ಜಾನಪದ ಸಾಹಿತ್ಯದಲ್ಲಿ ಐತಿಹಾಸಿಕ ನಾಯಕರು
Main Article Content
Abstract
ಜಾನಪದ ಸಾಹಿತ್ಯವು ಜನರ ಬದುಕು, ನಂಬಿಕೆ, ಹೋರಾಟ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಜೀವಂತ ಪರಂಪರೆ. ಈ ಸಾಹಿತ್ಯದಲ್ಲಿ ಐತಿಹಾಸಿಕ ನಾಯಕರು ಜನಮನದಲ್ಲಿ ರೂಪುಗೊಂಡ ವೀರತ್ವದ ಪ್ರತಿರೂಪಗಳಾಗಿ ಕಾಣಿಸುತ್ತಾರೆ. ಅವರು ಕೇವಲ ಐತಿಹಾಸಿಕ ವ್ಯಕ್ತಿಗಳಷ್ಟೇ ಅಲ್ಲ; ಜನರ ಆಶೆ-ಆಕಾಂಕ್ಷೆ, ನ್ಯಾಯ, ಬುದ್ಧಿ ಮತ್ತು ಸ್ವಾಭಿಮಾನವನ್ನು ಪ್ರತಿನಿಧಿಸುವ ಪಾತ್ರಗಳಾಗಿದ್ದಾರೆ. ಜನಪದ ಹಾಡುಗಳು, ಕಥೆಗಳು, ಕಾವ್ಯಗಳು ಮತ್ತು ಬಯಲಾಟಗಳಲ್ಲಿ ಈ ನಾಯಕರು ಅತಿಶಯೋಕ್ತಿಯಿಂದ, ಪೌರಾಣಿಕ ಅಂಶಗಳೊಂದಿಗೆ ಚಿತ್ರಿತರಾಗುತ್ತಾರೆ. ಅವರ ಶೌರ್ಯ, ತ್ಯಾಗ, ಧೈರ್ಯ ಮತ್ತು ಜನಪರ ಹೋರಾಟಗಳು ಪ್ರಮುಖವಾಗಿ ಹೇಳಲ್ಪಡುತ್ತವೆ. ಇತಿಹಾಸದಲ್ಲಿ ಕಂಡ ಘಟನೆಗಳು ಜನಪದ ರೂಪದಲ್ಲಿ ಕಾಲಕಾಲಾಂತರವಾಗಿ ರೂಪಾಂತರಗೊಂಡು ಜನರ ಮನದಾಳದಲ್ಲಿ ಶಾಶ್ವತವಾಗಿ ಉಳಿಯುತ್ತವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಎ.ಎಂ. ಅಣ್ಣೇಗೇರಿ : ಡಾ. ಜೆ. ಎಫ್. ಫ್ಲೀಟ್
ನಿಂಗಣ್ಣ ಸಣ್ಣಕ್ಕಿ ಮತ್ತು ಶಿವರುದ್ರಪ್ಪ ಬಾವಿಕಟ್ಟಿ : ಜಾನಪದದಲ್ಲಿ ಕಿತ್ತೂರು
ಸೋಮಶೇಖರ ಇಮ್ರಾಪೂರ : ಜಾನಪದ ಹಾಡುಗಳಲ್ಲಿ ನರಗುಂದ ಬಾಬಾಸಾಹೇಬ
ವೈ.ಕೆ. ಮುದ್ದು ಕೃಷ್ಣ (ಸಂ) : ಸ್ವರ್ಣ ಸಂಚಯ 1998
ಶೀಲಾಕಾಂತ ಪತ್ತಾರ (ಸಂ) : ಕೃಷ್ಣ ಪ್ರಭೆ 2000
ಎ.ಎಸ್. ಹೂಗಾರ (ಸಂಗ್ರಹ) : ಕ್ರಾಂತಿವೀರ ಬಾಬಾಸಾಹೇಬ
ನಿಂಗಣ್ಣ ಸಣ್ಣಕ್ಕಿ : ಜನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ
ಟಿ.ಎಸ್. ರಾಜಪ್ಪ (ಸಂ) : ಧಾರವಾಡ ಜಿಲ್ಲೆಯ ಲಾವಣಿಗಳು
ವೀರಣ್ಣ ರಾಜೂರ (ಸಂ) : ಜಾನಪದ ಸಾಹಿತ್ಯ ದರ್ಶನ
ಜೀ. ಶಂ. ಪರಮಶಿವಯ್ಯ : ಗದ್ದಗಿಮಠದ ಬರಹಗಳು
ಆರ್.ಬಿ. ಮೂಲಗಿ : ಧಾರವಾಡ ಜಿಲ್ಲೆಯ ಜನಪದ ಸಂಪ್ರದಾಯಗಳು
ಕೆ.ಎನ್. ದೊಡ್ಡಮನಿ : ಬೆಳಗಾವಿ ಜಿಲ್ಲೆಯ ಜನಪದ ಕಾವ್ಯ ಪ್ರಕಾರಗಳು