ಕನ್ನಡ ಪ್ರಮುಖ ನಾಟಕಕಾರರು ಮತ್ತು ಅವರ ಕೊಡುಗೆ

Main Article Content

ನಿರ್ಮಲಾ ಶೀಲವಂತರ

Abstract

ಕನ್ನಡ ಸಾರಸ್ವತ ಲೋಕದಲ್ಲಿ ನಾಟಕ ಕಲೆಯು ಸಮಾಜದ ವಾಸ್ತವಿಕ ಬದುಕನ್ನು ಪ್ರತಿಬಿಂಬಿಸುವ ಜೀವಂತ ಮಾಧ್ಯಮವಾಗಿದೆ. ವಿಜಯನಗರ ಸಾಮ್ರಾಜ್ಯ, ಕೆಳದಿ ಹಾಗೂ ಮೈಸೂರು ಅರಸರ ಪೋಷಣೆಯಿಂದ ಬೆಳೆದುಬಂದ ಕನ್ನಡ ರಂಗಭೂಮಿಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ವೃತ್ತಿಪರ ನಾಟಕ ಮಂಡಳಿಗಳು ಸ್ಥಾಪನೆಗೊಂಡು ರಂಗಭೂಮಿಗೆ ಹೊಸ ಆಯಾಮ ಒದಗಿಸಿದವು. ಈ ವಿಕಾಸದ ಹಾದಿಯಲ್ಲಿ ನಾಟ್ಯಾಚಾರ್ಯ ಗರುಡ ಸದಾಶಿವರಾಯರ ಸಾಧನೆ ಅತಿಮುಖ್ಯವಾದದ್ದು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ಅನೇಕ ಕಷ್ಟಗಳನ್ನು ಎದುರಿಸಿದರೂ, ಬಹುಭಾಷಾ ಪಾಂಡಿತ್ಯ ಹಾಗೂ ರಾಷ್ಟ್ರೀಯತೆಯ ಪ್ರೇರಣೆಯಿಂದ ಅವರು ಶ್ರೇಷ್ಠ ರಂಗಕರ್ಮಿಯಾಗಿ ರೂಪುಗೊಂಡರು. ಸ್ವಂತ ನಾಟಕ ಕಂಪನಿಯನ್ನು ಕಟ್ಟಿ, ಐವತ್ತಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ಅಭಿನಯಿಸುವ ಮೂಲಕ ಕನ್ನಡ ವೃತ್ತಿ ರಂಗಭೂಮಿಯನ್ನು ಅತ್ಯಂತ ಶ್ರೀಮಂತಗೊಳಿಸಿದರು. ಕೇವಲ ಮನರಂಜನೆಯಾಗಿರದೆ, ಜನಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಯ ಸಾಧನವಾಗಿ ನಾಟಕವನ್ನು ಬೆಳೆಸಿದ ಗರುಡರ ಬದುಕು ಮತ್ತು ಕಲೆಯ ಸಮಗ್ರ ನೋಟವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ನಿರ್ಮಲಾ ಶೀಲವಂತರ

ಸಂಶೋಧನಾ ವಿದ್ಯಾರ್ಥಿನಿ, ಜೆ.ಸಿ.ಬಿ.ಎಮ್‌. ಸಂಶೋಧನಾ ಕೇಂದ್ರ, ಶೃಂಗೇರಿ.

How to Cite

ನಿರ್ಮಲಾ ಶೀಲವಂತರ. (2026). ಕನ್ನಡ ಪ್ರಮುಖ ನಾಟಕಕಾರರು ಮತ್ತು ಅವರ ಕೊಡುಗೆ. ಅಕ್ಷರಸೂರ್ಯ (AKSHARASURYA), 17(06), 21 to 27. https://aksharasurya.com/index.php/latest/article/view/2392

References

ಪ್ರಕಾಶ ಗರುಡ, (2008), ಗರುಡ ಸದಾಶಿವರಾಯರು, ನವದೆಹಲಿ: ಸಾಹಿತ್ಯ ಅಕಾಡೆಮಿ.

ವೀರಣ್ಣ ರಾಜೂರು, (2020), ಕನ್ನಡ ನಾಟಕ ಪಥ, ಬೆಂಗಳೂರು: ಸಾರಾ ಎಂಟರ್ ಪ್ರೈಸಸ್.

ಬಸವರಾಜ ಜಗಜಂಪಿ, (1993), ಗರುಡ ಸದಾಶಿವರಾಯರು (ನಾಟಕ ಸಾಹಿತ್ಯ ಹಾಗೂ ವೃತ್ತಿ ರಂಗಭೂಮಿ ಅಧ್ಯಯನ), ಗದಗ: ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ.

ಸಂ. ರಮಾಕಾಂತ ಜೋಶಿ ಮತ್ತು ಡಾ. ಪ್ರಕಾಶ ಗರುಡ, (2011), ಗರುಡ ಸದಾಶಿವರಾಯರು - ಸಂಪುಟ 1 ಮತ್ತು 2, ಧಾರವಾಡ: ಮನೋಹರ ಗ್ರಂಥಮಾಲಾ.

ರಂಗನಾಥ ಎಚ್. ಕೆ., (1974), ಬಣ್ಣ ಬೆಳಕು, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.

ಆಚಾರ್ಯ ಕೆ. ವಿ., (1979), ಕರ್ನಾಟಕ ರಂಗಭೂಮಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಮರುಳ ಸಿದ್ದಪ್ಪ ಕೆ., (1986), ಕನ್ನಡ ನಾಟಕ ಸಮೀಕ್ಷೆ, ಬೆಂಗಳೂರು: ಪ್ರತೀಮಾ ನಾಟಕ ಪ್ರಕಾಶನ.

Most read articles by the same author(s)