ಬೆಂಗಳೂರು ನಗರದಲ್ಲಿ ನಗರ ತ್ಯಾಜ್ಯ ನಿರ್ವಹಣಾ ನೀತಿಗಳು ಮತ್ತು ನಾಗರಿಕರ ಭಾಗವಹಿಸುವಿಕೆ: ಒಂದು ವಿಶ್ಲೇಷಣೆ
Main Article Content
Abstract
ವೇಗದ ನಗರೀಕರಣ ಮತ್ತು ಜನಸಂಖ್ಯೆಯ ಬೆಳವಣಿಗೆಯು ಭಾರತದ ಮಹಾನಗರಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಸವಾಲನ್ನು ತೀವ್ರಗೊಳಿಸಿದೆ. ಭಾರತದ ‘ಸಿಲಿಕಾನ್ ವ್ಯಾಲಿ’ ಎಂದು ಕರೆಯಲ್ಪಡುವ ಬೆಂಗಳೂರು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಈ ನಗರೀಕರಣದ ಜೊತೆಗೆ, ತ್ಯಾಜ್ಯ ನಿರ್ವಹಣೆಯು ಒಂದು ಗಂಭೀರ ಸವಾಲಾಗಿ ಪರಿಣಮಿಸಿದೆ. ಪ್ರತಿದಿನ ಗಣನೀಯ ಪ್ರಮಾಣದ ಘನತ್ಯಾಜ್ಯವನ್ನು ಉತ್ಪಾದಿಸುತ್ತಿದೆ, ಈ ಸಂಶೋಧನಾ ಲೇಖನವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಳವಡಿಸಿಕೊಂಡಿರುವ ತ್ಯಾಜ್ಯ ನಿರ್ವಹಣಾ ನೀತಿಗಳು ಮತ್ತು ಈ ಪ್ರಕ್ರಿಯೆಯಲ್ಲಿ ನಾಗರಿಕರ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಪರಿಶೀಲಿಸುತ್ತದೆ. “ಕಸದ ನಗರ” ಎಂಬ ಹಣೆಪಟ್ಟಿಯನ್ನು ಕಳಚಲು ನ್ಯಾಯಾಲಯದ ಆದೇಶಗಳು, “2 ಬಿನ್ 1 ಬ್ಯಾಗ್” ನಂತಹ ನೀತಿಗಳು ಮತ್ತು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪಾತ್ರವನ್ನು ಈ ಅಧ್ಯಯನವು ಎತ್ತಿ ತೋರಿಸುತ್ತದೆ. ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣೆಯಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯು ಯಶಸ್ಸಿನ ಕೀಲಿ ಎಂಬುದು ಈ ಅಧ್ಯಯನದ ಪ್ರಮುಖ ಕಂಡುಕೊಳ್ಳುವಿಕೆಯಾಗಿದೆ. ಈ ಅಧ್ಯಯನವು ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ನೀತಿಗಳನ್ನು ಪರಿಶೀಲಿಸುತ್ತದೆ ಮತ್ತು ಅವುಗಳ ಅನುಷ್ಠಾನದಲ್ಲಿ ನಾಗರಿಕರ ಪಾತ್ರವನ್ನು ವಿಶ್ಲೇಷಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕ್ರಿಸ್ಟಿಯನ್ ಲೂಡ್ರಿಂಗರ್ ಮತ್ತು ಶಾಲಿನಿ ರಾಂಡೇರಿಯ (2017) “ಗಾರ್ಬೇಜ್ ಇಸ್ ಗುಡ್ ಟು ಥಿಂಕ್ ವಿತ್ ದ ಇಂಟರ್‌ಪ್ಲೇ ಆಫ್ ಸಿವಿಕ್ ಆಕ್ಟಿವಿಸಂ ಅಂಡ್ ಜುಡಿಸಿಯಲ್ ಇಂಟರ್ವೆನ್ಶನ್ ಇನ್ ಶೇಪಿಂಗ ಬೆಂಗಳೂರು ಸಾಲಿಡ್ ವೆಸ್ಟ್ ಮ್ಯಾನೇಜ್ಮೆಂಟ್ ಪಾಲಿಸಿಸ್”, ಓಪನ್ ಎಡಿಷನ್ ಜರ್ನಲ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. (2020). ಘನತ್ಯಾಜ್ಯ ನಿರ್ವಹಣಾ ಉಪ-ಕಾನೂನುಗಳು. ಬೆಂಗಳೂರು: ಬಿಬಿಎಂಪಿ.
ಕೆಎಸ್‌ಪಿಸಿಬಿ. (2019). ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಷ್ಠಾನದ ಕುರಿತು ವಾರ್ಷಿಕ ವರದಿ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.
ರಾಮಚಂದ್ರ, ಟಿ. ವಿ., & ಬಚಮಂಡ, ಎಸ್. (2007). ಪುರಸಭೆಯ ಘನತ್ಯಾಜ್ಯ ನಿರ್ವಹಣೆಯ ಪರಿಸರ ಲೆಕ್ಕಪರಿಶೋಧನೆ. ಅಂತರರಾಷ್ಟ್ರೀಯ ಪರಿಸರ ತಂತ್ರಜ್ಞಾನ ಮತ್ತು ನಿರ್ವಹಣೆಯ ಜರ್ನಲ್, 7(3/4), 369-391.
ಶ್ರೀನಿವಾಸ್, ಎಸ್. (2018). ನಗರ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆ: ಬೆಂಗಳೂರಿನ ತ್ಯಾಜ್ಯ ರ್ವಹಣೆಯ ಪ್ರಕರಣ ಅಧ್ಯಯನ. ಜರ್ನಲ್ ಆಫ್ ಅರ್ಬನ್ ಪಾಲಿಸಿ, 12(4), 45-60.
ಹಸಿರು ದಳ. (ಎನ್‌ಡಿ). ಬೆಂಗಳೂರಿನಲ್ಲಿ ತ್ಯಾಜ್ಯ ತೆಗೆಯುವವರ ಮೇಲಿನ ಪರಿಣಾಮ ವರದಿ.
ದಿ ಹಿಂದೂ, ದಿನಾಂಕ- 13/5/2014 “ ವಿಲ್ ಬೆಂಗಳೂರು ಎವರ್ ಬಿ ಗಾರ್ಬೇಜ್ ಪ್ರೀ ?”