ಕುಲಕಸುಬಿನ ವಚನಕಾರರು
Main Article Content
Abstract
ವಚನ ಸಾಹಿತ್ಯ ಕನ್ನಡದ ಹೆಮ್ಮೆಯ ಹಾಗೂ ಕ್ರಾಂತಿಯ ಯುಗವಾಗಿತ್ತು. ಸಾಹಿತ್ಯ ವೈಭವದ ಗದ್ದುಗೆಯನ್ನು ಬಿಟ್ಟು ಸಾಮಾನ್ಯರ ಬಳಿ ನಡೆದ ಕಾಲವದು. ಜನಸಾಮಾನ್ಯರ ವಾಣಿಯಿಂದ ಸಾಹಿತ್ಯ ರಚನೆ ಅಷ್ಟೇ ಅಲ್ಲದೆ ಜೀವನ ತತ್ವ, ನೈತಿಕತೆ, ಸಾಮಾಜಿಕ ನ್ಯಾಯ, ಶ್ರಮದ ಸಮಾನತೆಯನ್ನು ಕೇಂದ್ರವಾಗಿಸಿ ಎಲ್ಲಾ ಜಾತಿಯ ಹಾಗೂ ಎಲ್ಲಾ ವೃತ್ತಿಯವರನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಶ್ರಮದಿಂದ ಜೀವನ ಕಟ್ಟಿಕೊಳ್ಳುವುದು ಹೀನವಲ್ಲ, ಅದೊಂದು ಪವಿತ್ರ ಕಾರ್ಯವೆಂದು ಭಾವಿಸಿದವರು ಕುಲಕಸುಬಿನವರು. ಕುಲಕ್ಕೆ ತಕ್ಕಂತೆ ಒಂದೊಂದು ವೃತ್ತಿಯನ್ನು ಮಾಡುವವರನ್ನು ಶ್ರೇಷ್ಠ-ಕನಿಷ್ಠ ಎನ್ನದೆ ಗೌರವವನ್ನು ನೀಡಿ ಶ್ರಮ ಮತ್ತು ಮಾನವ ಮೌಲ್ಯಗಳನ್ನು ಉತ್ತೇಜಿಸಲಾಯಿತು.
ಲಿಂಗ ಭೇದವಿಲ್ಲದ, ಜಾತಿಭೇದವಿಲ್ಲದ ಆದರ್ಶದ ತತ್ವಗಳನ್ನು ವಚನಗಳಲ್ಲಿ ಕಾಣಬಹುದು. ಇಲ್ಲಿ ಕಾಯಕವೆನ್ನುವುದು ಕೇವಲ ಭೌತಿಕ ಕ್ರಿಯೆಯಲ್ಲ, ಆತ್ಮದೊಳಗಣ ಜ್ಞಾನ. ಲಿಂಗ ಪೂಜೆ ಮತ್ತು ಕಾಯಕಗಳು ಎರಡು ಸಮಾನವಾದವು. “ಕಾಯಕದಲ್ಲಿ ನಿರತನಾದವನು ಲಿಂಗಪೂಜೆಯನ್ನಾದರೂ ಮರೆಯಬೇಕು” ಎನ್ನುವ ಶರಣರ ನುಡಿಗಳು ಹೆಚ್ಚು ಆಕರ್ಷಿತವಾದವು.
ಶರಣರು ಉದಯವಾಗುವ ಹೊತ್ತಿಗೆ ಬೌದ್ಧಿಕ ವೃತ್ತಿ ಶ್ರೇಷ್ಠ, ದೈಹಿಕ ವೃತ್ತಿ ಕನಿಷ್ಠವೆಂಬ ಮೇಲು-ಕೀಳು ಬೆಳೆದು ನಿಂತು ಮಾನ-ಅಪಮಾನದ ಬಣ್ಣ ಪಡೆದಿತ್ತು. ಈ ಕೃತಕ ತಾರತಮ್ಯವನ್ನು ಅಲ್ಲಗಳೆದು ವೃತ್ತಿಯಲ್ಲಿ ಸಮಾನತೆಯನ್ನು ಸಾರಿದರು. ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಮುಂತಾದ ವಚನಕಾರರನ್ನು ಕಾಣಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ.ಎಂ., (1991), ವಚನಕಾರರು ಮತ್ತು ಸಮಾಜ, ಹಂಪಿ: ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ.
ಶಿವರುದ್ರಪ್ಪ ಜಿ.ಎಸ್., (1987), ವಚನ ಸಾಹಿತ್ಯ, ಮೈಸೂರು: ಪ್ರಸಾರಂಗ, ಮೈಸೂರು ವಿಶ್ವವಿದ್ಯಾಲಯ.
ರಂಗಪ್ಪ, (2004), ವಚನ ಚಳವಳಿ ಮತ್ತು ಸಾಮಾಜಿಕ ಸಮಾನತೆ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಚನ್ನಬಸವಣ್ಣ, (1998), ಶರಣ ಸಂಸ್ಕೃತಿ ಮತ್ತು ಕಾಯಕ ತತ್ವ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪ್ರಕಾಶನ.
ನಿರಂಜನಸ್ವಾಮಿ ಎಸ್. ಸಿ., (2010), ಕುಲ-ಕಸುಬಿನ ವಚನಕಾರರು, ಬೆಂಗಳೂರು: ಸಾಹಿತ್ಯ ಅಕಾಡೆಮಿ.
ಬಸವಣ್ಣ, (2001), ಬಸವ ವಚನಗಳು, ಹಂಪಿ: ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ.
ತಿಪ್ಪೇಸ್ವಾಮಿ ಎಚ್., (1995), ವಚನ ಸಾಹಿತ್ಯದಲ್ಲಿ ಸಮಾಜ ಚಿಂತನೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಪಂಡಿತಾರಾಧ್ಯ, (2008), ಶರಣರ ತತ್ವ ಮತ್ತು ಜೀವನ ದೃಷ್ಟಿ, ಬೆಂಗಳೂರು: ನವಕರ್ನಾಟಕ ಪ್ರಕಾಶನ.