ಕಪ್ಪತ್ತಗುಡ್ಡ ಪರಿಸರದ ಸ್ಮಾರಕಶಿಲ್ಪಗಳು

Main Article Content

ಸರೋಜಿನಿ ನೀ. ಹೊಸಕೇರಿ

Abstract

ಸ್ಮಾರಕಶಿಲ್ಪಗಳೆಂದರೆ ಹೆಸರೇ ಹೇಳುವಂತೆ ಯುದ್ಧದಲ್ಲಿ ಹೋರಾಡಿ ಮಡಿದವರ ಹಾಗೂ ಗತಿಸಿದವರ ಸ್ಮರಣೆಗಾಗಿ ನಿಲ್ಲಿಸಿರುವ ಶಿಲ್ಪಗಳಾಗಿವೆ. ಈ ಶಿಲ್ಪಗಳನ್ನು ಹಲವಾರು ಇತಿಹಾಸಕಾರರು ಗುರುತಿಸಿದ್ದಾರೆ. ಈ ಸ್ಮಾರಕಶಿಲ್ಪಗಳು ಹಲವಾರು ವಿಷಯ ವಸ್ತುಗಳ ಬಗ್ಗೆ, ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳ ಬಗೆಗೆ ತಿಳಿಸುತ್ತವೆ. ಒಬ್ಬ ವ್ಯಕ್ತಿ ಮರಣ ಹೊಂದಿದ ಮೇಲೆ ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ಇರುವುದನ್ನು ಕಾಣಬಹುದು. ಸ್ಮಾರಕಶಿಲ್ಪಗಳು ಒಂದು ರೀತಿಯಲ್ಲಿ ಸ್ವರ್ಗ ಮತ್ತು ನರಕದ ಪರಿಕಲ್ಪನೆಗಳನ್ನು ಗಟ್ಟಿಗೊಳಿಸಿವೆ. ಹೀಗಾಗಿ ಮರಣ ಹೊಂದಿದ ವ್ಯಕ್ತಿಯು ಅವನ ಧರ್ಮಕ್ಕೆ ಸಂಬಂಧಿಸಿದ ದೇವರಿರುವಲ್ಲಿಗೆ ಹೋಗುತ್ತಾನೆ ಎಂಬ ಪರಿಕಲ್ಪನೆ ಇರುತ್ತಿತ್ತು. ಇದರಿಂದ ಸ್ವರ್ಗದ ಪರಿಕಲ್ಪನೆ ಅಂದಿನ ಜನರಲ್ಲಿ ಇತ್ತೆಂದು ನಮಗೆ ತಿಳಿದುಬರುತ್ತದೆ.
ಸ್ಮಾರಕ ಎಂಬ ಪದವು ಕಲೆ ಮತ್ತು ವಾಸ್ತುಶಿಲ್ಪ ಶಾಸ್ತ್ರದಲ್ಲಿ ಬಹು ಅರ್ಥಪೂರ್ಣವಾದ ಹಾಗೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಸ್ಮಾರಕ ಎಂಬ ಪದವು ಸ್ಮೃ+ಸ್ಮರಿಸು ಎಂಬ ಧಾತು ರೂಪವು, ಅಂದರೆ ಯಾವುದು ಸ್ಮರಣೆಗೆ ಬರುವಂತೆ ಮಾಡುತ್ತದೆಯೋ ಅದೇ ಸ್ಮಾರಕ ಎಂಬ ಪರಿಕಲ್ಪನೆ ಬರುತ್ತದೆ. ಶಿಲ್ಪ ಎನ್ನುವುದು ವಾಸ್ತುಶಿಲ್ಪದ ಒಂದು ವಿಭಾಗವಾಗಿದ್ದು, ಅದರ ಉಪವಿಭಾಗವೇ ಈ ಸ್ಮಾರಕಶಿಲ್ಪಗಳಾಗಿವೆ. ಸ್ಮಾರಕಶಿಲ್ಪ ಎಂಬ ಪದವು Memorial Stone ಎಂಬ ಆಂಗ್ಲ ಭಾಷಾರೂಪವಾಗಿದ್ದು, Memorial ಎಂದರೆ ಸ್ಮರಣೆ, Stone ಎಂದರೆ ಶಿಲೆ ಎಂಬ ಅರ್ಥವನ್ನು ನೀಡುವುದು. ಅಂದರೆ ಯಾವುದೇ ವ್ಯಕ್ತಿಯ ಸ್ಮರಣೆಗಾಗಿ ನಿಲ್ಲಿಸಿದ ಶಿಲೆಗಳನ್ನು ಸ್ಮಾರಕಶಿಲ್ಪಗಳು ಎಂದು ಕರೆಯುವರು. ಅವುಗಳು ಕಟ್ಟಡ, ಸ್ತಂಭಗಳು, ಶಾಸನ, ಯಾವುದೇ ರೂಪದಲ್ಲಿಯೂ ಇರಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಯಾವುದೇ ಒಂದು ಸನ್ನಿವೇಶದಲ್ಲಿ ಅಥವಾ ಘಟನೆಯಲ್ಲಿ ಮಡಿದ ಹಾಗೂ ಗತಿಸಿದವರ ನೆನಪಿಗಾಗಿ ಹಾಕಿಸುವ ಶಿಲ್ಪಗಳನ್ನು ಸ್ಮಾರಕಶಿಲ್ಪಗಳೆಂದು ಹೇಳಬಹುದು. ಯುದ್ಧದಲ್ಲಿ ಮರಣಿಸಿದ ವ್ಯಕ್ತಿಯನ್ನು ದೈವತ್ವ ಕ್ಕೇರಿಸಿ ಅವರನ್ನು ಗೌರವಿಸುವ ರೂಪದಲ್ಲಿ ಈ ಸ್ಮಾರಕಗಳನ್ನು ಇಡುವ ಕಲೆ ಬೆಳೆಯಿತು. ಇವುಗಳೇ ಮುಂದೆ ಸ್ಮಾರಕಶಿಲ್ಪಗಳಾಗಿ ರೂಪುಗೊಂಡವು.

