ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕ ಚಿಂತನೆಗಳು

Main Article Content

ಶ್ರೀಮತಿ ಜೀವಿತ ಡಿ.

Abstract

ವಚನ ಸಾಹಿತ್ಯವು ಭಕ್ತಿಯ ಆಳವಾದ ಅಭಿವ್ಯಕ್ತಿ ಮಾತ್ರವಲ್ಲ, ಸಮಾಜವನ್ನು ಹೊಸ ದಿಕ್ಕಿನಲ್ಲಿ ಕರೆದೊಯ್ಯುವ ಬದಲಾವಣೆಯ ದಾರಿಯಾಗಿದೆ. 12ನೇ ಶತಮಾನದ ಶರಣ ಸಾಹಿತ್ಯವು ಧರ್ಮ, ಸಮಾಜ, ಲಿಂಗ, ಶ್ರಮದ ಬಗ್ಗೆ ಕ್ರಾಂತಿಕಾರಕ ಚಿಂತನೆಗಳನ್ನು ಒಳಗೊಂಡಿದೆ. ಈ ಮೂಲಕ ನಡುಗನ್ನಡ ಕಾಲದ ಪರಂಪರೆಗಳನ್ನು ಪ್ರಶ್ನಿಸುತ್ತಾ ಆಧುನಿಕ ಚಿಂತನೆಗಳಿಗೆ ದಾರಿ ತೆರೆದಿದೆ. ಆ ಕಾಲದಲ್ಲಿ ಜಾತಿ ವ್ಯವಸ್ಥೆ ಕಠಿಣವಾಗಿದ್ದು, ಪುರೋಹಿತರ ಪ್ರಭಾವ, ಯಜ್ಞದ ಆಚಾರಗಳು, ಲಿಂಗ ವೈಷಮ್ಯ ಸಮಾಜದಲ್ಲಿ ಆಳವಾಗಿ ನೆಲೆಸಿದ್ದವು. ಶರಣರು ಈ ಮೂಢನಂಬಿಕೆಗಳನ್ನು ಧೈರ್ಯದಿಂದ ಪ್ರಶ್ನಿಸಿದರು ಹಾಗೂ ತಮ್ಮ ಸಾಹಿತ್ಯದ ಮೂಲಕ ಶುದ್ಧ ಭಕ್ತಿ, ಸಮಾನತೆ, ನೈತಿಕ ವಿಚಾರಗಳ ಕುರಿತಾದ ಹೊಸ ಚಿಂತನೆಗಳನ್ನು ರೂಪಿಸಿದರು. ದೇವರನ್ನು ಒಲಿಸಿಕೊಳ್ಳಲು ಪ್ರಾಮಾಣಿಕ ಶ್ರಮ ಮತ್ತು ನೈತಿಕ ಜೀವನವನ್ನೇ ದೇವಭಕ್ತಿಯ ಪರಮ ರೂಪವೆಂದು ಪರಿಗಣಿಸಿದರು. ವಚನಗಳಲ್ಲಿ “ಕಾಯಕವೇ ಕೈಲಾಸ” ಎಂಬ ತತ್ವವು ಶ್ರಮದ ಪಾವಿತ್ರ್ಯತೆಯನ್ನು ಹೊತ್ತಿದೆ. ಯಾವುದೇ ಕೆಲಸ ದೇವರ ಸೇವೆಗೆ ಸಮಾನ ಹಾಗೂ ಪಾವನವಾದುದು. ಈ ತತ್ವವು ಕಾರ್ಮಿಕ ವರ್ಗದ ಮಾನವ ಹಕ್ಕುಗಳ ಪರಿಪೂರ್ಣ ಪರಿಕಲ್ಪನೆ ನೀಡುತ್ತದೆ. ಮಹಿಳಾ ಶರಣರು ಆಧುನಿಕ ಚಿಂತನೆಗಳಿಗೆ ದಾರಿ ತೆರೆದಿದ್ದಾರೆ. ಅಕ್ಕಮಹಾದೇವಿ ತಮಗೆ ಬೇಕಾದ ಜೀವನದ ಹಾದಿಯನ್ನು ಆಯ್ಕೆಮಾಡಿಕೊಂಡು ಮಾತೃತ್ವ ಮತ್ತು ಪತಿತ್ವ ಮುಂತಾದ ಸಾಂಪ್ರದಾಯಿಕ ಬಂಧನಗಳನ್ನು ತಿರಸ್ಕರಿಸಿದ ಉದಾಹರಣೆಯೂ ಕಾಣಬಹುದು. ವಚನಗಳ ಭಾಷಾಶೈಲಿಯು ಪರಂಪರೆಯಿಂದ ಭಿನ್ನವಾಗಿದೆ. ಜನಸಾಮಾನ್ಯರು ಬಳಸುವ ಸರಳ ಕನ್ನಡದಲ್ಲಿ ಸಾಹಿತ್ಯ ರಚಿಸಿದರು. ಇದು ಭಕ್ತ-ಭಗವಂತನ ಬಾಂಧವ್ಯವನ್ನು ಹೆಚ್ಚಿಸಿತು. ಧಾರ್ಮಿಕ ಪರಂಪರೆಗಳ ಪುನಃ ಪರಿಶೀಲನೆಯ ದೃಷ್ಟಿಕೋನವನ್ನು ಹೊಂದಿವೆ. ಧರ್ಮವು ಕೇವಲ ಆಚರಣೆಯಲ್ಲ, ಅದು ವ್ಯಕ್ತಿಗತ ಅನುಭವ ಮತ್ತು ನೈತಿಕ ಬದುಕಿನ ಪ್ರಾತಿನಿಧ್ಯವಾಗಿದೆ.

Article Details

Section

Research Articles

Author Biography

ಶ್ರೀಮತಿ ಜೀವಿತ ಡಿ.

ಸಹ ಪ್ರಾಧ್ಯಾಪಕಿ, ಕನ್ನಡ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಮಂಗಳೂರು.

 

How to Cite

ಶ್ರೀಮತಿ ಜೀವಿತ ಡಿ. (2025). ವಚನ ಸಾಹಿತ್ಯದಲ್ಲಿ ಪರಂಪರೆ ಮತ್ತು ಆಧುನಿಕ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 7(03), 106 to 109. https://aksharasurya.com/index.php/latest/article/view/1193

References

ಶೇಷಗಿರಿರಾವ್ ಎಲ್.ಎಸ್., (1975), ಹೊಸಗನ್ನಡ ಸಾಹಿತ್ಯ ಚರಿತೆ, ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.

ಕರೀಗೌಡ ಬೀಚನಹಳ್ಳಿ, (2007), ಸಾಹಿತ್ಯವಿಸ್ತಾರ, ಅಜಂತಾ ಪ್ರಕಾಶನ, ಬೆಂಗಳೂರು.

ಲಕ್ಷ್ಮೀನಾರಾಯಣ ಭಟ್ಟ ಎನ್.ಎಸ್., (2014), ಕನ್ನಡ ಸಾಹಿತ್ಯ ಚರಿತೆ, ಅಂಕಿತ ಪುಸ್ತಕ, ಪ್ರಕಾಶನ.

ಶಾಮರಾಯ ತ.ಸು., (2010), ಕನ್ನಡ ಸಾಹಿತ್ಯ ಚರಿತೆ, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು.

Most read articles by the same author(s)