`ಅಮ್ಮ’ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ

Authors

  • GEETHA A. C.

Keywords:

ಗ್ರಾಮ, ಸಂಸ್ಕೃತಿ, ಸಮಾಜ, ನಂಬಿಕೆ, ಆರಾಧನೆ, ದೇವರು

Abstract

ಜನಪದರಲ್ಲಿ ಆರಾಧನೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆಚಾರ-ವಿಚಾರ, ನಂಬಿಕೆಗಳಿಂದ ಕೂಡಿರುವ ಆರಾಧನೆಯು ಇಷ್ಟಾರ್ಥ ಸಿದ್ಧಿಯ ನೆಲೆಯಲ್ಲಿ ಮಹತ್ವವನ್ನು ಪಡೆಯುತ್ತದೆ. ಭಯದಿಂದ ಮುಕ್ತವಾಗಲು ಕಷ್ಟ ಪರಿಹಾರವಾಗಲು ದೇವರುಗಳ ಮೊರೆ ಹೋಗುವುದು ಜನಪದರ ಬಹುಮುಖ್ಯ ಚಟುವಟಿಕೆ. ತಮಗೆ ಎದುರಾದ ಕಷ್ಟಗಳನ್ನು ರೋಗರುಜಿನಗಳನ್ನು ನಂಬಿಕೆ, ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರೀತಿಯ ವ್ಯಕ್ತಿಗಳಲ್ಲಿ ಹೇಳಿಕೊಂಡು ಮನೋಭಾರವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತಮ್ಮತಮ್ಮಲ್ಲೇ ಎಷ್ಟೇ ಕಷ್ಟಗಳನ್ನು ತೋಡಿಕೊಂಡರೂ ಸಮಾಧಾನ ಅನ್ನಿಸುವುದಿಲ್ಲ. ಅಂದರೆ ಮನುಷ್ಯರ ಶಕ್ತಿಗೆ ಒಂದು ಮಿತಿ ಎನ್ನುವುದು ಇದೆ. ಎಲ್ಲವೂ ಮನುಷ್ಯರ ಕೈಯಿಂದ ಅಸಾಧ್ಯ ಎಂಬ ವಿಚಾರವನ್ನು ಜನಪದರು ನಂಬಿದ್ದಾರೆ. ಮಾನವನ ಶಕ್ತಿಗಿಂತ ಮಿಗಿಲಾದ ಶಕ್ತಿ ಇದೆ ಎಂದು ನಂಬುವ ಜನಪದರು, ಆ ಶಕ್ತಿಯನ್ನು ದೇವರು ಎಂದು ಕೊಂಡಿದ್ದಾರೆ. ಭಯದ ಅತ್ಯುನ್ನತ ಹಂತವೇ ಭಕ್ತಿಯಾದುದರಿಂದ ಆ ನೆಲೆಯಲ್ಲಿ ದೇವರನ್ನು ಕಲ್ಪಿಸಿಕೊಂಡು ಆರಾಧನೆಗೆ ತೊಡಗಿದ್ದಾರೆ.

