ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರ ಆಲೋಚನ ಕ್ರಮಗಳು
Keywords:
ಸಾಹಿತ್ಯ ಚಹರೆ, ಕಥಾ ಸಾಹಿತ್ಯ, ಕನ್ನಡ ಭಾಷೆ, ಆಧುನಿಕತೆ, ಮನೋಹಿರಿಮೆAbstract
ಕನ್ನಡ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಶ್ರೇಷ್ಠತಮವಾದ ಸಾಹಿತ್ಯ ಪರಂಪರೆಯಿದೆ. ಜನಪರ ಆಲೋಚನಾ ಕ್ರಮಗಳನ್ನು ಹೊಂದಿದ್ದು ಜೀವನಾನುಭವದ ಗಟ್ಟಿ ಸೆಲೆಯೊಂದಿಗೆ ಈ ಮಣ್ಣಿನ ನಾಡಿಮಿಡಿತವನ್ನು ಅರಿಯುವ ಶಕ್ತಿ ಇದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಗೆ ತನ್ನದೇ ಆದ ಸ್ವರೂಪ, ಸಂಸ್ಕೃತಿಯ ಮನೋಹಿರಿಮೆ ಹಾಗೂ ಜನಪರ ಆಲೋಚನ ಪರಂಪರೆ ಮತ್ತು ಚಹರೆಗಳಿರುವಂತೆ ಕನ್ನಡ ಸಾಹಿತ್ಯಕ್ಕೂ ಕೂಡ ತನ್ನದೇ ಸಾಮಾಜಿಕ ಆಯಾಮಗಳಿವೆ.
ಒಂದು ನಾಗರಿಕತೆಯ ಪರಂಪರೆಯ ಪ್ರಭಾವಳಿಯಲ್ಲಿ ಬೆಳೆದ ಸಾಹಿತ್ಯ ತನ್ನ ಸಮಾಜದ ನಾಡಿಮಿಡಿತದೊಂದಿಗೆ ಅಗಾಧವಾದ ಜೀವನ ರಸಗಂಗೆಯೊಂದಿಗೆ ಅನಂತಕಾಲ ಪಯಣಿಸಿ; ಹಲವು ಕಾಲಘಟ್ಟದಲ್ಲಿ ಅನಂತ ಬದುಕಿಗೆ ಮಾರ್ಗದರ್ಶಿಯಾಗಿ ತನ್ನೊಡಲನ್ನು ತೆರೆದಿಡುವ ಕೆಲಸ ಮಾಡುತ್ತದೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಅಖಂಡ ಪರಂಪರೆ ಇದೆ. ವಿವಿಧ ಕಾಲ ಘಟ್ಟಗಳ ಸಾಹಿತ್ಯ ಕೊಡುಗೆಗಳಿವೆ. ಸಾಹಿತ್ಯ ಒಂದು ಕಾಲದ ಜೀವನಾನುಭಸಾರ. ಜನಜೀವನದ ಕ್ರಿಯಾಶೀಲತೆಯ ಧ್ಯೋತಕ. ಭಾಷೆಯ ಕಾಲ, ದೇಶ, ಸಮಾಜಗಳಿಗೆ ಅನುಗುಣವಾಗಿ ಬಹುಮುಖಿ ಸಮಾಜವನ್ನು ಕಟ್ಟಿ ಬೆಳೆದು ಬರಬೇಕಾದರೆ ಅದು ತಮ್ಮ ಚಿಂತನೆಗಳಲ್ಲಿ ಹೊಂದಿರಬಹುದಾದ ಸಮಾಜ ಮುಖಿತ್ವದ ಧೋರಣೆಯೇ ಕಾರಣ.
References
ಶಾಮರಾಯ ತ. ಸು. (2010). ಕನ್ನಡ ಸಾಹಿತ್ಯ ಚರಿತೆ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ. ಮೈಸೂರು.
ಲಕ್ಷ್ಮೀನಾರಾಯಣ ಭಟ್ಟ ಎನ್. ಎಸ್. (2014). ಕನ್ನಡ ಸಾಹಿತ್ಯ ಚರಿತ್ರೆ. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.
ಶೇಷಗಿರಿರಾವ ಎಲ್. ಎಸ್. (1975). ಹೊಸಗನ್ನಡ ಸಾಹಿತ್ಯ ಚರಿತೆ. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.
ಮುನಿಶಾಮಪ್ಪ ಎ. (2014). ಸಾಮಾಜಿಕ ಚಳುವಳಿಗಳ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ. ವಾಣಿ ಪ್ರಕಾಶನ. ಮೈಸೂರು.
ಕರೀಗೌಡ ಬೀಚನಹಳ್ಳಿ. (2007). ಸಾಹಿತ್ಯ ವಿಸ್ತಾರ. ಅಜಂತ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.