ಕನ್ನಡ ಸಾಹಿತ್ಯದ ಜಾನಪದ ಕ್ಷೇತ್ರದಲ್ಲಿ ಡಾ. ಡಿ.ಕೆ.ರಾಜೇಂದ್ರ ಅವರ ಪಾತ್ರ, ಕೊಡುಗೆ ಮತ್ತು ಚಿಂತನೆಗಳ ಒಂದು ನೋಟ

Main Article Content

ಡಾ. ಎಂ. ಎನ್. ದಿನೇಶ್‌

Abstract

ಕನ್ನಡ ಜಾನಪದ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಡಾ. ಡಿ.ಕೆ. ರಾಜೇಂದ್ರ ಅವರ ಕೊಡುಗೆ ಅತ್ಯಮೂಲ್ಯವಾದದ್ದು. ತುಮಕೂರು ಜಿಲ್ಲೆಯವರಾದ ಇವರು ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ ಹಾಗೂ ವಿಶೇಷವಾಗಿ ‘ಕರಪಾಲ ಮೇಳ’ದ ಕುರಿತು ಆಳವಾದ ಅಧ್ಯಯನ ನಡೆಸಿ, ಜನಪದ ಕಲೆಯನ್ನು ಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ವಿಮರ್ಶೆ, ಪ್ರಬಂಧ, ಸಮೀಕ್ಷೆ ಮತ್ತು ಸಂಪಾದನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಜನಪದವನ್ನು ಕೇವಲ ಗತಕಾಲದ ಇತಿಹಾಸವಾಗಿ ನೋಡದೆ ಜೀವಂತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಗುರುತಿಸಿದ್ದಾರೆ. ಸಸ್ಯ, ಪ್ರಾಣಿ ಮತ್ತು ಆಕಾಶ ಜಾನಪದದಂತಹ ಹೊಸ ಆಯಾಮಗಳತ್ತ ಸಂಶೋಧನೆ ವಿಸ್ತರಿಸಬೇಕೆಂಬ ಅವರ ವೈಚಾರಿಕ ನಿಲುವುಗಳು ಹಾಗೂ ಸಾಂಸ್ಕೃತಿಕ ಚಿಂತನೆಗಳನ್ನು ಇಲ್ಲಿ ಸವಿವರವಾಗಿ ಕಟ್ಟಿಕೊಡಲಾಗಿದೆ. ಮೌಖಿಕ ಪರಂಪರೆಯನ್ನು ಅಕ್ಷರ ಮಾಧ್ಯಮಕ್ಕೆ ಇಳಿಸುವಲ್ಲಿ ಅವರ ಶೈಕ್ಷಣಿಕ ಬದ್ಧತೆ ಮತ್ತು ಸಾಧನೆಗಳ ಸಮಗ್ರ ಚಿತ್ರಣವನ್ನು ಒದಗಿಸಲಾಗಿದೆ.

Article Details

Section

Research Articles

Author Biography

ಡಾ. ಎಂ. ಎನ್. ದಿನೇಶ್‌

ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ.

How to Cite

ಎಂ. ಎನ್. ದಿನೇಶ್‌. (2026). ಕನ್ನಡ ಸಾಹಿತ್ಯದ ಜಾನಪದ ಕ್ಷೇತ್ರದಲ್ಲಿ ಡಾ. ಡಿ.ಕೆ.ರಾಜೇಂದ್ರ ಅವರ ಪಾತ್ರ, ಕೊಡುಗೆ ಮತ್ತು ಚಿಂತನೆಗಳ ಒಂದು ನೋಟ. ಅಕ್ಷರಸೂರ್ಯ (AKSHARASURYA), 18(02), 01 to 07. https://aksharasurya.com/index.php/latest/article/view/1767

References

ಚಿದಾನಂದಮೂರ್ತಿ ಎಂ., (1977), ಗ್ರಾಮೀಣ, ಬೆಂಗಳೂರು: ಬಾಪ್ಕೊ ಪ್ರಕಾಶನ.

ಪರಮಶಿವಯ್ಯ ಜೀ. ಶಂ., (1995), ಜಾನಪದ ಕಲೆಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ಎಣ್ಣೆಕಟ್ಟೆ ಚಿಕ್ಕಣ್ಣ, (2006), ತುಮಕೂರು ಜಿಲ್ಲಾ ಜಾನಪದ ಕಲೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಚನ್ನಬಸಪ್ಪ ಗೊ. ರು. (ಸಂ.), (1977), ಕರ್ನಾಟಕ ಜನಪದ ಕಲೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಪರಮಶಿವಯ್ಯ ಜೀ. ಶಂ., (1979), ದಕ್ಷಿಣ ಕರ್ನಾಟಕದ ಜಾನಪದ ಕಲೆಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.

ಪರಮಶಿವಯ್ಯ ಜೀ. ಶಂ., (1979), ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ.