ಬಂಜಾರರ ಸಾಂಪ್ರದಾಯಿಕ ಸ್ಥಿತ್ಯಂತರ
Keywords:
ಜಿಪ್ಸಿ, ಗೋರ್ ಮಾಟಿ, ಗೋರ್ ಬೋಲಿ, ಅಸ್ಮಿತೆ, ಸಂಸ್ಕೃತಿ, ಚೂಡೋAbstract
ಜನಪದ ಸಾಹಿತ್ಯವೂ ಆಕಾಶದಷ್ಟೇ ವಿಶಾಲ, ಸಾಗರದಷ್ಟೇ ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಗಟು, ಒಡಪು, ಕಥೆ, ಲಾವಣಿ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನಲ್ಲಿ ಸಾಹಿತ್ಯದ ಮೂಲವನ್ನೇಲ್ಲಾ ಜನಪದ ಸಾಹಿತ್ಯದಲ್ಲಿ ಕಾಣಬಹುದು. ಹೀಗಾಗಿ ಬಿ.ಎಂ.ಶ್ರೀರವರು ಜನಪದ ಸಾಹಿತ್ಯವನ್ನು ‘ಜನವಾಣಿ ಬೇರು, ಕವಿವಾಣಿ ಹೂವು’ ಎಂದುಕರೆದಿದ್ದಾರೆ. ಈ ನಾಡಿನ ಶ್ರಮ ಸಂಸ್ಕೃತಿಯ ಪ್ರತೀಕವಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ಲಂಬಾಣಿಗರು ನಂಬಿಕೆಗೆ ಹೆಸರಾದವರು. ನಂಬಿದವರ ಪಾಲಿನ ಅಂಗರಕ್ಷಕರಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಾದರೂ, ಮತ್ತೊಬ್ಬರನ್ನು ಕಾಪಾಡುವ ಗುಣವನ್ನು ಹೊಂದಿದವರು. ತಮ್ಮ ಪ್ರಾಮಾಣಿಕತೆಯಿಂದ ಬದುಕುವ ಇವರು ಸಾಹಸಿಗಳು. ಏಕೆಂದರೆ ಇದೊಂದು ಅಖಿಲ ಭಾರತ ವ್ಯಾಪ್ತಿಯ ಅಲೆಮಾರಿ ಗುಂಪು. ಭಾರತದಲ್ಲಿ ಸುಮಾರು ೮೩೦ ಬುಡಕಟ್ಟುಗಳಿವೆ. ಅದರಲ್ಲಿ ಅತೀ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಂಡು ತನ್ನೊಡಲಲ್ಲಿ ಇರಿಸಿಕೊಂಡಿದೆ. ತಮ್ಮದೇ ಆದ ವಿಶಿಷ್ಟ ವರ್ಣರಂಜಿತ ವೇಷ ಭೂಷಣಗಳನ್ನು ಹೊಂದಿ, ನೋಡಿದ ತಕ್ಷಣವೇ ಲಂಬಾಣಿಗರು ಎಂದು ಮನಸೆಳೆಯುವ ವಿಶೇಷತೆಯನ್ನು ಇವರು ಹೊಂದಿದ್ದಾರೆ. ಅವರ ವೈವಿಧ್ಯಮಯ ಜನಪದ ಸಾಹಿತ್ಯವಂತೂ ಯಾರು ಕೃಷಿ ಮಾಡದಕನ್ನೆ ನೆಲ. ಕೈಹಾಕದ ತುಂಬು ಕಣಜ.
ಭಾರತದ ಹಲವಾರು ಬುಡಕಟ್ಟುಗಳು ತಮ್ಮ ಸಮುದಾಯವನ್ನು ಸಂರಕ್ಷಿಸಿದ, ಅನ್ಯರ ದಾಳಿಯಿಂದ ಕಾಪಾಡಿದ, ತಮ್ಮ ಸಂಸ್ಕೃತಿಯ ಅನನ್ಯತೆಯನ್ನು ಸೃಷ್ಟಿಸಿದ ವೀರರು ಮತ್ತು ಸಾಂಸ್ಕೃತಿಕ ನಾಯಕರನ್ನು ದೈವವೆಂದು ಆರಾಧಿಸುವುದನ್ನು ಕಾಣುತ್ತೇವೆ. ಮಂಟೆಸ್ವಾಮಿ, ಕಾಡುಗೊಲ್ಲರ ಯತ್ತಪ್ಪ-ಜುಂಜಪ್ಪ, ಕುರುಬರ ಮೈಲಾರಲಿಂಗ, ಮಲೆಯ ಮಾದೇಶ್ವರ ಮೊದಲಾದವರ ಸಾಲಿಗೆ ಲಂಬಾಣಿ ಬುಡಕಟ್ಟಿನ ಆರಾಧ್ಯದೈವ ಸಂತ ಸೇವಾಲಾಲ್ ಅವರೂ ಸೇರುತ್ತಾರೆ.
