯಿತು. ಇವರ ಉರುಸಿನ ಸಂದರ್ಭದಲ್ಲಿ ಮೂಲೆ ಮೂಲೆಗಳಿಂದ ಸಹಸ್ರಾರು ಜನರು ಆಗಮಿಸಿ ಸಂತನ ದರ್ಶನವನ್ನು ಪಡೆಯುತ್ತಾರೆ. ದರ್ಶನ ಪಡೆಯಲು ಬಂದ ಅನುಯಾಯಿಗಳು ಅವರವರ ಸಂಪ್ರದಾಯದಂತೆ ಏಕಕಾಲಕ್ಕೆ ನಡೆಯುತ್ತಿದೆ. ಇದು ನೋಡುಗರಿಗೆ ಭಿನ್ನವಾಗಿ ಕಂಡರು ಆಚರಣೆಯಲ್ಲಿ ತಲ್ಲೀನರಾದ ಸಮುದಾಯಗಳಿಗೆ, ಶ್ರಮೀಕÀವರ್ಗಗಳಿಗೆ ತಾರತಮ್ಯವೆಂದು ಭಾವಿಸುವುದಿಲ್ಲ. ಅದರ ಗೋಜಿಗೂ ಹೋಗುವುದಿಲ್ಲ. ಪೂಜೆ ಹಾಗೂ ಓದಿಕೆಯು ಏಕಕಾಲಕ್ಕೆ ನಡೆಯುತ್ತಿರುವುದರಿಂದ ವೈಚಾರಿಕತೆಯಿಂದ ನಡೆದು ಬಂದವನಿಗೆ ಜವಾಬು ನೀಡಿದಂತೆ ಅನಿಸುತ್ತದೆ.
ಉರುಸಗಳಲ್ಲಿ ನಡೆಯುವ ಕೆಲವು ಸಾಮಾನ್ಯ ಆಚರಣೆಗಳು ಸಕ್ಕರೆ ಮಾಲ್ದಿ, ಹೂವು, ಗಂಧ, ಲೋಭಾ, ಊದುಬತ್ತಿ ಇಟ್ಟು ‘ಫತ್ತೇಹಾ’ (ಫಾತೇಹ) ಮಾಡಿಸುವುದು, ಹರಕೆಯನ್ನು ಸಲ್ಲಿಸುವಾಗ ಒದ್ದೆ ಬಟ್ಟೆಯಲ್ಲಿ ದರ್ಗಾದವರಿಗೂ ದೀಡ್ ನಮಸ್ಕಾರ ಹಾಕುವುದು, ಚಾಲ ಜೌಳ ತೆಗೆಯುವುದು ದರ್ಗಾ ಮತ್ತು ಸುತ್ತು ಹಾಕುವುದು ಜೀವನದ ಒಂದು ಭಾಗದಂತೆ ಅನುಸರಿಸುತ್ತಾರೆ. ಇದೊಂದು ರೀತಿ ಮೂಡನಂಬಿಕೆಯಾಗಿ ಕಾಣಬಹುದು. ಇದನ್ನೇ ನಾವು ಶ್ರಮೀಕ ವರ್ಗಗಳು ಯಾಕೆ ನಂಬಿಕೊಂಡು ಇಂತಹ ಗದ್ದುಗೆ, ದರ್ಗಾಗಳಲ್ಲಿ ಮಂಡೆಯೂರಿ ಕುಳಿತುಕೊಂಡು ಬದುಕುತ್ತವೆ? ಅದರೊಂದಿಗೆ ಅಫೀಲು ಮಾಡಿಕೊಂಡು ಒಪ್ಪಿಸುತ್ತೆವೆ? ಎಂಬುದನ್ನು ಗ್ರಹಿಸಲು ತಾಯ್ತನವು ಹೊಂದಿರಬೇಕು. ಹಾಗೆಯೇ ಈ ಉರುಸ್‌ಗಳಲ್ಲಿ ವಚನಗಳನ್ನು, ತತ್ವಪದಗಳನ್ನು, ಗೀತೆಗಳನ್ನು, ಜನಪದ ಹಾಡುಗಳನ್ನು ಹಾಗೂ ಖವಾಲಿಗಳನ್ನು ಹಾಡುವುದರ ಮೂಲಕ ಗೇಸುದರಾಜ ಪವಾಡಗಳನ್ನು ತಿಳಿಸುವರು. ಅವರ ಪವಾಡಗಳನ್ನು ಜನರು ಇಂದಿಗೂ ಸಹ ಮೆಲುಕು ಹಾಕಿಕೊಂಡು ಬದುಕುತ್ತಿರುತ್ತಾರೆ.