ಮಾಸ್ತಿ ಮತ್ತು ಪುದುಮೈಪಿತ್ತನ್ ಒಂದು ಅನುಸಂಧಾನ
Main Article Content
Abstract
ಕನ್ನಡದ ಸಣ್ಣಕಥೆಗಳ ಜನಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ತಮಿಳಿನ ಪ್ರಖ್ಯಾತ ಕಥೆಗಾರ ಪುದುಮೈಪಿತ್ತನ್ ಅವರ ಕಥೆಗಳನ್ನು ತೌಲನಿಕವಾಗಿ ಇಲ್ಲಿ ಅಧ್ಯಯನ ಮಾಡಲಾಗಿದೆ. ಮಾಸ್ತಿಯವರ 'ರಂಗಸ್ವಾಮಿಯ ಅವಿವೇಕ' ಮತ್ತು ಪುದುಮೈಪಿತ್ತನ್ ಅವರ 'ವಿಬರೀದ ಆಸೈ' ಕಥೆಗಳ ವಸ್ತು ಒಂದೇ ಆಗಿದ್ದರೂ (ಗೆಳೆಯನ ಹೆಂಡತಿಯ ಮೇಲಿನ ಮೋಹ), ನಿರೂಪಣೆ ಮತ್ತು ಅಂತ್ಯದಲ್ಲಿರುವ ಭಿನ್ನತೆಯನ್ನು ಸೂಕ್ಷ್ಮವಾಗಿ ಗುರುತಿಸಲಾಗಿದೆ. ಮಾಸ್ತಿಯವರ ಪಾತ್ರವು ವಿವೇಕ ಮತ್ತು ಸಂಯಮದಿಂದ ಅವಘಡವನ್ನು ತಪ್ಪಿಸಿದರೆ, ಪುದುಮೈಪಿತ್ತನ್ ಅವರ ಕಥೆಯಲ್ಲಿ ಕಾಮನೆ ಮತ್ತು ಅಸಹಾಯಕತೆಗಳು ದುರಂತಮಯ ವಾಸ್ತವವಾಗಿ ಬದಲಾಗುತ್ತವೆ. ಈ ಮೂಲಕ ಇಬ್ಬರು ಲೇಖಕರ ಸಾಮಾಜಿಕ ದೃಷ್ಟಿಕೋನ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಮನುಷ್ಯ ಮನಸ್ಸಿನ ಸಂಕೀರ್ಣತೆಯನ್ನು ಚಿತ್ರಿಸುವಲ್ಲಿ ಅವರಿಗಿರುವ ಭಿನ್ನತೆಯನ್ನು ತುಲನಾತ್ಮಕವಾಗಿ ಚರ್ಚಿಸಲಾಗಿದೆ. 'ಪ್ರಭಾವದ ಆತಂಕ' (Anxiety of Influence) ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿಯೂ ಈ ಕಥೆಗಳನ್ನು ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಶಿವರುದ್ರಪ್ಪ ಜಿ. ಎಸ್. ವಿಮರ್ಶೆಯ ಪೂರ್ವ ಪಶ್ಚಿಮ, 1961, ಪು. 94,
ಸುಂದರ ರಾಮಸ್ವಾಮಿ: ಪುದುಮಪಿತ್ತನ್‌ಕದೈಗಳ್-ಸು. ರಾ. ಕುರಿಪ್ಪೇಡು, (ರೈಟರ್ಸ್ ನೋಟ್ಟುಕ್) 2005, ಪು. 128.
ನಾಗಭೂಷಣಸ್ವಾಮಿ ಓ. ಎಲ್., ವಿಮರ್ಶೆಯ ಪರಿಭಾಷೆ, 1998, ಪು. 335-336.
ಆಹಿತಾನಲ(ಸಂ), ಕನ್ನಡದ ಮರ ಚೇತನ, 2007, ಪು. 146.
ಸಣ್ಣಕಥೆಗಳು: ಶ್ರೀನಿವಾಸ(ಮಾಸ್ತಿ).
ಪುದುಮೈಪಿತ್ತನ್ ಕದೈಗಳ್(ಸಂ) ಆ. ರಾ. ವೇಂಗಡಾಚಲಪದಿ.
ತೌಲನಿಕ ಸಾಹಿತ್ಯ ಮತ್ತು ಇತರ ಲೇಖನಗಳು, ರಾಮಚಂದ್ರನ್ ಸಿ. ಎನ್.
ತೌಲನಿಕ ಸಾಹಿತ್ಯ, ದೇ. ಜ. ಗೌ.