ರಾಮನಗರ ತಾಲ್ಲೂಕಿನ ಜನಪದ ಗದ್ಯ ಸಾಹಿತ್ಯ: ಒಂದು ಅವಲೋಕನ

Authors

  • ತಿಮ್ಮೇಗೌಡ ಬಿ.ಪಿ. ಸಂಶೋಧನಾ ವಿದ್ಯಾರ್ಥಿ, ಎಸ್.ಜೆ.ಬಿ.ಸಿ.ಎಂ.ಎಸ್. ಕನ್ನಡ ಸಂಶೋಧನಾ ಕೇಂದ್ರ, ಬೆಂಗಳೂರು.

Keywords:

ತಾರ್ಕಿಕ, ಭೇರಿದುಂದುಭಿ, ನಗಾರಿ ಹಂಗು, ದೇವರಗುಡ್ಡ, ಆರ್ಕಡ್ಡಿ ಕ್ಕಾಲ್ಗಡ್ಡಿ, ತಟ್ಕದ್ಧಿ ಓನಾಟು ಭೂತಾಳೆ, ಹಾಲವಾಣ, ಬಿದಿರಿನ ತಟಿಕೆ ಒಕ್ಕಲು

Abstract

ಪರಂಪರಾಗತವಾಗಿ ಬಾಯಿಂದ ಬಾಯಿಗೆ ಬಂದ ಶಾಬ್ದಿಕ ಅಭಿವ್ಯಕ್ತಿಯನ್ನು ಜನಪದ ಸಾಹಿತ್ಯ ಎಂದು ಕರೆಯಬಹುದು. ಜನಪದ ಸಾಹಿತ್ಯ ಎಂಬುದು ʼಜನಪದರು ದಿನನಿತ್ಯದ ಕಾಯಕದಿಂದ ವಾಸಿಸುವ ಪರಿಸರದಿಂದ ಬದುಕಿನ ಪಲ್ಲಟಗಳು, ಹತಾಶೆ, ನೋವು ಸಿಟ್ಟು ಸೆಡವುಗಳಿಂದ ರೂಪುಗೊಂಡಿರುವಂತದ್ದು. ಜನಪದ ಸಾಹಿತ್ಯ ಬೇರೆಯಲ್ಲ ಇವರ ಬದುಕು ಬೇರೆಯಲ್ಲʼ ಎಂಬುದು ಗಮನಾರ್ಹ ವಿಚಾರವಾಗಿದೆ. ಜನಪದರಲ್ಲಿ ಪದ್ಯಸಾಹಿತ್ಯದಷ್ಟೇ ಗದ್ಯಸಾಹಿತ್ಯವು ಕೂಡಾ ನಿತ್ಯದಲ್ಲಿ ಬಳಕೆಯಾಗುವಂತದ್ದು. ಜನಪದ ಸಾಹಿತ್ಯ ಪ್ರಕಾರದಲ್ಲಿ ಗದ್ಯಸಾಹಿತ್ಯವು ಹಲವು ಆಯಾಮಗಳನ್ನು ಒಳಗೊಂಡಿರುವಂತದ್ದು. ಇಂತಹ ಸಾಹಿತ್ಯದಲ್ಲಿ ಗಾದೆಗಳು ಒಗಟುಗಳು, ಒಡಪುಗಳು, ಕಥೆಗಳು ಇತ್ಯಾದಿಗಳನ್ನು ಕಾಣಬಹುದು.

