ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಇ-ಆಡಳಿತ ಸುಧಾರಣೆಗಳು: ಒಂದು ವಿಶ್ಲೇಷಣೆ

Main Article Content

ರಾಮಚಂದ್ರ

Abstract

ಪ್ರಸ್ತುತ ಲೇಖನವು ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಇ-ಆಡಳಿತ ಸುಧಾರಣೆಗಳನ್ನು, ವಿಶೇಷವಾಗಿ ‘ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ’ (UUCMS) ಅನುಷ್ಠಾನ ಮತ್ತು ಅದರ ಪ್ರಭಾವಗಳನ್ನು ವಿಶ್ಲೇಷಿಸುತ್ತದೆ. ಪ್ರವೇಶಾತಿ, ಶೈಕ್ಷಣಿಕ ನಿರ್ವಹಣೆ, ಪರೀಕ್ಷೆ ಮತ್ತು ಮಾನವ ಸಂಪನ್ಮೂಲಗಳನ್ನು ಒಂದೇ ಕೇಂದ್ರೀಕೃತ ವೇದಿಕೆಯಡಿ ತರುವ ಮೂಲಕ ಉನ್ನತ ಶಿಕ್ಷಣದ ಸಂಪೂರ್ಣ ಆಡಳಿತವನ್ನು ಡಿಜಿಟಲೀಕರಣಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದು ಕಾಗದರಹಿತ ಆಡಳಿತದ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸಿ, ವಿಳಂಬ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಆದರೆ, ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆಗಳು, ಗ್ರಾಮೀಣ ಭಾಗದ ಡಿಜಿಟಲ್ ಅಂತರ ಮತ್ತು ಸಿಬ್ಬಂದಿಗೆ ತರಬೇತಿಯ ಕೊರತೆಯಂತಹ ಗಂಭೀರ ಸವಾಲುಗಳನ್ನು ಈ ವ್ಯವಸ್ಥೆ ಎದುರಿಸುತ್ತಿದೆ. ಸಹಾಯವಾಣಿ ಸ್ಥಾಪನೆ, ಆಫ್‌ಲೈನ್ ಸೌಲಭ್ಯ ಮತ್ತು ನಿರಂತರ ತರಬೇತಿಯ ಮೂಲಕ ಈ ಲೋಪಗಳನ್ನು ಸರಿಪಡಿಸಿ, ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಅಗತ್ಯವನ್ನು ಲೇಖನವು ಒತ್ತಿಹೇಳುತ್ತದೆ.

Article Details

Section

Research Articles

Author Biography

ರಾಮಚಂದ್ರ

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ದಾವಣಗೆರೆ.

How to Cite

ರಾಮಚಂದ್ರ. (2026). ಕರ್ನಾಟಕದ ಉನ್ನತ ಶಿಕ್ಷಣದಲ್ಲಿ ಇ-ಆಡಳಿತ ಸುಧಾರಣೆಗಳು: ಒಂದು ವಿಶ್ಲೇಷಣೆ. ಅಕ್ಷರಸೂರ್ಯ (AKSHARASURYA), 14(06), 168 to 173. https://aksharasurya.com/index.php/latest/article/view/972

References

ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯ ವಾರ್ಷಿಕ ವರದಿ.

ಯುಯುಸಿಎಮ್‌ಎಸ್‌ನ ಅಧಿಕೃತ ಜಾಲತಾಣ (uucms.karnataka.gov.in).

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನ ಮಾರ್ಗಸೂಚಿ