ಸೇವಾಲಾಲರು ಒಬ್ಬ ಮಹಾಯೋಗಿ, ಮಹಾಜ್ಞಾನಿ, ವಿಭೂತಿ ಪುರುಷ, ಪವಾಡ ಪುರುಷ, ಕಾಲಜ್ಞಾನಿ, ದಾರ್ಶನಿಕ, ಅರಣ್ಯವಾಸಿಗಳ ಉದ್ಧಾರಕ, ಸಮಾಜ ಸುಧಾರಕ (ಆಯಿವಾಳೊ, ಜೊಡವಾಳೋ, ಝಾಂಡಿವಾಳೋ, ಗೇನೀಬಾಪು, ಬಾವಾಲಾಲ) ಮುಂತಾದ ಗುಣ, ರೂಪಗಳಿಂದ ಬಂಜಾರ (ಲಂಬಾಣಿ) ಸಮುದಾಯದಲ್ಲಿ ವರ್ಣಿಸಲ್ಪಡುತ್ತಾರೆ. ಸೇವಾಲಾಲರು ಅಂದಿನ ಕಾಲದಲ್ಲಿಯೇ ಭಾರತ ದೇಶಾದ್ಯಂತ ಪರ್ಯಟನೆ ಮಾಡಿ ಸಮಾಜ ಸಂಘಟನೆ, ಸಮಾಜ ಸುಧಾರಣೆಯ ಮತ್ತು ಧರ್ಮ ಬೋಧನೆ ಮಾಡುತ್ತ ಅಲೆಮಾರಿ ಜೀವನ ನಡೆಸುತ್ತಿದ್ದ ಬಂಜಾರ ಸಮುದಾಯದವರನ್ನು ಜಾಗೃತಗೊಳಿಸಿದ್ದಾರೆ.
References
ಸದ್ಗುರು ಸೇವಾಲಾಲ್ ಮಹಾರಾಜ್. ಗೋರ್ ಸಿಕ್ವಡಿ (ಸಂ). (2018). ಗೋರ್ ಬಂಜಾರರ ಪೊರಿಯಾತಾರ. ಶಿವಮೊಗ್ಗ.
ಹರಿಲಾಲ ಪವಾರ. (2015). ಬದುಕೊಂದು ಚಿತ್ತಾರ ಲಂಬಾಣಿ ಬುಡಕಟ್ಟು. ಪ್ರಸಾರಂಗ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.
ಕರ್ನಾಟಕ ಬುಡಕಟ್ಟುಗಳು: ಸಂಪುಟ-೨. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ. ಬೆಂಗಳೂರು
ನಾಯಕ ಡಿ. ಬಿ. (2022). ಲಂಬಾಣಿ ಸಂಸ್ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಪಂಡಿತ ಕೆ. ರಾಠೋಡ. (2011). ಬಂಜಾರ ಸಂಸ್ಕೃತಿ ಕಥನ. ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.
ಸಣ್ಣರಾಮ. (1999). ಲಂಬಾಣಿ ಸಂಸ್ಕೃತಿ. ನೇಕಾರರ ಪ್ರಕಾಶನ. ಸೊರಬ.
ಪಂಡಿತರಾಠೋಡ. (2013). ಗಾದಿವಾಳೊ ಸಂತಸೇವಾಲಾಲ. ಶುಭಚಂದ್ರ ಪ್ರಕಾಶನ. ಧಾರವಾಡ.
ಶುಭಾ ಮರವಂತೆ (ಸಂ). ಯಶೋಧ ಬಾಯಿ (ಲೇ). (2019). ಬಹುತ್ವ ಸಂಕಥನ. ಗೀತಾಂಜಲಿ ಪುಸ್ತಕ ಪ್ರಕಾಶನ. ಶಿವಮೊಗ್ಗ.
ಕಾಳೇಗೌಡ ನಾಗವಾರ ಮತ್ತು ಬೋರಲಿಂಗಯ್ಯ ಹಿ. ಚಿ. (2000). ಗಿರಿಜನ ಕಾವ್ಯ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ. ಬೆಂಗಳೂರು.
ನಾಯಕ ಡಿ. ಬಿ. (2000). ಲಂಬಾಣಿ ಜನಪದ ಸಾಹಿತ್ಯ. ಬಂಜಾರ ಪ್ರಕಾಶನ. ಗುಲಬರ್ಗ.
ಪಂಡಿತ ರಠೋಡ. (2016). ಬಂಜಾರ ಸಂಸ್ಕೃತಿ ಅಧ್ಯಯನ. ಶುಭಚಂದ್ರ ಪ್ರಕಾಶನ. ಧಾರವಾಡ.
ಮಲ್ಲಿಕಾರ್ಜನ ನಾಯ್ಕ ಬಿ. ಎಚ್. (2002). ಶ್ರೀ ಸೇವಾಲಾಲ ಚರಿತ್ರೆ. ಯೋಗೇಶ್ವರ ಪ್ರಕಾಶನ. ಕೊಮಾರಹಳ್ಳಿ ತಾಂಡ.
ಸಣ್ಣರಾಮ. (1999). ಲಂಬಾಣಿ-ಸಂಸ್ಕೃತಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.