ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ

Authors

  • VINAYA KUMAR
  • R. NAGAPPA GOWDA

Keywords:

ಡಾ. ಸಿದ್ಧಲಿಂಗಯ್ಯ, ದಲಿತ ಸಾಹಿತ್ಯ, ಜಾತಿ ವ್ಯವಸ್ಥೆ, ಬಂಡಾಯ, ದಲಿತ ಕಾವ್ಯ, ದಲಿತ ಆತ್ಮಕತೆ, ಸಮಾನತೆ

Abstract

ಸಾಮಾಜಿಕ ಶ್ರೇಣೀಕರಣ ಭಾರತದ ಸಮಾಜದ ಬಹುಮುಖ್ಯವಾದ ಲಕ್ಷಣ. ಅಂದರೆ ಅದು ಜಾತಿಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಶ್ರೇಣೀಕರಣದ ವ್ಯವಸ್ಥೆಯು ಒಂದಿಷ್ಟು ವರ್ಗಗಳನ್ನು ಅಧೀನವಾಗಿಸಿಕೊಳ್ಳುವ ಮೇಲ್ವರ್ಗದ ಉತ್ಪನ್ನವಾಗಿದೆ. ಈ ವರ್ಗವು ಇಲ್ಲಿನ ಕೆಲವು ಸಮುದಾಯಗಳನ್ನು ಹೀನವೆಂದು ಗುರುತಿಸಿಕೊಂಡು ಶತಮಾನಗಳಿಂದ ಶೋಷಣೆಯನ್ನು ಮಾಡಿಕೊಂಡು ಬಂದಿತ್ತು. ಈ ಕೆಳಜಾತಿಗಳಿಗೆ ಯಾವುದೇ ಹಕ್ಕುಗಳು ಇಲ್ಲದೇ ಮೆಲ್ವರ್ಗದ ಜೀತಕ್ಕಷ್ಟೇ ಸೀಮಿತವಾಗಿಸಲಾಗಿತ್ತು. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಜೀವನ, ಸಮಾನತೆ ಮೊದಲಾದವುಗಳು ಇವರಿಗೆ ಪರಿಚಯವೇ ಇರಲಿಲ್ಲ. ಇವರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡಲಾಗಿತ್ತು. ಭಾರತಕ್ಕೆ ಬ್ರಿಟಿಷರು ಬಂದ ನಂತರ ಅವರು ಇಲ್ಲಿ ಎಲ್ಲರಿಗೂ ಶಿಕ್ಷಣ ನೀಡಿದ್ದರಿಂದಾಗಿ ದಲಿತರಲ್ಲಿ ಹೊಸ ಆಶಾಕಿರಣ ಮೂಡಿತು. ಮುಂದೆ ಅಂಬೇಡ್ಕರ್ ಅವರು ಈ ವರ್ಗಗಳಿಂದ ಬಂದು ಇವರ ಏಳಿಗೆಗಾಗಿ ಶ್ರಮಿಸಿದರು. ಮೂಕವಾಗಿಸಿದ್ದ ಸಮುದಾಯವು ಶಿಕ್ಷಣವನ್ನು ಪಡೆದು ಮಾತನಾಡಲು ಕಾರಣರಾದವರು ಡಾ. ಬಿ. ಆರ್. ಅಂಬೇಡ್ಕರ್. ಮುಂದೇ ಇವರು ಭಾರತದ ಸಂವಿಧಾನದ ಶಿಲ್ಪಿಯಾಗಿ ಎಲ್ಲರಿಗೂ ಸಮಾನತೆ ನೀಡುವ, ಸಾಮಾಜಿಕ ನ್ಯಾಯವನ್ನು ಕೊಡುವ ಸಂವಿಧಾನವನ್ನು ನೀಡಿದರು. ಈ ಕಾರಣದಿಂದಾಗಿ ಇಲ್ಲಿನ ಹಿಂದುಳಿದ ಕೆಳವರ್ಗಗಳು ಮಾತನ್ನು ದಕ್ಕಿಸಿಕೊಂಡವು. ಈ ಎಲ್ಲಾ ಹಿನ್ನಲೆಯಿಂದ ಕನ್ನಡದ ದಲಿತ ಸಾಹಿತ್ಯವನ್ನು ಮತ್ತು ಸಿದ್ಧಲಿಂಗಯ್ಯವರನ್ನು ಕಾಣುವುದು ಹೆಚ್ಚು ಸೂಕ್ತ. ಸಹಜ ಸಜ್ಜನಿಕೆಯ ವ್ಯಕ್ತಿತ್ವವಾದ ಸಿದ್ಧಲಿಂಗಯ್ಯನವರ ಕಾವ್ಯ ಭಾಷೆ ಅಕ್ಷರಶಃ ಬೆಂಕಿಯ ಉಂಡೆಗಳು. ಶತಮಾನಗಳಿಂದ ಸ್ವಾತಂತ್ರ್ಯ, ಶಿಕ್ಷಣ, ಸಮಾನತೆ ಮೊದಲಾದ ಮುಖ್ಯವಾದ ಜೀವನ ಅಗತ್ಯಗಳೇ ಇಲ್ಲದೇ ಬದುಕಿದ ಸಮುದಾಯಕ್ಕೆ ಶಿಕ್ಷಣದೊರೆತಾಗ ಸಹಜವಾಗಿ ಈ ವ್ಯವಸ್ಥೆಯ ವಿರುದ್ಧ ಆಕ್ರೋಶ ಉಂಟಾಗುವಂತದ್ದು. ಈ ಆಕ್ರೋಶವು ಶತಮಾನಗಳ ಶೋಷಣೆಯ ಚರಿತ್ರೆಯನ್ನು ತಿಳಿದುಕೊಂಡು ಪ್ರಜ್ಞಾವಂತರಾಗುತ್ತಿರುವ ಸಂಕೇತವು ಹೌದು. ಈ ದಲಿತ ವಿಚಾರಶೀಲತೆಯ ಪ್ರತೀಕವಾಗಿ ಕವಿ ಸಿದ್ಧಲಿಂಗಯ್ಯನವರ ಸಾಹಿತ್ಯವನ್ನು ವಿವೇಚಿಸಲಾಗಿದೆ.

Downloads

Published

05.04.2024

How to Cite

VINAYA KUMAR, & R. NAGAPPA GOWDA. (2024). ಮಾತಿಲ್ಲದ ಸಮುದಾಯಕ್ಕೆ ಮಾತಾದ ಕವಿ: ಡಾ. ಸಿದ್ಧಲಿಂಗಯ್ಯ. AKSHARASURYA, 3(05), 52 to 60. Retrieved from https://aksharasurya.com/index.php/latest/article/view/375

Issue

Section

ಸಂಶೋಧನಾ ಲೇಖನಗಳು. | RESEARCH ARTICLE.