ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಗಳ ಸಂಕೋಲೆ ಮತ್ತು ಬಿಡುಗಡೆಯ ತುಡಿತಗಳು
Main Article Content
Abstract
ನವೋದಯ ಕಾಲದ ಪ್ರಮುಖ ಲೇಖಕಿ ಕೊಡಗಿನ ಗೌರಮ್ಮ ಅವರ ಕಥೆಗಳಲ್ಲಿ ಹೆಣ್ಣುಮಕ್ಕಳು ಎದುರಿಸುವ ಸಾಂಪ್ರದಾಯಿಕ ಕಟ್ಟುಪಾಡುಗಳು ಮತ್ತು ಆ ಸಂಕೋಲೆಗಳಿಂದ ಬಿಡುಗಡೆಯಾಗುವ ತುಡಿತಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ‘ವಾಣಿಯ ಸಮಸ್ಯೆʼ, ‘ಅವಳಭಾಗ್ಯʼ, ‘ಮನುವಿನರಾಣಿʼ, ‘ಆಹುತಿʼ, ‘ಹೋಗಿಯೇ ಬಿಟ್ಟಿದ್ದʼ ಮತ್ತು ‘ಪುನರ್ವಿವಾಹʼ ಕಥೆಗಳ ಮುಖಾಂತರ ಬಾಲ್ಯವಿವಾಹ, ವರದಕ್ಷಿಣೆ, ವಿಧವಾ ಸಮಸ್ಯೆ, ವೇಶ್ಯಾವಾಟಿಕೆ ಹಾಗೂ ಜಾತಿ-ಧರ್ಮದಂತಹ ಸಾಮಾಜಿಕ ಪಿಡುಗುಗಳನ್ನು ಮಾರ್ಮಿಕವಾಗಿ ಅನಾವರಣಗೊಳಿಸಲಾಗಿದೆ. ಪುರುಷಪ್ರಧಾನ ಸಮಾಜದಲ್ಲಿ ನಾನಾ ಬಗೆಯ ಶೋಷಣೆಗೆ ಒಳಗಾದ ಸ್ತ್ರೀಯರು ಅನುಭವಿಸುವ ಮಾನಸಿಕ ತಲ್ಲಣಗಳು ಹಾಗೂ ಸ್ವತಂತ್ರ ಬದುಕಿಗಾಗಿ ಅವರು ನಡೆಸುವ ಹೋರಾಟವನ್ನು ಈ ಅಧ್ಯಯನವು ಕಟ್ಟಿಕೊಡುತ್ತದೆ. ಸ್ತ್ರೀ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಅತ್ಯಗತ್ಯವನ್ನು ಎತ್ತಿಹಿಡಿಯುವ ಮೂಲಕ, ಸರ್ವರೂ ಸಮಾನರೆಂಬ ಆಶಯವನ್ನು ಇದರಲ್ಲಿ ವ್ಯಕ್ತಪಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಾಳೇಗೌಡ ನಾಗವಾರ (ಸಂ.), (2014), ಕೊಡಗಿನ ಗೌರಮ್ಮ ಬರೆದ ಕಥೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಶಾಕುಂತಲಾ ಸಿದ್ದರಾಮ ದುರಗಿ, (1999), ಆಧುನಿಕ ಕನ್ನಡದಲ್ಲಿ ಮಹಿಳಾ ಸಾಹಿತ್ಯ, ಗುಲ್ಬರ್ಗ: ಉಜ್ವಲ ಪ್ರಕಾಶನ.
ರಾಧಾಮಣಿ, (2017), ವಾಣಿ ಮತ್ತು ತ್ರಿವೇಣಿಯವರ ಕಾದಂಬರಿಗಳಲ್ಲಿ ವಿವಾಹ ಸಂಸ್ಥೆಯ ಶೋಧ: ಸ್ತ್ರೀವಾದಿ ವಿಶ್ಲೇಷಣೆ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಮಾನಸ ಗಂಗೋತ್ರಿ.