ಕನ್ನಡ ಪತ್ರಿಕೆಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮ

Main Article Content

ಸುಪ್ರಿಯಾ ಮಲಶೆಟ್ಟಿ

Abstract

ಭಾರತದ ರಾಷ್ಟ್ರೀಯ ಆಂದೋಲನವನ್ನು ಬಲಪಡಿಸುವಲ್ಲಿ ಹಾಗೂ ಜನರಲ್ಲಿ ಸ್ವದೇಶಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಹಿರಿದಾದದ್ದು. ಸ್ವಾತಂತ್ರ್ಯ ಹೋರಾಟಗಾರರೇ ಪತ್ರಕರ್ತರಾಗಿದ್ದುಕೊಂಡು ಪತ್ರಿಕೆಗಳನ್ನು ಹೋರಾಟದ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು. ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧಿಯವರ ವಿಚಾರಧಾರೆಗಳಿಂದ ಪ್ರೇರಿತವಾದ ಅನೇಕ ಕನ್ನಡ ಪತ್ರಿಕೆಗಳು, ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಸಮರ ಸಾರಿದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ ಮತ್ತು ಮದ್ರಾಸ್ ಕರ್ನಾಟಕದ ವಿವಿಧ ಭಾಗಗಳಿಂದ ಪ್ರಕಟವಾಗುತ್ತಿದ್ದ ವೃತ್ತಾಂತ ಚಿಂತಾಮಣಿ, ವಿಶ್ವಕರ್ನಾಟಕ, ಕರ್ಮವೀರ ಹಾಗೂ ಸಂಯುಕ್ತ ಕರ್ನಾಟಕದಂತಹ ಪತ್ರಿಕೆಗಳು ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದವು. ಬ್ರಿಟಿಷರ ಕಣ್ಣುತಪ್ಪಿಸಿ ಮುದ್ರಣಗೊಳ್ಳುತ್ತಿದ್ದ ಭೂಗತ ಪತ್ರಿಕೆಗಳ ಸಾಹಸಗಾಥೆಗಳನ್ನು ವಿವರಿಸುತ್ತಾ, ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣದಲ್ಲಿ ಕನ್ನಡ ಪತ್ರಿಕೋದ್ಯಮದ ಅವಿಸ್ಮರಣೀಯ ಕೊಡುಗೆಯನ್ನು ಮಂಡಿಸಲಾಗಿದೆ.

Article Details

Section

Research Articles

Author Biography

ಸುಪ್ರಿಯಾ ಮಲಶೆಟ್ಟಿ

ಸಹಾಯಕ ಪ್ರಾಧ್ಯಾಪಕರು, ಎಸ್‌.ಜೆ.ಎಂ.ವಿ.ಎಸ್. ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಹುಬ್ಬಳ್ಳಿ.

How to Cite

ಸುಪ್ರಿಯಾ ಮಲಶೆಟ್ಟಿ. (2023). ಕನ್ನಡ ಪತ್ರಿಕೆಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮ. ಅಕ್ಷರಸೂರ್ಯ (AKSHARASURYA), 2(08), 88 to 95. https://aksharasurya.com/index.php/latest/article/view/201

References

ಭಾರತೀಯ ಪತ್ರಿಕೋದ್ಯಮ (1969), ಡಾ. ನಾಡಿಗ ಕೃಷ್ಣಮೂರ್ತಿ.

ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು (1977), ಡಾ. ಸೂರ್ಯನಾಥ ಕಾಮತ್.

ಕರ್ನಾಟಕ ಪತ್ರಿಕಾ ಇತಿಹಾಸದ 3 ಸಂಪುಟಗಳು (1999), ಕರ್ನಾಟಕ ಪತ್ರಿಕಾ ಅಕಾಡೆಮಿ.

ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಪತ್ರಿಕೋದ್ಯಮ (2008), ಡಾ. ಎಲ್. ಪಿ. ರಾಜು.

Most read articles by the same author(s)