ಭ್ರಾತೃತ್ವ ಕದಡುವ ಕೋಮುವಾದ: ತುಮಕೂರಿನ ಮರಳೂರು ದಿಣ್ಣೆಯ ಕೋಮು ಗಲಭೆಯ ಅಧ್ಯಯನ
Main Article Content
Abstract
ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ 2019ರಲ್ಲಿ ನಡೆದ ಕೋಮು ಗಲಭೆಯ ಹಿನ್ನೆಲೆ, ಕಾರಣ ಹಾಗೂ ಪರಿಣಾಮಗಳನ್ನು ಇಲ್ಲಿ ವಸ್ತುನಿಷ್ಠವಾಗಿ ವಿಶ್ಲೇಷಿಸಲಾಗಿದೆ. ಜಾತ್ಯತೀತ ಭಾರತದಲ್ಲಿ ಧಾರ್ಮಿಕ ಆಚರಣೆಗಳು ಹೇಗೆ ರಾಜಕೀಯ ಹಿತಾಸಕ್ತಿಗಳ ಸಾಧನವಾಗಿ ಬಳಕೆಯಾಗುತ್ತಿವೆ ಎಂಬುದನ್ನು ಅಧ್ಯಯನವು ಕಟ್ಟಿಕೊಡುತ್ತದೆ. ದಶಕಗಳ ಕಾಲ ಸೌಹಾರ್ದತೆಯಿಂದ ಬದುಕುತ್ತಿದ್ದ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ, ಕರಗ ಮೆರವಣಿಗೆಯ ಸಂದರ್ಭದಲ್ಲಿ ಮಸೀದಿಯೆದುರು ವಾದ್ಯ ಮೊಳಗಿಸಿದ ಸಣ್ಣ ಘಟನೆ ಸಂಘರ್ಷಕ್ಕೆ ತಿರುಗಿದ ಬಗೆಯನ್ನು ವಿವರಿಸಲಾಗಿದೆ. ಯುವಜನತೆಯ ಮನಸ್ಸಿನಲ್ಲಿ ಬಿತ್ತಲಾಗುತ್ತಿರುವ ಧಾರ್ಮಿಕ ಅಸಹಿಷ್ಣುತೆ, ರಾಜಕೀಯ ಪಕ್ಷಗಳ ಪಿತೂರಿ, ನವ ಧಾರ್ಮಿಕ ಸಂಘಟನೆಗಳ ಪ್ರಚೋದನೆ ಮತ್ತು ಸಾಮಾಜಿಕ ಮಾಧ್ಯಮಗಳ ಸುಳ್ಳು ಸುದ್ದಿಗಳು ಈ ಗಲಭೆಗೆ ಪ್ರಮುಖ ಕಾರಣಗಳಾಗಿವೆ. ಘಟನೆಯಿಂದ ಪ್ರಾಣಹಾನಿ ಸಂಭವಿಸದಿದ್ದರೂ, ಎರಡು ಸಮುದಾಯಗಳ ನಡುವಿನ ಪರಸ್ಪರ ನಂಬಿಕೆ, ಆರ್ಥಿಕ ವಹಿವಾಟು ಹಾಗೂ ಸಾಮಾಜಿಕ ಭ್ರಾತೃತ್ವಕ್ಕೆ ಉಂಟಾದ ಆಘಾತವನ್ನು ಮಾರ್ಮಿಕವಾಗಿ ತೆರೆದಿಡಲಾಗಿದೆ. ದೇಶದ ಅಭಿವೃದ್ಧಿಗಾಗಿ ಯುವಕರು ಕೋಮುವಾದದ ಬಲೆಗೆ ಬೀಳದೆ ಸದಾ ಭ್ರಾತೃತ್ವ ಮತ್ತು ಸಹಿಷ್ಣುತೆಯನ್ನು ಮೆರೆಯಬೇಕಾದ ತುರ್ತು ಅಗತ್ಯವನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭಟ್ ಎಸ್.ಆರ್., ರಾಜಶೇಖರ್ ಜಿ., ಫಣಿರಾಜ್ ಕೆ., (2012), ಕೋಮುವಾದದ ಕರಾಳ ಮುಖಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಬಸವರಾಜ ಜಿ., (2013), ಕೋಮುವಾದ (ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ), ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ಅನಾಮಿಕ ಶ್ರೀವಾಸ್ತವ, (1999), ಕಮ್ಯುನಲ್ ವಯಲೆನ್ಸ್ ಅಂಡ್ ಅಡ್ಮಿನಿಸ್ಟ್ರೇಷನ್, ಜೈಪುರ: ರಾವತ್ ಪಬ್ಲಿಕೇಷನ್ಸ್.
ಬಿಪಿನ್ ಚಂದ್ರ, (1984), ಕಮ್ಯುನಲಿಸಂ ಇನ್ ಮಾಡರ್ನ್ ಇಂಡಿಯಾ, ನವದೆಹಲಿ: ವಿಕಾಸ್ ಪಬ್ಲಿಕೇಷನ್ಸ್.
ಅಹುಜಾ ರಾಮ್, (1992), ಸೋಷಿಯಲ್ ಪ್ರಾಬ್ಲಮ್ಸ್ ಇನ್ ಇಂಡಿಯಾ, ಜೈಪುರ: ರಾವತ್ ಪಬ್ಲಿಕೇಷನ್ಸ್.
ಅಸ್ಸಾದಿ ಮುಜಾಫರ್, (1999), ಕಮ್ಯುನಲ್ ವಯಲೆನ್ಸ್ ಇನ್ ಕೋಸ್ಟಲ್ ಬೆಲ್ಟ್, ಮುಂಬೈ: ಇ.ಪಿ.ಡಬ್ಲ್ಯು. (ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ).