ಹವ್ಯಕ ಭಾಷೆ ಮತ್ತು ಸಾಹಿತ್ಯ ವಿಶ್ಲೇಷಣೆ
Main Article Content
Abstract
ಕರ್ನಾಟಕದ ಕರಾವಳಿ ಭಾಗದ ಪ್ರಮುಖ ಸಮುದಾಯವಾದ ಹವ್ಯಕರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಐತಿಹಾಸಿಕ ಹಾಗೂ ಸಮಕಾಲೀನ ಮಹತ್ವವನ್ನು ಇಲ್ಲಿ ಚರ್ಚಿಸಲಾಗಿದೆ. ವೈದಿಕ ಮತ್ತು ಕೃಷಿ ಸಂಸ್ಕೃತಿಯನ್ನು ಮೇಳೈಸಿಕೊಂಡಿರುವ ಹವ್ಯಕ ಸಮುದಾಯದ ಸಾಮಾಜಿಕ ಹಿನ್ನೆಲೆ, ವಲಸೆ ಇತಿಹಾಸ ಮತ್ತು ಪ್ರಾದೇಶಿಕ ಹೊಂದಾಣಿಕೆಯನ್ನು ವಿವರಿಸುತ್ತಾ, ಹವಿಗನ್ನಡದಲ್ಲಿ ರಚಿತವಾದ ಸಾಹಿತ್ಯಕ ಕೃತಿಗಳ ಮೇಲೆ ಬೆಳಕು ಚೆಲ್ಲಲಾಗಿದೆ. ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ದಂತಹ ಆರಂಭಿಕ ನಾಟಕಗಳಿಂದ ಹಿಡಿದು, ಆಧುನಿಕ ಕಥೆ, ಕಾದಂಬರಿ ಮತ್ತು ಯಕ್ಷಗಾನ ಪ್ರಸಂಗಗಳವರೆಗೆ ಹವ್ಯಕ ಸಾಹಿತ್ಯದ ಹರವನ್ನು ಗುರುತಿಸಲಾಗಿದೆ. ಹಳೆಗನ್ನಡ ಮತ್ತು ದ್ರಾವಿಡ ಭಾಷಾ ಮೂಲಗಳನ್ನು ಹೊಂದಿರುವ ಹವಿಗನ್ನಡದ ಭಾಷಿಕ ಅನನ್ಯತೆ, ಗಾದೆ ಮಾತುಗಳ ಸ್ವಾರಸ್ಯ ಮತ್ತು ಶೈಕ್ಷಣಿಕ ಅಧ್ಯಯನಗಳಲ್ಲಿ ಈ ಉಪಭಾಷೆಗಿರುವ ಮಹತ್ವವನ್ನು ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ಹವ್ಯಕ ಭಾಷೆ ಮತ್ತು ಸಾಹಿತ್ಯವು ಕರಾವಳಿಯ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಹೇಗೆ ಪೂರಕವಾಗಿದೆ ಎಂಬುದನ್ನು ನಿರೂಪಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾರಾಯಣ ಶಾನಭಾಗ ಮತ್ತು ಹೆಗಡೆ ಕಡಬಾಳ ಎಸ್.ಐ., ಹವ್ಯಕರು ಕಿರು ಪರಿಚಯ, ಬೆಂಗಳೂರು: ಶ್ರೀ ಹವ್ಯಕ ಮಹಾಸಭಾ (ರಿ.).
ತಿಮ್ಮಪ್ಪ ಕಲಸಿ ಎಚ್.ಎಂ., (೨೦೧೨), ಹವ್ಯಕರ ಇತಿಹಾಸ ದರ್ಶನ, ಬೆಂಗಳೂರು: ಹವ್ಯಕ ಅಧ್ಯಯನ ಕೇಂದ್ರ.
ಶ್ರೀಕೃಷ್ಣ ಭಟ್ ಅರ್ತಿಕಜೆ ಮತ್ತು ಹರಿಕೃಷ್ಣ ಭರಣ್ಯ (ಸಂ), ನುಡಿ ಸಂಸ್ಕೃತಿ, ಬೆಂಗಳೂರು: ಹವ್ಯಕ ಅಧ್ಯಯನ ಕೇಂದ್ರ.
ಹರಿಕೃಷ್ಣ ಭರಣ್ಯ, (೨೦೧೮), ಹವಿಗನ್ನಡ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಅನ್ನಪೂರ್ಣೇಶ್ವರಿ ಪ್ರಿಂಟರ್ಸ್.
ಮಹಾಲಿಂಗ ಭಟ್ ಬಿ.ಎನ್., (೨೦೦೫), ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಕರ ಸಂಸ್ಕೃತಿ (ಅಪ್ರಕಟಿತ ಪಿಎಚ್.ಡಿ. ಪ್ರಬಂಧ), ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ.
ಹರಿಕೃಷ್ಣ ಭರಣ್ಯ, (೨೦೧೯), ಹವಿಗನ್ನಡ (ನುಡಿ/ಸಂಸ್ಕೃತಿ/ಸಾಹಿತ್ಯ ಅಧ್ಯಯನ), ಅಂಕನಹಳ್ಳಿ: ನಿಸರ್ಗ ಟ್ರಸ್ಟ್ (ರಿ).
ಕೇಶವ ಭಟ್ ಟಿ., (1986), ಹವ್ಯಕರ ಶೋಭಾನೆಗಳು, ಬೆಂಗಳೂರು: ಚಿರಸಾಹಿತ್ಯ ಪ್ರಕಾಶನ.