ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಉತ್ತಮ ಆಡಳಿತದ ಅಗತ್ಯತೆ

Main Article Content

ಈಶ್ವರಪ್ಪ
ಕೃಷ್ಣಪ್ಪ ಜಿ. ನಿಂಬಕ್ಕನವರ್

Abstract

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸ್ವಾತಂತ್ರ್ಯ ನಂತರದ ತರುವಾಯ ಈ ಪ್ರದೇಶದ ಹಿಂದುಳಿದಿರುವಿಕೆಯನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ಹಲವಾರು ಸಮಿತಿಗಳನ್ನು ರಚಿಸಿದ್ದು ಅವುಗಳಲ್ಲಿ ಡಾ. ಡಿ ಎಂ ನಂಜುಂಡಪ್ಪ ಮತ್ತು ಎಂ ಗೋವಿಂದ ರಾವ್ ಸಮಿತಿಗಳು ಹಲವಾರು ಅಂಕಿ ಸಂಖ್ಯೆಗಳ ಮೂಲಕ ಈ ಪ್ರದೇಶವು ಇನ್ನೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದನ್ನು ಕಂಡುಕೊಂಡಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮತ್ತು ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ಕರ್ನಾಟಕ ಸರಕಾರವು ಹಲವಾರು ಅಭಿವೃದ್ಧಿ ಯೋಜನೆಗಳು, ವಿಶೇಷ ಅನುದಾನಗಳನ್ನು ಬಳಸಿಕೊಂಡಿರುತ್ತದೆ. ತದನಂತರದಲ್ಲಿ ಡಾ. ಡಿ ಎಂ ನಂಜುಂಡಪ್ಪ ಸಮಿತಿಯ ವರದಿ ಅನ್ವಯ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಯೋಜನೆಗಳು ಖರ್ಚು ವೆಚ್ಚಗಳನ್ನು ಮಾಡಿದರೂ ಸಹ ಈ ಪ್ರದೇಶದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಆ ಕಾರಣದಿಂದಾಗಿ 2014ರಲ್ಲಿ 371 ಜೆ ವಿಧಿಯನ್ನು ಸಂವಿಧಾನಬದ್ಧವಾಗಿ ಅನುಷ್ಠಾನಗೊಳಿಸಲಾಗಿದ್ದು, ಈ ಅನುಚ್ಛೇದ ಅಡಿಯಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚಿಸಲಾಗಿದ್ದು ಮತ್ತು ಈ ಪ್ರದೇಶದ ಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಅವಕಾಶಗಳನ್ನು ಕಲ್ಪಿಸಲಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಯೋಜನೆಗಳು ಖರ್ಚು ವೆಚ್ಚಗಳನ್ನು ಮಾಡಿದರೂ ಸಹ ಈ ಪ್ರದೇಶದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಈ ಕಾರಣಗಳಿಂದಾಗಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಉತ್ತಮ ಆಡಳಿತವು ಮಾರ್ಗೋಪಾಯವಾಗಿದೆ.

Article Details

Section

Research Articles

Author Biographies

ಈಶ್ವರಪ್ಪ

ಸಂಶೋಧನಾರ್ಥಿ, ರಾಜ್ಯಶಾಸ್ತ್ರ ವಿಭಾಗ, ಕೆ.ಎಸ್.ಒ.ಯು. (ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ), ಮೈಸೂರು.

ಕೃಷ್ಣಪ್ಪ ಜಿ. ನಿಂಬಕ್ಕನವರ್

ಸಹ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕೆ.ಎಸ್.ಒ.ಯು. (ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ), ಮೈಸೂರು.

 

How to Cite

ಈಶ್ವರಪ್ಪ, & ಕೃಷ್ಣಪ್ಪ ಜಿ. ನಿಂಬಕ್ಕನವರ್. (2026). ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಉತ್ತಮ ಆಡಳಿತದ ಅಗತ್ಯತೆ. ಅಕ್ಷರಸೂರ್ಯ (AKSHARASURYA), 14(06), 174 to 183. https://aksharasurya.com/index.php/latest/article/view/973

References

ಶಿವಾನಂದ.ಎಂ.ಜಾಮದಾರ (2016), ಉತ್ತರ ಕರ್ನಾಟಕದ ವಾಸ್ತವಾಂಶಗಳ ಒಂದು ನೋಟತಾರತಮ್ಯ, (ಮನೋಹರ ಗ್ರಂಥಮಾಲಾ, ಧಾರವಾಡ.)

ಶಾಲಿನಿ ರಜನೀಶ್, ಛಾಯಾ ದೇವಗಾವಂಕರ್ ಮತ್ತು ಶ್ರೀಮತಿ ಸಂಗೀತ ಕಟ್ಟಿಮನಿ (2014), “ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿ 371(ಜೆ) ಸಮನ್ವಯ ಪ್ರಗತಿ” (ಪ್ರಸಾರಾಂಗ, ಗುಲ್ಬರ್ಗಾ ವಿಶ್ವವಿದ್ಯಾಲಯ.)

M.Laxmikanth, (2005), Public Administration.

M.Laxmikanth, (2008), “Indian Constitution” Tata McGraw-Hill Publication Company Ltd., New Delhi.

Kumari Anitha (2006), “Balanced Regional Development in India: Issues and Policies”, (New Century Publications, New Delhi.)

ಭಾರತ ಸರ್ಕಾರದ 98ನೇ ಸಂವಿಧಾನ ತಿದ್ದುಪಡಿ 2012ರ ಗೆಜೆಟ್ 371 ಜೆ ತಿದ್ದುಪಡಿ ಕಾಯ್ದೆ

ಕರ್ನಾಟಕ ಸರ್ಕಾರದ 371 ಜೆ ಅನುಷ್ಠಾನದ ಸುತ್ತೋಲೆಗಳು

ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕದ ವರದಿ 2023-24

ಭಾರತ ಸರ್ಕಾರದ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ 2023-24.

ಡಿ.ಎಂ.ನಂಜುಂಡಪ್ಪ ವರದಿ (2000-2002) ಗ್ರಂಥಾಲಯ ಸಮಿತಿ, ಸರ್ಕಾರಿ ಮುದ್ರಣಾಲಯ, ಕರ್ನಾಟಕ ವಿಧಾನಮಂಡಲ ಮತ್ತು ವಿಧಾನಸೌಧ, ಕರ್ನಾಟಕ ಸರ್ಕಾರ.

Economic Survey Report (2023-24), Planning Programme Monitoring and Statistics Development, M.S Building, Government Press, Govt. of Karnataka.