ಅನಾಥಾಶ್ರಮಗಳಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ: ಬೆಂಗಳೂರು ನಗರ ಜಿಲ್ಲೆಯನ್ನು ಅನುಲಕ್ಷಿಸಿ

Main Article Content

ಅಮರೇಶ್ ಎಸ್.
ಪ್ರೊ. ಸಿ. ಸೋಮಶೇಖರ್,

Abstract

ಪ್ರಸ್ತುತ ಅಧ್ಯಯನವು ಬೆಂಗಳೂರು ನಗರದಲ್ಲಿನ ಅನಾಥಾಶ್ರಮಗಳಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಗುರುತಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ. ಬೆಳೆಯುತ್ತಿರುವ ಆಧುನಿಕತೆಯ ಸಾಮಾಜಿಕ ಪ್ರಕ್ರಿಯೆಯಲ್ಲಿ ಶಿಕ್ಷಣದ ಮಹತ್ವ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಇಂತಹ ಶಿಕ್ಷಣವು ಪ್ರತಿಯೊಬ್ಬರಿಗೂ ಕೂಡ ಸಲ್ಲಬೇಕಾಗಿದೆ. ಅಂತಹ ಪ್ರಶ್ನೆಯನ್ನು ಕಂಡುಕೊಂಡು ಅಧ್ಯಯನವನ್ನು ಮಾಡಲಾಗಿದೆ. ಅನಾಥಾಶ್ರಮಗಳಲ್ಲಿನ ಮಕ್ಕಳು ಶೈಕ್ಷಣಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಸಂಶೋಧನೆಯಿಂದ ಸ್ಪಷ್ಟವಾಗಿ ಕಂಡುಬಂದಿದೆ. ಬೆಂಗಳೂರಿನಲ್ಲಿ ಕಂಡುಬರುವ ಪ್ರತಿಯೊಂದು ಅನಾಥಾಶ್ರಮಗಳು ತನ್ನದೇ ಆದ ಸಮಸ್ಯೆಗಳಾದ ಆಹಾರದ ಸಮಸ್ಯೆ, ಉಡುಪಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳು ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿರುವುದು ಸಹಜವಾಗಿದೆ. ಆದರೆ ಬೆಂಗಳೂರಿನ ಅನಾಥಾಶ್ರಮಗಳಲ್ಲಿ ಜೀವಿಸುತ್ತಿರುವ ಮಕ್ಕಳು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಒಂದು ರೀತಿಯ ವಿಪರ್ಯಾಸವಾಗಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಈ ಲೇಖನವು ಅನಾಥಾಶ್ರಮಗಳಲ್ಲಿ ಜೀವಿಸುತ್ತಿರುವ ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಕುರಿತಾದ ಶಿಫಾರಸುಗಳನ್ನು ಒಳಗೊಂಡಿದೆ. 

Article Details

Section

Research Articles

Author Biographies

ಅಮರೇಶ್ ಎಸ್.

ಸಮಾಜಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಪ್ರೊ. ಸಿ. ಸೋಮಶೇಖರ್,

ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು

How to Cite

ಅಮರೇಶ್ ಎಸ್., & ಸಿ. ಸೋಮಶೇಖರ್,. (2026). ಅನಾಥಾಶ್ರಮಗಳಲ್ಲಿನ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಒಂದು ಸಮಾಜಶಾಸ್ತ್ರೀಯ ಅಧ್ಯಯನ: ಬೆಂಗಳೂರು ನಗರ ಜಿಲ್ಲೆಯನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 16(01), 05 to 10. https://aksharasurya.com/index.php/latest/article/view/2125

References

ಗಂಗಾಧರ ಬಿ.ಎಲ್. ನಿಟ್ಟೂರು, (2018), ಅನಾಥ ಮಕ್ಕಳ ಸ್ವಾವಲಂಬಿ ಬದುಕಿನ ಆಶ್ರಯದಾತೆ ಪ್ರೇಮಾ ನಾಗರಾಜ್, ಬೆಂಗಳೂರು: ಸುದ್ದಿ ಮನೆ.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ, (2016), ಕರ್ನಾಟಕದಲ್ಲಿ ಹಕ್ಕು ಆಧಾರಿತ ಮಕ್ಕಳ ರಕ್ಷಣೆ, ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ವೆಂಕಟೇಶ ಮೂರ್ತಿ ಹೆಚ್.ಎಸ್., (2022), ಮಕ್ಕಳ ಸಾಹಿತ್ಯ ಸುಗ್ಗಿ, ಬೆಂಗಳೂರು: ವಸಂತ ಪ್ರಕಾಶನ.

ಮಾಲತಿ ಎ.ಪಿ., (1986), ಮಹಿಳೆ-ಸಮಾಜ ಕಲ್ಯಾಣ, ಮೈಸೂರು: ಮನೋವಿಕಾಸ ಪುಸ್ತಕ ಮಾಲೆ, ಭಾರತ ಕುಟುಂಬ ಯೋಜನಾ ಸಂಘ.

ಈರನಗೌಡ ಪಾಟೀಲ, (2017), ಅನಾಥ ಮಕ್ಕಳ ಅಣ್ಣಯ್ಯ, ಮೈಸೂರು: ಸೃಷ್ಟಿ ಪಬ್ಲಿಕೇಶನ್.

Most read articles by the same author(s)