ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳ ವಸ್ತು ಮತ್ತು ತಂತ್ರ

Main Article Content

ಧನಲಕ್ಷ್ಮಿ ಸಿ.

Abstract

ಶಾಂತಿನಾಥ ದೇಸಾಯಿಯವರು ಪ್ರಮುಖವಾಗಿ ಮನುಷ್ಯನ ಅಸ್ತಿತ್ವದ ಹುಡುಕಾಟ, ಮುಕ್ತಿಯ ಹಂಬಲ, ಆಧುನಿಕತೆಯ ಯಾಂತ್ರಿಕತೆಯಲ್ಲಿ ವಿಕ್ಷಿಪ್ತಗೊಳ್ಳುವ ಯುವಕರ ಮನಸ್ಸು, ಸಂಬಂಧಗಳ ಅಗತ್ಯತೆ, ಗಂಡು ಹೆಣ್ಣಿನ ಸಂಬಂಧದ ಸ್ವರೂಪ, ವೈಯಕ್ತಿಕ ಹುಡುಕಾಟದೊಂದಿಗೆ ಮನುಷ್ಯ ಸಾಮಾಜಿಕತೆಯೊಂದಿಗೆ ಬೆಸೆದುಕೊಳ್ಳುವ ರೀತಿ, ವ್ಯಕ್ತಿಯ ಅಂತರಾಳದ ಮೂಲಕ ವ್ಯಕ್ತಿತ್ವ ಹಾಗೂ ತತ್ವಗಳು ಮಂಥನಗೊಳ್ಳುವ ಬಗೆ-ಈ ವಸ್ತುಗಳನ್ನು ತಮ್ಮ ಕಾದಂಬರಿಗಳ ರಚನೆಯಲ್ಲಿ ಬಳಸಿಕೊಂಡಿದ್ದಾರೆ. ಇವರ ಕಾದಂಬರಿಯ ವಸ್ತುಗಳು ಸೂಕ್ಷ್ಮ ಸಂವೇದನೆಯ ಓದುಗರನ್ನು ಆಳವಾಗಿ ಪ್ರಭಾವಿಸಬಲ್ಲವು. ಆಧುನಿಕತೆಯ ಪರಿಧಿಯಲ್ಲಿ ಬದುಕುತ್ತಿರುವ ನಮಗೆ ಇಂದು ದೇಸಾಯಿಯವರ ಕಾದಂಬರಿಯ ವಸ್ತುಗಳು ನಾವು ಅಥವಾ ನಮ್ಮ ಸುತ್ತಲಿನ ವ್ಯಕ್ತಿಗಳು ಅನುಭವಿಸುತ್ತಿರುವ ಯಾತನೆ, ಬೇಸರ, ಗೊಂದಲ, ಭ್ರಮನಿರಸನ, ಅಸಹಾಯಕತೆ ಇವುಗಳಿಗೆ ಹಿಡಿದ 'ಕಲಾತ್ಮಕವಾದ ಕನ್ನಡಿ' ಎಂದು ಅನ್ನಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ದೇಸಾಯಿ ಅವರ ಕಾದಂಬರಿಗಳಲ್ಲಿ ಪ್ರಮುಖವಾಗಿ ಮೂರು ತಂತ್ರಗಳನ್ನು ಗುರುತಿಸಬಹುದು. ಪ್ರಜ್ಞಾಪ್ರವಾಹತಂತ್ರ, ದಿನಚರಿ ಬರೆಯುವ ತಂತ್ರ, ಪತ್ರಗಳ ಮೂಲಕ ಸಂಭಾಷಣೆ.

Article Details

Section

Research Articles

Author Biography

ಧನಲಕ್ಷ್ಮಿ ಸಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ, ಬೆಂಗಳೂರು ಗ್ರಾಮಾಂತರ.

How to Cite

ಧನಲಕ್ಷ್ಮಿ ಸಿ. (2023). ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳ ವಸ್ತು ಮತ್ತು ತಂತ್ರ. ಅಕ್ಷರಸೂರ್ಯ (AKSHARASURYA), 2(10), 48 to 55. https://aksharasurya.com/index.php/latest/article/view/235

References

ಮುಕ್ತ ಚಂದ (ಸಂ) (2001), ಡಿ. ವಿ. ಪ್ರಹಲ್ಲಾದ್, ಸಂಚಯ ಪ್ರಕಾಶನ.

ಶಾಂತಿನಾಥ ದೇಸಾಯಿ (2009), ಡಾ. ಪ್ರೀತಿ ಶುಭಚಂದ್ರ, ಡಾ. ಪ್ರಧಾನ ಗುರುದತ್ತ (ಸಂ), ನವಕರ್ನಾಟಕ ಪ್ರಕಾಶನ, ಬೆಂಗಳೂರು.

ಕನ್ನಡ ನವ್ಯ ಕಾದಂಬರಿಗಳು (2002), ಡಾ. ಕೆ. ವಿಜಯಶ್ರೀ, ಶ್ರೀ ರಾಮಕ್ರಿಷ್ಣ ಪ್ರಕಾಶನ.

ಸಮಗ್ರ ವಿಮರ್ಶೆ: ಸಂಪುಟ-2 (2015), ಗಿರಡ್ಡಿ ಗೋವಿಂದರಾಜು, ಸಪ್ನ ಬುಕ್ ಹೌಸ್, ಬೆಂಗಳೂರು.

ನವ್ಯ ಸಾಹಿತ್ಯ ದರ್ಶನ (2004), ಡಾ. ಶಾಂತಿನಾಥ ದೇಸಾಯಿ, ರಾಜ್ಯ ಕೇಂದ್ರ ಗ್ರಂಥಾಲಯ.

ಪ್ರಜ್ಞಪ್ರವಾಹತಂತ್ರ (1989), ಓ. ಎಲ್. ನಾಗಭೂಷಣಸ್ವಾಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Most read articles by the same author(s)