ವಸುಧೇಂದ್ರ ಕಥೆಗಳು: ಸಾಮಾಜಿಕತೆ

Main Article Content

ದೊರೇಶ

Abstract

ಈ ಶತಮಾನದಲ್ಲಿ ಸಾರಿಗೆ ಮತ್ತು ಸಂಪರ್ಕ ಸಾಧನಗಳು ಹೆಚ್ಚು ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದು. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯಿಂದಾಗಿ ವಿಶ್ವವು ಒಂದು ಚಿಕ್ಕ ಗ್ರಾಮವಾಗಿ ಗೋಚರಿಸುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಅನೇಕ ಸಾರಿಗೆ ವ್ಯವಸ್ಥೆಗಳು ಲಭ್ಯವಿದ್ದು ಬಹುದೂರದಲ್ಲಿರುವವರನ್ನು ಕಡಿಮೆ ಅವಧಿಯಲ್ಲಿಯೇ ತಲುಪುವ ಮಟ್ಟಕ್ಕೆ ಮಾನವ ಮುಂದುವರೆದಿದ್ದಾನೆ. ಇಷ್ಟೇ ಅಲ್ಲದೇ ಸಂಪರ್ಕ ಕ್ಷೇತ್ರದಲ್ಲಿ ಬೃಹತ್ ಕ್ರಾಂತಿಯನ್ನು ಮಾಡಿದ್ದು ಬಾನುಲಿ, ದೂರದರ್ಶನ, ಇ-ಮೇಲ್, ಅಂತರ್‌ಜಾಲ, ಮೊಬೈಲ್ ಇತ್ಯಾದಿಗಳ ಮೂಲಕ ಬಹುದೂರದ ಪ್ರದೇಶಗಳಿಗೆ ಕಡಿಮೆ ಅವಧಿಯಲ್ಲಿಯೇ ತಲುಪುವ ಮಟ್ಟಕ್ಕೆ ಮಾನವ ಬೆಳೆದಿದ್ದಾನೆ. ಸಾಮಾಜಿಕ ಬದಲಾವಣೆ ಒಂದು ನಿರಂತರ ಪ್ರಕ್ರಿಯೆ, ಯಾವುದೇ ವ್ಯಕ್ತಿ ಅಥವಾ ಸಮಾಜವಾದರೂ ಸಹ ನಿರಂತರ ಬದಲಾವಣೆಯನ್ನು ಬಯಸುವುದು. ಬದಲಾವಣೆ ಇಲ್ಲದೆ ಹೋದಲ್ಲಿ ಜಡತ್ವ ಉಂಟಾಗಿ ಕ್ರಿಯೆಗಳು ಸರಾಗವಾಗಿ ನಡೆಯದೆ ಹೋಗಬಹುದು. ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದ್ದ ಬದಲಾವಣೆಯು ಹಿಂದಿನದಕ್ಕೆ ಹೋಲಿಸಿದಾಗ ಪ್ರಸ್ತುತದಲ್ಲಿ ಅಗಾಧವಾದ ವ್ಯತ್ಯಾಸಗಳನ್ನು ಕಾಣಬಹುದು. ಸಾಮಾಜಿಕ ಬದಲಾವಣೆಯು ತತ್‌ಕ್ಷಣದಲ್ಲಿ ಸಂಭವಿಸದು. ಅದು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುತ್ತದೆ.

Article Details

Section

Book Review

Author Biography

ದೊರೇಶ

ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಡೂರು.

How to Cite

ದೊರೇಶ. (2023). ವಸುಧೇಂದ್ರ ಕಥೆಗಳು: ಸಾಮಾಜಿಕತೆ. ಅಕ್ಷರಸೂರ್ಯ (AKSHARASURYA), 2(10), 189 to 203. https://aksharasurya.com/index.php/latest/article/view/250

References

ಕೀರ್ತಿನಾಥ ಕುತುಕೋಟಿ, ಯುಗಧರ್ಮ ಮತ್ತು ಸಾಹಿತ್ಯ ದರ್ಶನ (1983), ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

ಕೋದಂಡರಾಮ ಎನ್. ಕೆ., ಕನ್ನಡ ಕಥಾ ಸಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ (1999), ಗಾಯತ್ರಿ ಸ್ಮಾರಕ ಗ್ರಂಥಮಾಲೆ, ಮೈಸೂರು.

ಗಿರಡ್ಡಿ ಗೋವಿಂದರಾಜ್, ವೃಷ್ಟಿ ಸಮಷ್ಟಿ: ಕನ್ನಡ ನವ್ಯ ಕಥೆಗಳ ಅಧ್ಯಯನ (1983), ಅಜಂತ ಪ್ರಕಾಶನ, ಬೆಂಗಳೂರು.

ತಿರುಮಲೇಶ ಕೆ. ವಿ., ಅಸ್ತಿತ್ವವಾದ (1989), ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ಶೇಷಗಿರಿರಾವ್ ಎಲ್. ಎಸ್., ಹೊಸಗನ್ನಡ ಸಾಹಿತ್ಯ (1968), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಹೊನ್ನಯ್ಯ ಸಿ. ಬಿ., ಕನ್ನಡ ಸಣ್ಣಕಥೆಗಳಲ್ಲಿ ದಲಿತ ಸಂಸ್ಕೃತಿ (2004), ಕೆ. ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್. ಬೆಂಗಳೂರು.

ರಹಮತ್ ತರೀಕೆರೆ, ಪ್ರತಿಸಂಸ್ಕೃತಿ (1993), ಕನ್ನಡ ಸಂಘ, ಕ್ರೈಸ್ಟ್ ಕಾಲೇಜು, ಬೆಂಗಳೂರು.

ವೀರಪ್ಪ ಜಿ.ಟಿ (ಸಂ), ಆಲೆಮದೆ (1995), ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ.

ವಿಜಯಲಕ್ಷ್ಮಿ ಕೆ. ಎಮ್., ಸಾಹಿತ್ಯ ಮತ್ತು ಸುತ್ತಣ ಸಮಾಜ (2010), ಕಿರಣ್‌ಬುಕ್ ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು.

ಸಬಿಹಾ ಭೂಮಿ ಗೌಡ (ಸಂ), ಕನ್ನಡ ಸಾಹಿತ್ಯ ಮತ್ತು ಮಹಿಳೆ (2006), ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.

Most read articles by the same author(s)