ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ಪ್ರವಾಸೋದ್ಯಮದ ಪಾತ್ರ

Main Article Content

ಗೋವರ್ಧನ ಪಿ. ಬಿ.

Abstract

ಪ್ರಾಚೀನ ಸ್ಮಾರಕಗಳು ಒಂದು ದೇಶದ ಸಂಸ್ಕೃತಿ, ಇತಿಹಾಸ ಮತ್ತು ವೈಶಿಷ್ಟ್ಯಗಳನ್ನು ಪ್ರತಿನಿಧಿಸುವ ಅಮೂಲ್ಯ ಸಂಪತ್ತು. ಅವುಗಳಲ್ಲಿ ನಮ್ಮ ಹಿಂದಿನ ಪೀಳಿಗೆಯ ಜ್ಞಾನ, ಕಲೆ, ಜೀವನಶೈಲಿಯ ಗುರುತುಗಳು ಅಡಗಿಕೊಂಡಿವೆ. ಸ್ಮಾರಕಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಕರ್ತವ್ಯವಷ್ಟೇ ಅಲ್ಲ, ಸಮಾಜದ ಸಮಗ್ರ ಜವಾಬ್ದಾರಿಯೂ ಆಗಿದೆ. ಈ ಸಂರಕ್ಷಣೆಯಲ್ಲಿ ಪ್ರವಾಸೋದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರವಾಸೋದ್ಯಮವು ಸ್ಮಾರಕಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತದೆ ಮತ್ತು ಅವುಗಳ ಮಹತ್ವವನ್ನು ಪ್ರಪಂಚದಾದ್ಯಂತ ಹರಡುತ್ತದೆ. ಪ್ರವಾಸಿಗರಿಂದ ದೊರೆಯುವ ಆದಾಯವು ಸ್ಮಾರಕಗಳ ಮರುಸ್ಥಾಪನೆ, ನಿರ್ವಹಣೆ ಹಾಗೂ ಅಭಿವೃದ್ಧಿಗೆ ನೆರವಾಗುತ್ತದೆ ಮತ್ತು ಸ್ಥಳೀಯ ಜನರ ನಿರುದ್ಯೋಗ ನಿವಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಜವಾಬ್ದಾರಿಯುತ ಪ್ರವಾಸೋದ್ಯಮವು ಸ್ಮಾರಕಗಳ ಸುತ್ತಲಿನ ಪರಿಸರವನ್ನು ರಕ್ಷಿಸುತ್ತದೆ. ಅಲ್ಲದೇ ಅಲ್ಲಿ ದೊರೆಯುವ ಮಾರ್ಗದರ್ಶಕರು, ವಸ್ತುಸಂಗ್ರಹಾಲಯಗಳು ಹಾಗೂ ಮಾಹಿತಿ ಕೇಂದ್ರಗಳ ಮೂಲಕ ಜನಸಾಮಾನ್ಯರಲ್ಲಿಯೂ ಇತಿಹಾಸ ಮತ್ತು ಸಂಸ್ಕೃತಿಯ ಪರಿಕಲ್ಪನೆ ವೃದ್ಧಿಯಾಗುತ್ತದೆ.

Article Details

Section

Research Articles

Author Biography

ಗೋವರ್ಧನ ಪಿ. ಬಿ.

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾದಾಮಿ.

How to Cite

ಗೋವರ್ಧನ ಪಿ. ಬಿ. (2026). ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ಪ್ರವಾಸೋದ್ಯಮದ ಪಾತ್ರ. ಅಕ್ಷರಸೂರ್ಯ (AKSHARASURYA), 11(06), 121 to 126. https://aksharasurya.com/index.php/latest/article/view/1961

References

ಎಚ್. ಎಲ್. ನಾಗೇಗೌಡ., (2006), ‘ಪ್ರವಾಸಿ ಕಂಡ ಇಂಡಿಯಾ’ ಐಬಿಎಚ್ ಪ್ರಕಾಶನ ಬೆಂಗಳೂರು.

ಕೆ. ಎಸ್. ನಾಗಪತಿ., (2012), ‘ಪ್ರವಾಸೋದ್ಯಮ ಅಭಿವೃದ್ಧಿ ಒಂದು ಹೊಸ ಆಯಾಮ’

ವಿಜಯಲಕ್ಷ್ಮಿ ಕೆ. ಎಸ್., (2005), ‘ಇತಿಹಾಸ ಮತ್ತು ಪ್ರವಾಸೋದ್ಯಮ’

ಶೀಲಕಾಂತ ಪತ್ತಾರ., (2018), 'ಬಾದಾಮಿ ಸಾಂಸ್ಕೃತಿಕ ಅಧ್ಯಯನ' ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಸಿದ್ದಪ್ಪ., ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಪಿಎಚ್. ಡಿ ಮಹಾಪ್ರಬಂಧ ಕನ್ನಡ ವಿಶ್ವವಿದ್ಯಾಲಯ ಹಂಪಿ.

ಮೊರಾಬ ರಮೇಶ್., ಬಾಗಲಕೋಟೆ ಜಿಲ್ಲೆಯ ಪ್ರವಾಸೋದ್ಯಮ ಪಿಎಚ್. ಡಿ ಮಹಾಪ್ರಬಂಧ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.

ಸವಿತಾ., ಪ್ರವಾಸಿ ಕೇಂದ್ರಗಳಲ್ಲಿ ಕಿರು ಉದ್ಯಮಗಳ ಅಭಿವೃದ್ಧಿ ಒಂದು ಅಧ್ಯಯನ ಎಂ.ಫಿಲ್ ಕೃತಿ. ಕರ್ನಾಟಕ ತಿಯೋಲಾಜಿಕಲ್ ಸಂಶೋಧನಾ ಕೇಂದ್ರ ಬಲ್ಮಠ ಮಂಗಳೂರು. ಕನ್ನಡ ವಿಶ್ವವಿದ್ಯಾಲಯ, ಹಂಪಿ.

Most read articles by the same author(s)