ಸಾರಾ ಅವರ 'ಸಹನಾ' ಕಾದಂಬರಿಯ ಕುರಿತು ಒಂದು ವಿಮರ್ಶಾತ್ಮಕ ನೋಟ

Main Article Content

ಮಮತಾ

Abstract

ಸಾರಾ ಅಬೂಬಕ್ಕರ್ ಅವರ 'ಸಹನಾ' ಕಾದಂಬರಿಯು ಕರಾವಳಿ ಭಾಗದ ಮುಸ್ಲಿಂ ಸಮುದಾಯದ ಮಹಿಳೆಯರ ಶೋಚನೀಯ ಸ್ಥಿತಿಯನ್ನು ಚಿತ್ರಿಸುತ್ತದೆ. ಮೂಲಭೂತವಾದಿ ಕಟ್ಟುಪಾಡುಗಳು, ಬಹುಪತ್ನಿತ್ವ, ತ್ರಿವಳಿ ತಲಾಖ್, ಬಾಲ್ಯವಿವಾಹ ಮತ್ತು ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಪುರುಷ ಪ್ರಧಾನ ಸಮಾಜದ ಕ್ರೌರ್ಯವನ್ನು ಈ ಕೃತಿ ಬಯಲಿಗೆಳೆಯುತ್ತದೆ. ನಸೀಮಾ ಎಂಬ ನಾಯಕಿಯ ಬದುಕಿನ ಹೋರಾಟ, ಆಕೆಯ ಮೂರು ಪುಟ್ಟ ಆಸೆಗಳು ಮತ್ತು ಗಂಡನ ಮನೆಯಲ್ಲಿ ಆಕೆ ಎದುರಿಸುವ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಲೇಖಕಿ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯು ಕೇವಲ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮಾತ್ರವಲ್ಲದೆ, ತಲೆಮಾರುಗಳ ಮನಸ್ಥಿತಿಯಲ್ಲಿನ ಬದಲಾವಣೆ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಮತ್ತು ವಿಮೋಚನೆಯ ತುಡಿತವನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ.

Article Details

Section

Research Articles

Author Biography

ಮಮತಾ

ಕನ್ನಡ ಉಪನ್ಯಾಸಕರು, ಶ್ರೀ ಶಾರದಾ ಕಾಲೇಜು, ಬನ್ನೂರು.

How to Cite

ಮಮತಾ. (2023). ಸಾರಾ ಅವರ ’ಸಹನಾ’ ಕಾದಂಬರಿಯ ಕುರಿತು ಒಂದು ವಿಮರ್ಶಾತ್ಮಕ ನೋಟ. ಅಕ್ಷರಸೂರ್ಯ (AKSHARASURYA), 2(05), 85 to 90. https://aksharasurya.com/index.php/latest/article/view/124

References

ಸಹನಾ, ಡಾ. ಸಾರಾ ಅಬೂಬಕ್ಕರ್, 1985, ಚಂದ್ರಗಿರಿ ಪ್ರಕಾಶನ, ಮಂಗಳೂರು.