ಪಾವಗಡ ತಾಲ್ಲೂಕಿನ ವೀರನಾಯಕರನ್ನು ಕುರಿತ ಆಚರಣೆಗಳು: ಒಂದು ನೋಟ

Main Article Content

ರಂಗಲಕ್ಷ್ಮಿ ಪಿ. ಎ.

Abstract

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಶ್ರೀಮಂತ ಜಾನಪದೀಯ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಜನಪದ ವೀರನಾಯಕರ ಆರಾಧನಾ ಪದ್ಧತಿಗಳು ಮತ್ತು ಆಚರಣೆಗಳು ವಿಶಿಷ್ಟವಾಗಿವೆ. ಜನಪದ ಧರ್ಮದ ಬೆನ್ನೆಲುಬಾಗಿರುವ ಈ ಆಚರಣೆಗಳು ನಂಬಿಕೆಯ ತಳಹದಿಯ ಮೇಲೆ ನಿಂತಿವೆ. ಜಾತ್ರೆ ಮತ್ತು ಉತ್ಸವಗಳ ಸಂದರ್ಭದಲ್ಲಿ ಭಕ್ತರು ಭಯಭಕ್ತಿಯಿಂದ ನಿರ್ವಹಿಸುವ ಸಾರುವಿಕೆ, ಅಗ್ನಿಕೊಂಡ (ಕೆಂಡ ಹಾಯುವುದು), ಬೆನ್ನು ಸಿಡಿ ಆಡುವುದು, ಬಾಯಿಬೀಗ ಹಾಕಿಸಿಕೊಳ್ಳುವುದು ಹಾಗೂ ಹತ್ತು ಬೆಳ್ಳಾರುತಿ (ಬೆರಳುಗಳ ದೀಪ) ಮುಂತಾದ ಕಠಿಣ ಹಾಗೂ ವೈವಿಧ್ಯಮಯ ಆಚರಣೆಗಳನ್ನು ಇಲ್ಲಿ ಕಾಣಬಹುದು . ಸ್ವಾರಮ್ಮ ಮತ್ತು ಇತರ ಗ್ರಾಮದೇವತೆಗಳ ಜಾತ್ರೆಗಳಲ್ಲಿ ಕಂಡುಬರುವ ಈ ವಿಧಿವಿಧಾನಗಳು ಆಯಾ ಸಮುದಾಯದ ಸಾಂಸ್ಕೃತಿಕ ನಿಷ್ಠೆ, ಹರಕೆ ತೀರಿಸುವ ಬದ್ಧತೆ ಮತ್ತು ತಲೆಮಾರುಗಳಿಂದ ಮುಂದುವರೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳ ಜೀವಂತಿಕೆಯನ್ನು ಪ್ರತಿಬಿಂಬಿಸುತ್ತವೆ.

Article Details

Section

Research Articles

Author Biography

ರಂಗಲಕ್ಷ್ಮಿ ಪಿ. ಎ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆರ್. ಟಿ. ನಗರ, ಬೆಂಗಳೂರು.

How to Cite

ರಂಗಲಕ್ಷ್ಮಿ ಪಿ. ಎ. (2023). ಪಾವಗಡ ತಾಲ್ಲೂಕಿನ ವೀರನಾಯಕರನ್ನು ಕುರಿತ ಆಚರಣೆಗಳು: ಒಂದು ನೋಟ. ಅಕ್ಷರಸೂರ್ಯ (AKSHARASURYA), 2(06), 179 to 188. https://aksharasurya.com/index.php/latest/article/view/157

References

ಪಾವಗಡ ತಾಲ್ಲೂಕಿನ ಜಾನಪದ ವೀರನಾಯಕರು (2005), ಡಾ. ರಂಗಲಕ್ಷ್ಮಿ ಪಿ. ಎ., ಸುಮುಖ ಪ್ರಕಾಶನ, ಮಾಗಡಿರೋಡ್, ಬೆಂಗಳೂರು.

ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು (2015), ಜೀ ಶಂ ಪರಮಶಿವಯ್ಯ, ಪ್ರಸಾರಾಂಗ, ಮೈಸೂರು.

ಕರ್ನಾಟಕ ಜಾನಪದ ಕಥೆಗಳು, ಡಾ ಜಿ. ಜವರೇ ಗೌಡ, ಪ್ರಸಾರಾಂಗ, ಮೈಸೂರು ವಿ.ವಿ.

ಉತ್ತರ ಕರ್ನಾಟಕದ ಜಾನಪದ ಕಲೆಗಳು (2011), ಸಿಂಪಿ ಲಿಂಗಣ್ಣ, ಸಾಹಿತ್ಯ ಅಕಾಡೆಮಿ, ನವದೆಹಲಿ.

Most read articles by the same author(s)