ಸಾಂವಿಧಾನಿಕ ಮೌಲ್ಯವಾಗಿ ಒಳಗೊಳ್ಳುವಿಕೆ: ವಿಶೇಷವಾಗಿ ಶೋಷಿತ ವರ್ಗಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ

Main Article Content

ಸತೀಶ್‌­
ವೀಣಾದೇವಿ

Abstract

ಪ್ರಜಾಪ್ರಭುತ್ವದ ಯಶಸ್ಸು, ದೇಶದ ಸಮಸ್ತ ಪ್ರಜೆಗಳ ಒಳಗೊಳ್ಳುವಿಕೆಯನ್ನು ಆಧರಿಸಿರುತ್ತದೆ. ಭಾರತೀಯ ಸಮಾಜದ ಇತಿಹಾಸವನ್ನು ಅವಲೋಕಿಸಿದಾಗ ಕೆಲವೊಂದು ವರ್ಗಗಳು ಮಾತ್ರ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಶಕ್ತವಾಗಿದ್ದು, ಆ ವರ್ಗಗಳು ಮಾತ್ರ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದನ್ನು ಕಾಣುತ್ತೇವೆ. ಇಂತಹ ಸೀಮಿತ ಒಳಗೊಳ್ಳುವಿಕೆಯಿಂದ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ. ಈ ಲೇಖನವು ಶೋಷಿತ ವರ್ಗಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ವಿಶ್ಲೇಷಿಸುವ ಗುರಿಯನ್ನು ಹೊಂದಿದೆ. ಭಾರತ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರಜೆಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಭಾರತದ ಪ್ರಜೆಗಳು ಅಧಿಕಾರ ಮೂಲ ಎಂಬ ವಿಷಯವನ್ನು, ಹಾಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮುಂತಾದ ಮೌಲ್ಯಗಳನ್ನು ಉಲ್ಲೇಖಿಸಲಾಗಿದೆ. ಸಂವಿಧಾನ ಜಾರಿಗೆ ಬಂದು 75 ವರ್ಷಗಳಾಗಿದ್ದರೂ ಸಹ ಪ್ರಜಾಪ್ರಭುತ್ವದಲ್ಲಿ ಶೋಷಿತ ವರ್ಗಗಳ ಒಳಗೊಳ್ಳುವಿಕೆಯು ನಮಗೆ ಸಂಪೂರ್ಣವಾಗಿ ಕಂಡುಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಲೇಖನದಲ್ಲಿ ಶೋಷಿತ ವರ್ಗಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ನಮ್ಮ ಸಂವಿಧಾನದಲ್ಲಿರುವ ಅಂಶಗಳನ್ನು, ಕಳೆದ 75 ವರ್ಷಗಳಲ್ಲಿ ಮಾಡಿರುವ ಸಂವಿಧಾನ ತಿದ್ದುಪಡಿಗಳನ್ನು ಹಾಗೂ ಸರ್ಕಾರ ಈ ವಿಷಯವಾಗಿ ಕೈಗೊಂಡ ಕ್ರಮಗಳ ಬಗ್ಗೆ, ಒಳಗೊಳ್ಳುವಿಕೆಯ ಮೇಲೆ ಈ ಎಲ್ಲಾ ಅಂಶಗಳ ಪ್ರಭಾವ, ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಒಳಗೊಳ್ಳುವಿಕೆಗೆ ಇರುವ ಸವಾಲುಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಚರ್ಚೆ ಮಾಡಲಾಗಿದೆ.

Article Details

Section

Research Articles

Author Biographies

ಸತೀಶ್‌­

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ.

ವೀಣಾದೇವಿ

ಹಿರಿಯ ಆಯ್ಕೆ ಶ್ರೇಣಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು.

How to Cite

ಸತೀಶ್‌­, & ವೀಣಾದೇವಿ. (2026). ಸಾಂವಿಧಾನಿಕ ಮೌಲ್ಯವಾಗಿ ಒಳಗೊಳ್ಳುವಿಕೆ: ವಿಶೇಷವಾಗಿ ಶೋಷಿತ ವರ್ಗಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ. ಅಕ್ಷರಸೂರ್ಯ (AKSHARASURYA), 14(06), 126 to 135. https://aksharasurya.com/index.php/latest/article/view/967

References

Jensenius R Francesca (2017), Social Justice through Inclusion, Oxford University Press

Weiner, M. (2001). The struggle for equality: Caste in Indian politics. In A. Kohli (Ed.), The Success of India’s Democracy. Cambridge: Cambridge University Press.

Quraishi S Y, (2023), India’s Experiment with Democracy, Harper Collins Publishers, Gurugram.

ಬಸು ದುರ್ಗಾ ದಾಸ್ (2013), ಭಾರತದ ಸಂವಿಧಾನ ಪರಿಚಯ, Lexis Nexis

ನ್ಯಾ. ನಾಗಮೋಹನದಾಸ್‌ ಎಚ್‌.ಎಸ್‌ (2022), ಮೀಸಲಾತಿ ಭ್ರಮೆ ಮತ್ತು ವಾಸ್ತವ, ಜಲ ಪ್ರಕಾಶನ ಬೆಂಗಳೂರು

ಸದಾನಂದ ಜೆ. ಎಸ್‌ (2018), ಭಾರತದ ಸಂಸತ್ತು, ಅಂಕಿತ ಪುಸ್ತಕ ಪ್ರಕಾಶನ ಬೆಂಗಳೂರು

Akther Fatima (2023), Political Participation Has Strengthened The Spirit Of Inclusiveness In Indian Democracy, Multidisciplinary Output Research For Actual and International Issues Morfal Journal, E-ISSN: 2808-6635.

Pandey Shashikant and Mukherji Siddhartha (July-September, 2013), Indian Democracy: Inclusive in theory Exclusionary in Practice, The Indian Journal of Political Science, Vol.LXXIV, No.3

www.csds.in

http://www.eci.gov.in

https://www.census2011.co.in