ಭಾರತದಲ್ಲಿ ಭೂ ಹಿಡುವಳಿ ವ್ಯವಸ್ಥೆ

Main Article Content

ಜಗದೀಶ

Abstract

ಯಾವುದೇ ಒಂದು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ನಿರ್ಧರಿಸುವಲ್ಲಿ ಕೃಷಿ ಮತ್ತು ಉದ್ದಿಮೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭಾರತವು ಹಳ್ಳಿಗಳ ನಾಡು. ಕೃಷಿಯೇ ಇಲ್ಲಿಯ ಜನರ ಜೀವನಾಡಿ, ನಮ್ಮ ಅರ್ಥ ವ್ಯವಸ್ಥೆಯ ಬೆನ್ನೆಲುಬು. ಕೃಷಿಯು ಗ್ರಾಮೀಣ ಜನರ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗೆ ಭೂಮಿಯು ಆರ್ಥಿಕ ಅಭಿವೃದ್ಧಿಗಾಗಿ, ದೇಶದ ಬೆಳವಣಿಗೆಗಾಗಿ ಮತ್ತು ವ್ಯಕ್ತಿಯ ಬದುಕಿಗಾಗಿ ಪ್ರಮುಖವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯ ಅರ್ಥದಲ್ಲಿ ಭೂ ಹಿಡುವಳಿ ಪದ್ಧತಿ ಎಂದರೆ ಸಾಗುವಳಿ ಮಾಡುವ ವ್ಯಕ್ತಿಯು ಹೊಂದಿರುವ ಭೂಮಿ ಮತ್ತು ಅದರ ಬಗೆಗೆ ಅವನ ಹಕ್ಕು ಮತ್ತು ಜವಾಬ್ದಾರಿಯನ್ನು ನಿರ್ಧರಿಸುವ ಪದ್ಧತಿಯಾಗಿದೆ, ಅಂದರೆ ಭೂ ಸ್ವಾಮ್ಯದ ಬಗ್ಗೆ ವ್ಯಕ್ತಿ ಹೊಂದಿರುವ ಅಧಿಕಾರವನ್ನು ಮತ್ತು ಶಾಸನಬದ್ಧವಾದ ಹಕ್ಕನ್ನು ತೋರಿಸಿಕೊಡುತ್ತದೆ. ಭೂ ಒಡೆತನ ಪದ್ಧತಿಯನ್ನು ಭೂ ಹಿಡುವಳಿ ಪದ್ಧತಿ, ಭೂ ಸ್ವಾಮ್ಯ ಪದ್ಧತಿ ಎಂದೂ ಸಹ ಕರೆಯುತ್ತಾರೆ. ಭೂ ಹಿಡುವಳಿ ಪದ್ಧತಿಯನ್ನು ಆಂಗ್ಲ ಭಾಷೆಯಲ್ಲಿ LAND TENURE ಎನ್ನುತ್ತಾರೆ. TENURE ಎಂಬ ಪದವು TENIYO ಎಂಬ ಲ್ಯಾಟಿನ್ ಭಾಷೆಯ ಪದದಿಂದ ಬಂದಿದ್ದು, ಹಿಡಿಯುವುದು, ಇಟ್ಟುಕೊಳ್ಳುವುದು ಎಂಬ ಅರ್ಥವನ್ನು ಹೊಂದಿದೆ.

Article Details

Section

Research Articles

Author Biography

ಜಗದೀಶ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ರುದ್ರಗೌಡ ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಬೀಳಗಿ.

 

References

Kosambi DD. An Introduction to the Society of Indian History. Diamond Publications.

Baden Powell BH. The Land System of British India. Oxford University Press.

Sharma RS. Indian Feudalism. Oxford University Press.

Singh U. A History of Ancient and Early Medieval India. Chirag Publications.

ಸದಾಶಿವ K. ಸಮಗ್ರ ಭಾರತದ ಇತಿಹಾಸ. ಪುಸ್ತಕ ಪ್ರಕಾಸನ, ಮೈಸೂರು.

K N A. ಸಮಗ್ರ ಭಾರತದ ಇತಿಹಾಸ. ಸ್ವಪ್ನ ಬುಕ್‌ ಹೌಸ್‌, ಬೆಂಗಳೂರು.

Chandra B. ಸ್ವಾತಂತ್ರ್ಯೋತ್ತರ ಭಾರತ. ನವ ಕರ್ನಾಟಕ ಪ್ರಕಾಶನ, ಬೆಂಗಳೂರು.

ಚಿದಾನಂದಮೂರ್ತಿ M. ಭಾರತದ ಸಾಂಸ್ಕೃತಿಕ ಇತಿಹಾಸ. ಸ್ವಪ್ನ ಬುಕ್‌ ಹೌಸ್‌, ಬೆಂಗಳೂರು.