ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಮಾಧ್ಯಮಗಳು

Main Article Content

ಉಷಾರಾಣಿ
ಮಹೇಶ ಚಿಂತಾಮಣಿ

Abstract

ಕನ್ನಡ ಸಾಹಿತ್ಯ ನಿಂತ ನೀರಲ್ಲ. ಅದು ಹರಿಯುವ ಜಲಧಾರೆ. ಅದು ನವನವೋನ್ಮೇಷಶಾಲಿನಿ. ಕನ್ನಡ ಸಾಹಿತ್ಯದ ಚರಿತ್ರೆ ಹಾಗೂ ಬೆಳವಣಿಗೆಯನ್ನು ನಾವು ಗಮನಿಸಿದರೆ ಇದು ಮನದಟ್ಟಾಗುತ್ತದೆ. 21ನೇ ಶತಮಾನದ ತಂತ್ರಜ್ಞಾನದಲ್ಲಿ ಆದ ಕ್ರಾಂತಿಕಾರಕ ಬದಲಾವಣೆ ಕನ್ನಡ ಸಾಹಿತ್ಯದ ಮೇಲೂ ತನ್ನ ಗಾಢವಾದ ಪ್ರಭಾವವನ್ನು ಬೀರಿದೆ. ನಮ್ಮ ಅನ್ವೇಷಣೆಯ ಫಲವಾಗಿ ಅನೇಕ ಆವಿಷ್ಕಾರಗಳು ನಡೆದು, ಮೊಬೈಲ್ ನಮ್ಮ ಕೈಸೇರಿತು. ಈಗ ಅದು ಮನುಷ್ಯನ ಅವಿಭಾಜ್ಯ ಅಂಗದಂತಾಗಿದೆ. ಮನುಷ್ಯರು ಮೊಬೈಲನ್ನು ಮರೆತು ಕೂಡ ಮರೆಯಲಾರರು. ಒಂದು ವಸ್ತು ಅನೇಕ ಉಪಯೋಗ ಎನ್ನುವಂತೆ ಮೊಬೈಲ್‌ನಲ್ಲಿ ಗಡಿಯಾರ, ಕ್ಯಾಲ್ಕುಲೇಟರ್, ಕ್ಯಾಮೆರಾ, ಆಕಾಶವಾಣಿ, ಇವುಗಳಷ್ಟೇ ಅಲ್ಲದೇ ಅಂತರ್ಜಾಲ (ಇಂಟರ್ನೆಟ್) ಇದ್ದರೆ ಇಡೀ ಭೂಮಂಡಲದ ಯಾವುದೇ ವಿಷಯಗಳನ್ನು ಕ್ಷಣಮಾತ್ರದಲ್ಲಿ ಮಾಹಿತಿ ನೀಡುವ ಗೂಗಲ್ ಜೊತೆಗೆ ಪೂರಕವಾದ ಅನೇಕ ಆಪ್‌ಗಳು ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟು ಮಾಡಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮನುಷ್ಯನ ಸಾಧನೆ ಹಾಗೂ ಪ್ರಗತಿಯ ದ್ಯೋತಕವಾಗಿದೆ.

Article Details

Section

Research Articles

Author Biographies

ಉಷಾರಾಣಿ

ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುಧೋಳ, ಬಾಗಲಕೋಟೆ.

ಮಹೇಶ ಚಿಂತಾಮಣಿ

ಹಿರಿಯ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.

How to Cite

ಉಷಾರಾಣಿ, & ಮಹೇಶ ಚಿಂತಾಮಣಿ. (2025). ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಮಾಧ್ಯಮಗಳು. ಅಕ್ಷರಸೂರ್ಯ (AKSHARASURYA), 8(01), 56 to 63. https://aksharasurya.com/index.php/latest/article/view/1359

References

ಮೃತ್ಯುಂಜಯ ಸ್ವಾಮಿಗಳು ಶ್ರೀ ಮ.ನಿ.ಪ್ರ., (1952), ಭಕ್ತಿಗೀತೆಗಳು, ಮುರುಘಾಮಠ, ಧಾರವಾಡ.

Most read articles by the same author(s)