ಆದಿಮಾನವನಿಂದಲೇ ಈ ಕಲ್ಪನೆ ಲಭ್ಯವಿದೆ. ಅಂದರೆ ಪ್ರಕೃತಿ ವಿಕೋಪಗಳಾದ ಬಿರುಗಾಳಿ, ಅತಿಬೇಸಗೆ, ಕಾಳ್ಗಿಚ್ಚು, ಸಾಂಕ್ರಾಮಿಕ ರೋಗಗಳು ಮುಂತಾದವು ಎದುರಾದಾಗ ಭಯಗೊಂಡ ಮನಸ್ಸು ಪರಿಹಾರ ಕಾಣದೆ ಹಪಹಪಿಸಿದೆ. ತತ್ಪಲವಾಗಿ ಮಾನವ ಶಕ್ತಿಗಿಂತ ಮಿಗಿಲಾದ ಯಾವುದೋ ಶಕ್ತಿಯಿದೆ. ಅದು ಹೀಗೆಲ್ಲಾ ನೋವು ನೀಡುತ್ತದೆ ಎಂದು ಭ್ರಮಿಸಿಕೊಂಡು, ಆನಂತರದ ಕಾಲದಲ್ಲಿ ಅವುಗಳಿಗೆ ಪರಿಹಾರ ನೀಡುತ್ತಿದ್ದರೆ ನೆಮ್ಮದಿ ಉಂಟಾಗಬಹುದು ಎಂದುಕೊಂಡು ತಮ್ಮ ಸೀಮಿತ ಆಲೋಚನೆಗಳಿಂದ ಪೂಜಿಸಲಾರಂಭಿಸಿದ್ದಾರೆ. ಆದಿಮಾನವರು ಕಲ್ಲು-ಮರಗಳನ್ನು, ಪ್ರಾಣಿಗಳನ್ನು ಪೂಜಿಸುತ್ತ್ತಿದ್ದ ವಿಚಾರ ಈ ಹಿನ್ನಲೆಯಲ್ಲಿ ಲಭ್ಯವಾಗುತ್ತವೆ. ಕ್ರಮೇಣ ನಾಗರೀಕತೆ ಬೆಳೆದಂತೆ ಆರಾಧನೆಯಲ್ಲಿ ಬದಲಾವಣೆ ಆಗಿದೆ. ಒಂದು ಪರಂಪರೆಯ ಮೇಲೆ ಇನ್ನೊಂದು ಬಲಿಷ್ಟವಾದ ಪರಂಪರೆ ದಾಳಿ ಮಾಡಿದಾಗ, ಆ ಪರಂಪರೆಯ ಪದ್ಧತಿಗಳು ಆಳತೊಡಗಿವೆ. ಶಕ್ತಿ ಇದ್ದವರಿಗೆ ಅಧಿಕಾರ ಎಂಬಂತೆ ಆರಾಧನಾ ಕ್ರಮದಲ್ಲೂ ಬದಲಾವಣೆಗಳು ಕಂಡು ಬಂದಿವೆ. ನಿದರ್ಶನಕ್ಕೆ ಆರ್ಯರಿಂದ ಅಥವಾ ಮೇಲ್ವರ್ಗದಿಂದ ಬಂದಿರುವ ದೇವತಾರಾಧನೆಯೇ ಶ್ರೇಷ್ಠ ಎಂಬ ಆಶಯ ಜನಜನಿತವಾಗಿದೆ. ಈ ಹಿನ್ನೆಲೆಯಲ್ಲಿಯೇ ದೇವ ದೇವತೆಗಳು ಒಳ್ಳೆಯದನ್ನು ಮಾಡುತ್ತದೆಂದು ಜನತೆಯ ತಿಳುವಳಿಕೆಯಾಗಿದ್ದುದ್ದಾಗಿದೆ. ಅಂತೆಯೇ ಒಂದು ಗ್ರಾಮದ ಜನರಲ್ಲಿ ಇಂದಿಗೂ ಜನಪದ ನಂಬಿಕೆ ಯಾವ ರೀತಿಯಲ್ಲಿ ಹಾಸುಹೊಕ್ಕಾಗಿದೆ ಎಂಬುದನ್ನು ಹುಡುಕುವ ಪ್ರಯತ್ನದ ಫಲವೇ ಈ ಲೇಖನ.

Downloads

Published

05.03.2024

How to Cite

GEETHA A. C. (2024). `ಅಮ್ಮ’ನವರ ಆರಾಧನೆಯಲ್ಲಿನ ಸಾಂಸ್ಕೃತಿಕ ಅನನ್ಯತೆ. AKSHARASURYA, 3(03), 63 to 70. Retrieved from https://aksharasurya.com/index.php/latest/article/view/328

Issue

Section

ಸಂಶೋಧನಾ ಲೇಖನಗಳು. | RESEARCH ARTICLE.