ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು

Main Article Content

ಸಂತೋಷ್‌ ಕುಮಾರ್‌ ಆರ್‌.ಎಂ.

Abstract

ವಚನ ಸಾಹಿತ್ಯವು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅಮೂಲ್ಯ ಸಂಪತ್ತಾಗಿದೆ. ಇದು 12ನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ಸಾಹಿತ್ಯ ಪ್ರಕಾರವಾಗಿದ್ದು, ಬಸವಾದಿ ಶರಣರು ಇದನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಿದರು. ವಚನ ಸಾಹಿತ್ಯವು ಧಾರ್ಮಿಕ, ಸಾಮಾಜಿಕ ಮತ್ತು ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿದೆ ಮತ್ತು ಭಕ್ತಿ ಚಳವಳಿಯ ಪ್ರಮುಖ ಭಾಗವಾಗವೂ ಆಗಿದೆ. 
ವಚನ ಸಾಹಿತ್ಯವು ʼಸಮಾನತೆʼ, ʼಶ್ರಮʼ-ʼಕಾಯಕʼ ಮತ್ತು ʼಭಕ್ತಿʼಯ ಮಹತ್ವ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಶರಣರು ಜಾತಿ, ಲಿಂಗ, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದರು. ಅಲ್ಲದೆ ಇವರು ಜಾತಿ-ವರ್ಣಭೇದಗಳ ವಿರೋಧವಾಗಿಯೂ ಮತ್ತು ಸಮಾನತೆಗೆ ಹೆಚ್ಚಿನ ಮನ್ನಣೆಯನ್ನು ನೀಡಿದರು. 
ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಮೊದಲಾದ ಶರಣರು “ಕಾಯಕವೇ ಕೈಲಾಸ”, “ದಾಸೋಹದ ತತ್ತ್ವ”, “ಅನುಭವ ಮಂಟಪ”ದ ಪರಿಕಲ್ಪನೆಯ ಮೂಲಕ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದ ನಿರ್ಮಾಣಕ್ಕೆ ಹೇಗೆ ಶ್ರಮಿಸಿದರು ಎಂಬುದನ್ನು ಭಿನ್ನ ವಚನಕಾರರ ಹಿನ್ನೆಲೆಯಲ್ಲಿ ವಿವರಿಸಿ, ವಿಶ್ಲೇಷಿಸುವುದಾಗಿದೆ. 
ವಚನಗಳಲ್ಲಿ ಪುರುಷ ಮತ್ತು ಮಹಿಳೆಯ ನಡುವಿನ ಭೇದವನ್ನು ಪ್ರಶ್ನಿಸಿ, ಶಿವಶರಣ ಭಕ್ತರ ಸಮುದಾಯದಲ್ಲಿ ಪ್ರತಿಯೊಬ್ಬರಲ್ಲೂ ಸಮಾನತೆಯನ್ನು ಕಾಣುತ್ತಾ ಪ್ರಾಮಾಣಿಕ ಶ್ರಮ ಮತ್ತು ಸಮಾಜ ಸೇವೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸಲಾಗಿದೆ. 
ಈ ಸಾಹಿತ್ಯ ಪ್ರಕಾರವು ಅಂತರಂಗ ಮತ್ತು ಬಹಿರಂಗದ ಪ್ರಾಮುಖ್ಯತೆ, ಅವು ದೈನಂದಿನ ಜೀವನದಲ್ಲಿ ಹೇಗೆ ದೀರ್ಘಕಾಲಿಕವಾಗಿ ವ್ಯಕ್ತಿಯ ಆಂತರಿಕ ಹಾಗೂ ಬಾಹ್ಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು ಎಂಬುದನ್ನು ಚರ್ಚಿಸಲಾಗುವುದು. 
ವಚನಗಳು ಸತ್ಯ ಮತ್ತು ಚಿತ್ತ ಶುದ್ಧ ಭಕ್ತಿಯ ತತ್ವಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಬಗೆ ಹೇಗೆ? ಮತ್ತು ಪ್ರಸ್ತುತ ಸಂದರ್ಭಕ್ಕೂ ವಚನ ಸಾಹಿತ್ಯದ ತತ್ತ್ವಗಳು ಸಾಮಾಜಿಕ ನ್ಯಾಯದ ಪರಿಪ್ರೇಕ್ಷ್ಯದಲ್ಲಿ ಅವುಗಳ ಪ್ರಾಧಾನ್ಯತೆಯನ್ನು ಪ್ರಸ್ತುತತೆಯನ್ನು ಕುರಿತು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. 
ಈ ಸಾಹಿತ್ಯವು ಶರಣ ಪರಂಪರೆಯ ಜೀವನ ಶೈಲಿಯನ್ನು ಪ್ರತಿಬಿಂಬಿಸುವುದರೊಂದಿಗೆ, ನೈತಿಕ ಜೀವನ ಮೌಲ್ಯಗಳನ್ನು ಬೋಧಿಸುವ ಪ್ರಭಾವಿ ಮಾಧ್ಯಮವಾಗಿದೆ. ವಚನ ಸಾಹಿತ್ಯವು ಕೇವಲ ಧಾರ್ಮಿಕ ಮತ್ತು ಸಾಹಿತ್ಯಿಕ ಪ್ರಕಾರವಲ್ಲದೆ, ಅದು ಸಾಮಾಜಿಕ ಕ್ರಾಂತಿಯ ಸಂಕೇತವಾಗಿ, ಮಾನವೀಯತೆಯ ಸಿದ್ಧಾಂತಗಳ ಸಾರಥಿಯಾಗಿ ಹೇಗೆ ನಿಲ್ಲಬಲ್ಲದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

Article Details

Section

Research Articles

Author Biography

ಸಂತೋಷ್‌ ಕುಮಾರ್‌ ಆರ್‌.ಎಂ.

ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸೈಂಟ್‌ ಫ್ರಾಸ್ಸಿಸ್‌ ಕಾಲೇಜು, ಕೋರಮಂಗಲ, ಬೆಂಗಳೂರು.

References

ಚಿದಾನಂದ ಮೂರ್ತಿ ಎಂ., (2013), ವಚನ ಸಾಹಿತ್ಯ, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ-5, ಸಪ್ನ ಪ್ರಕಾಶನ, ಬೆಂಗಳೂರು.

ಚಿದಾನಂದ ಮೂರ್ತಿ ಎಂ., (1985), ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪ್ರಶ್ಯತೆ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ನಾರಾಯಣ ಪಿ.ವಿ., (2018), ಅಲ್ಲಮನ ವಚನಗಳು, ಅಂಕಿತ ಪ್ರಕಾಶನ, ಬೆಂಗಳೂರು.

ಸಿದ್ಧರಾಮಯ್ಯ ಎಸ್.ಜಿ., (2024), ವಚನಧರ್ಮ ಅರಿವಿನ ಬೆರಗು, ಸಪ್ನ ಪ್ರಕಾಶನ, ಬೆಂಗಳೂರು.