ಕನ್ನಡ ಮಹಿಳಾ ನಾಟಕಗಳು: ಮಹಿಳಾ ಅಸ್ಮಿತೆ ಮತ್ತು ಶೋಷಣೆಯ ನೆಲೆಗಳು
Main Article Content
Abstract
ಕನ್ನಡ ಸಾಹಿತ್ಯಕ್ಕೆ ಮಹತ್ವದ ಪರಂಪರೆಯಿದೆ. ಅದು ಬೇರೆ-ಬೇರೆ ಸಾಹಿತ್ಯ ಪ್ರಕಾರಗಳ ಮೂಲಕ ಬೆಳೆದು ಬಂದಿದೆ. ಅವುಗಳಲ್ಲಿ ನಾಟಕ ಪ್ರಕಾರವೂ ಮಹತ್ವದ್ದಾಗಿದೆ. ಕನ್ನಡ ನಾಟಕಕಾರ್ತಿಯರ ವಸ್ತುವಿಷಯಗಳ ಆಯ್ಕೆಯ ವ್ಯಾಪ್ತಿ ವಿಶಾಲವಾದದ್ದು. ಸಮಾಜದ ಬೇರೆ ಬೇರೆ ವಸ್ತು-ಸಂಗತಿ, ಸಂವೇದನೆಗಳನ್ನು ಚರಿತ್ರೆ, ಪುರಾಣ, ಜಾನಪದ ಆಧುನಿಕ ಸಮಾಜದ ತಲ್ಲಣಗಳನ್ನು ಸಹ ತಮ್ಮ ನಾಟಕಗಳ ವಸ್ತುವಾಗಿಸಿಕೊಂಡಿದ್ದಾರೆ. ವಸ್ತು ಯಾವುದೇ ಆದರೂ ಈ ಕಾಲದ ಸಂವೇದನೆಗಳಿಗೆ ಅನುಗುಣವಾಗಿ, ಅಗತ್ಯಗಳಿಗೆ ಅನುಸಾರವಾಗಿ ಅವುಗಳನ್ನು ನಿರ್ವಹಿಸಿರುವುದು ಮಹತ್ವದ್ದಾಗಿದೆ. ಸಾಹಿತ್ಯವನ್ನು ಮನರಂಜನೆಯ ಸಾಧನ ಎಂಬ ಅರಿವು ಇಲ್ಲಿನ ನಾಟಕಗಳದ್ದಲ್ಲ. ಸಮಾಜದ ಸಾಂಸ್ಕೃತಿಕ ಚಲನಶೀಲತೆಯನ್ನು ಗಂಭೀರವಾಗಿ ಮುಖಾಮುಖಿಗೊಂಡಿರುವ ನಾಟಕಕಾರ್ತಿಯರು ಅದರ ಭಾಗವಾದ ಶಿಕ್ಷಣದ ಬಿಕ್ಕಟ್ಟುಗಳು, ಕೃಷಿ ಸಮಸ್ಯೆ, ಮಾರುಕಟ್ಟೆಯ ಸರಕು ಸಂಸ್ಕೃತಿ, ಜಾತಿ ಶೋಷಣೆ, ನಿರುದ್ಯೋಗ, ಭಾಷಾ ಸಮಸ್ಯೆ, ರೈತರ ಆತ್ಮಹತ್ಯೆ, ಜಾಗತೀಕರಣ ಸೃಷ್ಟಿಸಿರುವ ಬಿಕ್ಕಟ್ಟು, ಅದರಲ್ಲೂ ಮಹಿಳಾ ಕೇಂದ್ರಿತ ಸಮಸ್ಯೆಗಳಾದ ಅತ್ಯಾಚಾರ, ಭ್ರೂಣಹತ್ಯೆ, ಬಾಲ್ಯವಿವಾಹ, ಅಂತರ್ಜಾತಿ ವಿವಾಹ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯಗಳಂತಹ ಅನೇಕ ವಿಚಾರಗಳ ಕುರಿತ ವೈಚಾರಿಕ ಪ್ರಜ್ಞೆ ನಾಟಕಕಾರ್ತಿಯರ ಒಟ್ಟು ನಾಟಕಗಳ ತಾತ್ವಿಕ ಸ್ವರೂಪದ ಭಾಗವಾಗಿದೆ. ಮಾತೃತ್ವ, ಪ್ರಕೃತಿ, ವೇಶ್ಯೆ, ಸಮಾಜದಲ್ಲಿನ ಯುದ್ಧ ದಾಹದ ಪರಿಣಾಮಗಳು ಮತ್ತು ಜಾಗತೀಕರಣದ ನಂತರದಲ್ಲಿ ಹೆಚ್ಚಾದ ಸರಕು ಸಂಸ್ಕೃತಿಯ ಭಾಗವಾದ ಮಹಿಳಾ ಮಾರಾಟದ ವಿಷಯಗಳನ್ನು ಸಮಾಜದ ಆರೋಗ್ಯದ ದೃಷ್ಟಿಯಿಂದ ಅನುಸಂಧಾನಗೊಂಡಿದ್ದಾರೆ. ಹೀಗೆ ನಾಟಕಕಾರ್ತಿಯರು ಬಹುವಿಷಯಕೇಂದ್ರಿತ ನೆಲೆಯಲ್ಲಿ ನಾಟಕಗಳನ್ನು ರಚಿಸಿದ್ದು ಪ್ರಸ್ತುತ ಪ್ರಬಂಧದಲ್ಲಿ ಅವುಗಳ ತಾತ್ವಿಕ ವಿಶ್ಲೇಷಣೆಗೆ ಅವಕಾಶ ಮಾಡಿಕೊಟ್ಟಿವೆ.
ಪ್ರೇಕ್ಷಕಳಾಗಿದ್ದ ಮಹಿಳೆ ನಾಟಕ ರಚನೆಯ ಹಂತಕ್ಕೆ ಬರುವುದಕ್ಕೆ ದೊಡ್ಡ ಸಮಯವೇ ಬೇಕಾಯಿತು. ಹೀಗೆ ನಾಟಕ ರಚನೆಗೆ ತೊಡಗಿದ ಮಹಿಳೆ ಸಂಸ್ಕೃತಿ, ಸಮಾಜ, ಸಾಹಿತ್ಯ, ಚರಿತ್ರೆ, ಪುರಾಣ, ಜಾನಪದಗಳಂತಹ ವಸ್ತು ಸಂಗತಿಗಳಲ್ಲಿ ಪುರುಷ ಪ್ರಧಾನ ಸಮಾಜ ಅಪೇಕ್ಷಿಸುವ ಚೌಕಟ್ಟಿನ ಅನೇಕ ಸಂಗತಿಗಳ ಬಗ್ಗೆ ಬರೆಯುತ್ತಾ, ಅವುಗಳನ್ನು ಪರಾಮರ್ಶಿಸುತ್ತಾ ಪ್ರಶ್ನೆಗೊಳಪಡಿಸಿರುವುದನ್ನು ಕಾಣಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಇಂದಿರಾ ಹಾಲಂಬಿ, (1995), ಶ್ರೀಕೃಷ್ಣ ದೇವರಾಯ, ಉಡುಪಿ (ಆತ್ರಾಡಿ): ಸಂದೀಪ ಸಾಹಿತ್ಯ.
ಇಂದಿರಾ ಹಾಲಂಬಿ (ಸಂ.), (2001), ವಿನೂತನ (ವಿವಿಧ ನಾಟಕ ಕರ್ತರಿಂದ), ಉಡುಪಿ (ಆತ್ರಾಡಿ): ಸಂದೀಪ ಸಾಹಿತ್ಯ.
ವಸುಂಧರಾ ಭೂಪತಿ (ಸಂ.), (2013), ನವ ವಿಧನಾಟಕಗಳು, ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ (ರಿ).
ನಾರಾಯಣ ಬಿ. ಪವಾರ (ಸಂ.), (2013), ಸಂಕೀರ್ಣ ಸಂಕಲನಗಳು ಸಂಪುಟ ೩: ಮಹಿಳಾ ನಾಟಕಗಳು, ವಿಜಯಪುರ (ಬಿಜಾಪುರ): ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ.
ಇಂದಿರಾ ಜೈಪ್ರಕಾಶ್, (2009), ಸ್ತ್ರೀವಾದಿ ಮನೋವಿಜ್ಞಾನ, ಹಂಪಿ: ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ.