ನಾಟಕ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ

Main Article Content

ಹೊನ್ನಪ್ಪ ಹೆಚ್. ಕಡೇನಾಯ್ಕನಹಳ್ಳಿ

Abstract

ಕನ್ನಡ ಸಾಹಿತ್ಯದಲ್ಲಿ ಮೂರು ಘಟ್ಟಗಳನ್ನು ನೋಡಬಹುದು. ಅವುಗಳೆಂದರೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡ. ಈ ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ನಾಲ್ಕು ಘಟ್ಟಗಳನ್ನು ನಾವು ನೋಡಬಹುದು. ಅದರಲ್ಲಿ ನವೋದಯ ಸಾಹಿತ್ಯ, ಪ್ರಗತಿಶೀಲ ಸಾಹಿತ್ಯ, ನವ್ಯ ಸಾಹಿತ್ಯ ಮತ್ತು ದಲಿತ ಬಂಡಾಯ ಸಾಹಿತ್ಯ. ಈ ಎಲ್ಲ ಕಾಲಘಟ್ಟಗಳಲ್ಲಿ ಅನೇಕ ಮಹಾಕವಿಗಳು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ಕೊಟ್ಟು ಹೋಗಿದ್ದಾರೆ. ಅದರಲ್ಲಿ ನಾಟಕ ಸಾಹಿತ್ಯ ಪ್ರಕಾರವು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಪಡೆದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ನಾಟಕ ಸಾಹಿತ್ಯ ಗದ್ಯ ಪ್ರಕಾರಕ್ಕೆ ಸೇರಿದ್ದು. ಹಾಗಾಗಿ ಇದು ಓದುಗರ ಮನಸ್ಸನ್ನು ಸೆಳೆಯುತ್ತದೆ. ದೊಡ್ಡ ದೊಡ್ಡ ಮಹಾನ್ ಕವಿಗಳು ಅನೇಕ ನಾಟಕಗಳನ್ನು ರಚಿಸಿದ್ದಾರೆ. ನವೋದಯ ಸಾಹಿತ್ಯದಲ್ಲಿ ನಾಟಕ ಸಾಹಿತ್ಯ ತನ್ನದೇ ಆದ ಮಹತ್ವವನ್ನು ಪಡೆದುಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ನವೋದಯ ಸಾಹಿತ್ಯಕ್ಕೆ ಬಿಎಂಶ್ರೀ ಅವರು ನಾಂದಿ ಹಾಡಿದರು. ಮುಂದೆ ಕನ್ನಡದ ಶ್ರೇಷ್ಠ ಕವಿಗಳಾದ, ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರು ಎಲ್ಲ ಪ್ರಕಾರದಲ್ಲಿ ಸಾಹಿತ್ಯವನ್ನು ರಚಿಸಿ ನಾಟಕ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕುವೆಂಪು ಅವರ ನಾಟಕಗಳು ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಸೂಚಿಯನ್ನೇ ನೀಡಿತು. ಕುವೆಂಪು ಅವರು ನಾಟಕ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರು ರಚಿಸಿದ ನಾಟಕಗಳ ಕುರಿತು ನಾವಿಲ್ಲಿ ನೋಡಬಹುದು.

Article Details

Section

Research Articles

Author Biography

ಹೊನ್ನಪ್ಪ ಹೆಚ್. ಕಡೇನಾಯ್ಕನಹಳ್ಳಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಜಿ.ಜಿ.ಡಿ. ಕಲೆ, ಬಿ.ಎಂ.ಪಿ. ವಾಣಿಜ್ಯ ಮತ್ತು ಎಸ್.ವಿ.ಎಸ್. ವಿಜ್ಞಾನ ಪದವಿ ಮಹಾವಿದ್ಯಾಲಯ, ಬೈಲಹೊಂಗಲ, ಬೆಳಗಾವಿ.

References

ಕುವೆಂಪು, (1928), ಜಲಗಾರ, ಉದಯರವಿ ಪ್ರಕಾಶನ, ಮೈಸೂರು.

ಕುವೆಂಪು, (1947), ಬೆರಳ್‌ಗೆ ಕೊರಳ್, ಉದಯರವಿ ಪ್ರಕಾಶನ, ಉದಯರವಿ ಪ್ರಕಾಶನ, ಮೈಸೂರು.

ಕುವೆಂಪು, (1931), ಶ್ಮಶಾನ ಕುರುಕ್ಷೇತ್ರಂ, ಉದಯರವಿ ಪ್ರಕಾಶನ, ಮೈಸೂರು.

ತಿಪ್ಪೇರುದ್ರಸ್ವಾಮಿ ಎಚ್., (1969), ಕುವೆಂಪು ಅವರ ನಾಟಕಗಳು, ಕಾವ್ಯಶ್ರೀ ಪ್ರಕಾಶನ, ಮೈಸೂರು.

ನರಹಳ್ಳಿ ಬಾಲಸುಬ್ರಹ್ಮಣ್ಯ, (2011), ಕುವೆಂಪು ನಾಟಕಗಳ ಅಧ್ಯಯನ, ಅಂಕಿತ ಪುಸ್ತಕ, ಬೆಂಗಳೂರು.