ಪ್ರಾಚೀನ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಪರಂಪರೆ
Main Article Content
Abstract
ಪ್ರಾಚೀನ ಭಾರತದ ಇತಿಹಾಸದ ಬೆಳವಣಿಗೆ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಉದಯ ಮತ್ತು ವಿಕಾಸವನ್ನು ವಿಶ್ಲೇಷಿಸುತ್ತದೆ. ಶಾಸನಗಳು, ತಾಮ್ರಪಟಗಳು, ನಾಣ್ಯಗಳು ಮತ್ತು ಪುರಾತತ್ವ ಸಾಕ್ಷ್ಯಗಳ ಮೂಲಕ ಪ್ರಾಚೀನ ಕನ್ನಡ ಪ್ರದೇಶದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನವನ್ನು ಅರಿಯಲು ಸಾಧ್ಯವಾಗುತ್ತದೆ. ಕದಂಬರು, ಗಂಗರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯಕ್ಕೆ ರಾಜಾಶ್ರಯ ದೊರಕಿತು. ಪಂಪ, ರನ್ನ, ಜನ್ನ ಮೊದಲಾದ ಕವಿಗಳು ಮಹಾಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದರು. ಜೈನ ಮತ್ತು ವೈದಿಕ ಸಂಸ್ಕೃತಿಯ ಪ್ರಭಾವದಿಂದ ನೀತಿ, ಧರ್ಮ, ವೀರತ್ವ ಹಾಗೂ ರಾಜಧರ್ಮವು ಸಾಹಿತ್ಯದ ಪ್ರಮುಖ ವಿಷಯಗಳಾಗಿ ರೂಪಗೊಂಡವು. ಪ್ರಾಚೀನ ಇತಿಹಾಸದ ಘಟನೆಗಳು ಮತ್ತು ಸಮಾಜದ ಮೌಲ್ಯಗಳು ಕನ್ನಡ ಸಾಹಿತ್ಯದಲ್ಲಿ ಪ್ರತಿಬಿಂಬಗೊಂಡಿದ್ದು, ಸಾಹಿತ್ಯವು ಆ ಕಾಲದ ಜನಜೀವನ ಮತ್ತು ಸಂಸ್ಕೃತಿಯ ಜೀವಂತ ದಾಖಲೆಯಾಗಿದೆ. ಹೀಗಾಗಿ ಪ್ರಾಚೀನ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಪರಂಪರೆ ಪರಸ್ಪರ ಪೂರಕವಾಗಿದ್ದು, ಒಂದನ್ನು ತಿಳಿಯದೇ ಮತ್ತೊಂದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದೇ ಈ ಲೇಖನದ ಕೇಂದ್ರ ಸಾರ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕನ್ನಡ ಸಾಹಿತ್ಯ ಚರಿತ್ರೆ - ತ. ಸು. ಶಾಮರಾಯ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಬೆಂಗಳೂರು 2012.
ಕನ್ನಡ ಸಾಹಿತ್ಯ ಚರಿತ್ರೆಯ ಮುಂದುವರಿಕೆ – ಸಂ. ಡಾ. ಶ್ರೀನಿವಾಸ ಹಾವನೂರ, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಬೆಂಗಳೂರು 2006.
ಕನ್ನಡ ಸಾಹಿತ್ಯ ಚರಿತ್ರೆ ರಂ. ಶ್ರೀ. ಮುಗಳಿ - ಗೀತಾ ಬುಕ್ ಹೌಸ್ ಪ್ರಕಾಶಕರು, ಮೈಸೂರು 2022.
ಹೊಸ ಕನ್ನಡ ಭಾಷಾವ್ಯಾಸಂಗ – ಡಾ. ಸಂಗಮೇಶ ಸವದತ್ತಿಮಠ, ರೂಪರಶ್ಮಿ ಪಬ್ಲಿಕೇಶನ್, ಧಾರವಾಡ 2021.
ಕನ್ನಡ ಸಾಹಿತ್ಯ ಘಟ್ಟಗಳು - ಸಂ. ಬಸವರಾಜ ಸಾದರ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ 2019.