ವೈದೇಹಿಯವರ ಕಥಾ ಸಾಹಿತ್ಯದ ವಿಶಿಷ್ಟತೆ
Main Article Content
Abstract
ನವೋತ್ತರ ಕಾಲಘಟ್ಟದ ಪ್ರಮುಖ ಬರೆಹಗಾರ್ತಿ ವೈದೇಹಿಯವರ ಕಥಾಸಾಹಿತ್ಯವು ಸ್ತ್ರೀ ಸಂವೇದನೆ ಮತ್ತು ಕೌಟುಂಬಿಕ ಸಂಬಂಧಗಳ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತದೆ. ಇವರ ಕತೆಗಳು ಕೇವಲ ಕಲ್ಪಿತವಾಗಿರದೆ, ವಾಸ್ತವ ಬದುಕಿನ ನೈಜ ಚಿತ್ರಣಗಳನ್ನು ಒಳಗೊಂಡಿವೆ. 'ಅಂತರಾಳದ ಬದುಕು', 'ವಾಣಿಮಾಯಿ', 'ಅಮ್ಮಚ್ಚಿಯೆಂಬ ನೆನಪು' ಮುಂತಾದ ಕತೆಗಳಲ್ಲಿ ಕಂಡುಬರುವ ಸ್ತ್ರೀ ಪಾತ್ರಗಳು, ಅವರು ಎದುರಿಸುವ ಸಾಮಾಜಿಕ ಹಾಗೂ ಕೌಟುಂಬಿಕ ಬಿಕ್ಕಟ್ಟುಗಳನ್ನು ಲೇಖಕಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಗದ್ಯದಲ್ಲೂ ಕಾವ್ಯಗುಣವನ್ನು ಮೇಳೈಸುವ ಇವರ ಶೈಲಿ ವಿಶಿಷ್ಟವಾದುದು. ಶೋಷಣೆ, ಅಸಹಾಯಕತೆ ಮತ್ತು ಅಸ್ತಿತ್ವದ ಹುಡುಕಾಟವನ್ನು ಬಿಂಬಿಸುವ ಈ ಬರಹಗಳು, ಓದುಗರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮತ್ತು ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುತ್ತವೆ. ಪಾತ್ರಗಳ ಮನದಾಳದ ತಲ್ಲಣಗಳನ್ನು ಮತ್ತು ಬದುಕಿನ ಸಂಕೀರ್ಣತೆಗಳನ್ನು ಬಿಡಿಸಿ ತೋರುವುದು ಇವರ ಸಾಹಿತ್ಯದ ಮುಖ್ಯ ಉದ್ದೇಶವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ವೈದೇಹಿ, 2000, ಅಮ್ಮಚ್ಚಿಯೆಂಬ ನೆನಪು, ಅಕ್ಷರ ಪ್ರಕಾಶನ, ಹೆಗ್ಗೋಡು.
ವೈದೇಹಿ, 2005, ಕ್ರೌಂಚ ಪಕ್ಷಿಗಳು, ಅಕ್ಷರ ಪ್ರಕಾಶನ, ಹೆಗ್ಗೋಡು.
ವೈದೇಹಿ, 2013, ಕತೆ ಕತೆ ಕಾರಣ, ಅಕ್ಷರ ಪ್ರಕಾಶನ, ಹೆಗ್ಗೋಡು.
ಮುರಳೀಧರ ಉಪಾಧ್ಯ ಹಿರಿಯಡಕ (ಸಂ), 2018, ವೈದೇಹಿ ಜೀವನ ಮತ್ತು ಕೃತಿಗಳ ಸಮೂಹ ಶೋಧ.
ಅಶೋಕ ಟಿ.ಪಿ, 2013, ವೈದೇಹಿ ಕಥನ, ಅಕ್ಷರ ಪ್ರಕಾಶನ, ಹೆಗ್ಗೋಡು.
ತಾರಿಣಿ ಶುಭದಾಯಿನಿ ಮತ್ತು ಸವಿತಾ ನಾಗಭೂಷಣ (ಸಂ.), 2019, ಇರುವಂತಿಗೆ, ವೈದೇಹಿ ಗೌರವ ಗ್ರಂಥ ಸಮಿತಿ, ಶಿವಮೊಗ್ಗ.