Article Details

Section

Research Articles

Author Biography

ಸರೋಜಿನಿ ನೀ. ಹೊಸಕೇರಿ

ಇತಿಹಾಸ ಸಹ ಪ್ರಾಧ್ಯಾಪಕರು, ಸ. ಪ್ರ. ದ. ಕಾಲೇಜು, ಕಲಾದಗಿ, ತಾ. ಜಿ: ಬಾಗಲಕೋಟ.

How to Cite

ಸರೋಜಿನಿ ನೀ. ಹೊಸಕೇರಿ. (2025). ಕಪ್ಪತ್ತಗುಡ್ಡ ಪರಿಸರದ ಸ್ಮಾರಕಶಿಲ್ಪಗಳು. ಅಕ್ಷರಸೂರ್ಯ (AKSHARASURYA), 9(01), 170 to 180. https://aksharasurya.com/index.php/latest/article/view/1580

References

ಯಾಳಗಿ ಮಹಾಲಿಂಗ., (ಸಂ) ಮುಂಡರಗಿ ನಾಡ ಸ್ವಾತಂತ್ರ್ಯ ಸಂಗ್ರಾಮ, ಪು.ಸಂ.45.1997

ಗೋಪಾಲ.ಆರ್., ಗದಗ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪು.ಸಂ.47.2006

ಹಣಜಿ ಬಿ.ಎಸ್., ಕಪ್ಪತ್ತಗಿರಿ, ಪು.ಸಂ.22.1975

ನಾಯಕ ಡಿ.ಬಿ., ಕರ್ನಾಟಕ ಗ್ರಾಮ ಚರಿತ್ರೆ ಕೋಶ: ಗದಗ ಜಿಲ್ಲೆ, ಪು.ಸಂ.110. 2017

ಕಲಬುರ್ಗಿ ಎಂ.ಎಂ., ಧಾರವಾಡ ಜಿಲ್ಲಾ ಶಾಸನ ಸೂಚಿ, SII, XI, Pt, II No 126-181-182 1975

ಬಾಲಸುಬ್ರಹ್ಮಣ್ಯ, ಸಿ. ಎಸ್.ವಾಸುದೇವನ್, ರಮೇಶ, ನಾಯಕ., ಕರ್ನಾಟಕ ದೇವಾಲಯ ಕೋಶ, ಗದಗ ಜಿಲ್ಲೆ, ಪು.ಸಂ.146.2007

ಕಿದಿಯೂರ ಹ.ರಾ., ನಮ್ಮ ಗದಗ-ಬೆಟಗೇರಿ, ಪು.ಸಂ.336.1975

ಗದಗ ಜಿಲ್ಲೆಯ ಅಂಕಿ ಅಂಶಗಳ ನೋಟ-1998-99, ಪು.ಸಂ.3, 6, 8, 9, 10.1998-99,

Most read articles by the same author(s)