ಪ್ರಸ್ತುತ ಲೇಖನದಲ್ಲಿ ರಾಮನಗರ ತಾಲ್ಲೂಕಿನಲ್ಲಿ ಪ್ರಚಲಿತದಲ್ಲಿರುವ ಜನಪದ ಗದ್ಯ ಸಾಹಿತ್ಯವನ್ನು ಸಂಕ್ಷಿಪ್ತವಾಗಿ ಅವಲೋಕಿಸಲಾಗಿದ್ದು, ತಾಲ್ಲೂಕಿನಲ್ಲಿ ಜನಪದ ಸಾಹಿತ್ಯದ ಹುಟ್ಟಿಗೆ ಹೊಲಗದ್ದೆಗಳಲ್ಲಿನ ದುಡಿಮೆ, ಹಬ್ಬಹರಿದಿನಗಳು, ಜಾತ್ರೆಯ ಆಚರಣೆಯ ಭಾಗವಾಗಿ, ಮಹದೇಶ್ವರ ಮತ್ತು ಮಂಟೇಸ್ವಾಮಿಯ ಆಚರಣೆಗಳು, ಜನಪದರ ಮನಸ್ಸಿನ ಹತಾಶೆ, ಸಿಟ್ಟು, ಸಂತೋಷಗಳು, ನಿತ್ಯ ಜೀವನದ ಜಂಜಾಟಗಳು, ಸಹಜೀವನ, ಗ್ರಾಮೀಣ ಜನಜೀವನ ಕಾರಣವಾಗಿವೆ ಎಂದು ಸರಳವಾಗಿ ಹೇಳಬಹುದು.

References

ಪಾರ್ಥ ಅಂಕನಹಳ್ಳಿ, (2008), ರಾಮನಗರ: ಒಂದು ಸಾಂಸ್ಕೃತಿಕ ಅಧ್ಯಯನ, ಅಂಕನಹಳ್ಳಿ ಪ್ರಕಾಶನ, ರಾಮನಗರ.

ಲಿಂಗಯ್ಯ ಡಿ., ಸಂಧ್ಯಾರೆಡ್ಡಿ ಕೆ. ಆರ್. (ಸಂ), (2006), ಜಾನಪದ ಸ್ವರೂಪ ಮತ್ತು ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ವಿವೇಕ ರೈ, (2000), ತುಳು ಗಾದೆಗಳು, ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು.

ತಪಸ್ವೀಕುಮಾರ್ ಎನ್., (2000), ಕನ್ನಡ ಗಾದೆಗಳ ಸಮೀಕ್ಷೆ, ಚೇತನ ಬುಕ್ ಹೌಸ್, ಬೆಂಗಳೂರು.

ಲಕ್ಕಪ್ಪಗೌಡ ಎಚ್.ಜಿ. (ಸಂ), (1996), ಜಾನಪದ ಕೈಪಿಡಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಪರಮಶಿವಯ್ಯ ಜೀ.ಶಂ., (1998), ಕನ್ನಡ ಒಗಟುಗಳು, ಸಾಹಿತ್ಯಸದನ, ಮೈಸೂರು.

ಜವರೇಗೌಡ ದೇ., (1976), ಜಾನಪದ ಅಧ್ಯಯನ, ಡಿ.ವಿ.ಕೆ. ಪ್ರಕಾಶನ, ಮೈಸೂರು.

ಚಲುವೇಗೌಡ ತ.ಚಿ., (1978), ಕೆಲವು ಜನಪದ ಸಂಪ್ರದಾಯಗಳು, ತಳಗವಾದಿ ಪ್ರಕಾಶನ, ಮೈಸೂರು.

ಲಕ್ಕಪ್ಪಗೌಡ ಎಚ್.ಜಿ. (ಸಂ), (1996), (1983), ಒಗಟುಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಶಿವಸ್ವಾಮಿ ಜೆ., (1987), ರಾಮನಗರ ತಾಲ್ಲೂಕು ದರ್ಶನ, ಐಬಿಎಚ್ ಪ್ರಕಾಶನ, ಬೆಂಗಳೂರು.

Downloads

Published

09.01.2025

How to Cite

ತಿಮ್ಮೇಗೌಡ ಬಿ.ಪಿ. (2025). ರಾಮನಗರ ತಾಲ್ಲೂಕಿನ ಜನಪದ ಗದ್ಯ ಸಾಹಿತ್ಯ: ಒಂದು ಅವಲೋಕನ. AKSHARASURYA, 5(05), 94 to 107. Retrieved from https://aksharasurya.com/index.php/latest/article/view/580

Issue

Section

ಸಂಶೋಧನಾ ಲೇಖನಗಳು. | RESEARCH ARTICLE.