ಮಾನವ ಹಕ್ಕುಗಳ ರಕ್ಷಣೆಯಲ್ಲಿ ನಾಗರಿಕ ಸಮಾಜದ ಸಂಘಟನೆಗಳ ಪಾತ್ರ: ಒಂದು ವಿಶ್ಲೇಷಣೆ
Main Article Content
Abstract
“ನಾಗರಿಕ ಸಮಾಜವು ಸ್ವಯಂಸೇವಾ ನಾಗರಿಕ ಮತ್ತು ಸಾಮಾಜಿಕ ಸಂಸ್ಥೆಗಳ ಸಮಗ್ರತೆಯನ್ನು ಒಳಗೊಂಡಿದೆ. ಇವು ರಾಜ್ಯದ ಬಲಪ್ರಯೋಗದ ಆಧಾರಿತ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಕಾರ್ಯನಿರ್ವಹಿಸುವ ಸಮಾಜದ ಆಧಾರವನ್ನು ರೂಪಿಸುತ್ತವೆ (ರಾಜ್ಯದಲ್ಲಿ ಯಾವುದೇ ರಾಜಕೀಯ ವ್ಯವಸ್ಥೆ ಇರಲಿ) ಹಾಗೂ ಮಾರುಕಟ್ಟೆಯ ವಾಣಿಜ್ಯ ಸಂಸ್ಥೆಗಳಿಂದ ವಿಭಿನ್ನವಾಗಿರುತ್ತವೆ” ಎಂದು ಯುಎನ್‌ಡಿಪಿ ವಿವರಿಸುವಂತೆ ಈ ನಾಗರಿಕ ಸಮಾಜದ ಸಂಸ್ಥೆಗಳಲ್ಲಿ ಸಮುದಾಯ ಸಂಘಗಳು, ಸಂಶೋಧನಾ ಸಂಸ್ಥೆಗಳು, ಎನ್‌ಜಿಒಗಳು, ಸಾಂಸ್ಕೃತಿಕ ಸಂಘಗಳು, ವೃತ್ತಿಪರ ಸಂಘಟನೆಗಳು, ಧಾರ್ಮಿಕ ಗುಂಪುಗಳು ಮತ್ತು ಇತರೆ ಸಂಘಗಳು ಸೇರಿವೆ.
ಮಾನವ ಹಕ್ಕುಗಳು ಎಂದರೆ ಮಾನವನಾಗಿ ಜನಿಸಿದ್ದರಿಂದ ಪಡೆದ ಸೌಲಭ್ಯಗಳು. ಯಾವುದೇ ಜಾತಿ, ಲಿಂಗ, ಧರ್ಮ ಹಾಗೂ ಜನ್ಮಸ್ಥಳವನ್ನು ಆಧರಿಸಿ ಸೌಲಭ್ಯಗಳನ್ನು ನೀಡದೇ ಎಲ್ಲಾ ಮಾನವರಿಗೂ ಅನ್ವಯಿಸಲ್ಪಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯೇ ಮಾನವ ಹಕ್ಕುಗಳ ತಳಹದಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಯಶಸ್ಸಿಗೆ ಆಧಾರವಾಗಿರುವ ಎಲ್ಲರಿಗೂ ಸಮಾನತೆ, ಸ್ವಾತಂತ್ರ್ಯ, ಶೋಷಣೆಯ ವಿರುದ್ಧ ಹೋರಾಡುವ ಹಕ್ಕು, ಜೀವಿಸುವ ಹಕ್ಕು, ಸ್ವಯಂ ರಕ್ಷಣೆಯ ಹಕ್ಕು, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ, ಉದ್ಯೋಗದ ಹಕ್ಕುಗಳನ್ನು ಭಾರತದ ಸಂವಿಧಾನದ 3ನೇ ಭಾಗದಲ್ಲಿ ಮೂಲಭೂತ ಹಕ್ಕುಗಳು ಎಂದು ಅಡಕಗೊಳಿಸಿ ಎಲ್ಲಾ ಪ್ರಜೆಗಳಿಗೂ ಅವು ದೊರೆಯುವಂತೆ ಮಾಡಲಾಗಿದೆ. ಇದರ ಜೊತೆಯಲ್ಲಿ 1993ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಿ, ತದನಂತರ ರಾಜ್ಯಗಳ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ, ರಾಜ್ಯಗಳ ಮಹಿಳಾ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ರಾಜ್ಯಗಳ ಮಕ್ಕಳ ಹಕ್ಕುಗಳ ಆಯೋಗ, ಇತರೆ ಆಯೋಗಗಳನ್ನು ಸ್ಥಾಪನೆ ಮಾಡಲಾಗಿದೆ. ಆದಾಗ್ಯೂ ಭಾರತದಲ್ಲಿ ಸಾಮಾಜಿಕ ಅಸಮಾನತೆ, ಜಾತಿ-ಲಿಂಗ ಭೇದಭಾವ, ಪೊಲೀಸ್ ದೌರ್ಜನ್ಯ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಮಾನವ ಹಕ್ಕುಗಳ ಉಲ್ಲಂಘನೆಯು ನಿರಂತರವಾಗಿ ನಡೆಯುತ್ತಿರುವುದರಿಂದ ಮಾನವ ಹಕ್ಕುಗಳ ರಕ್ಷಣೆಗೆ ಮತ್ತು ಎಲ್ಲಾ ರಂಗಗಳಲ್ಲಿಯೂ ಸಮಾನತೆಯ ಸಾಧನೆಗೆ ನಾಗರಿಕ ಸಮಾಜದ ಸಂಘಟನೆಗಳು ಅಗತ್ಯ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿದ್ದ ಸರ್ಜಾನ್ ಕರೀಮ್ “ಎಲ್ಲರಿಗೂ ಮಾನವ ಹಕ್ಕುಗಳನ್ನು ಸಾಧಿಸುವ ಗುರಿ ಮಹತ್ವಾಕಾಂಕ್ಷೆಯದಾದರೂ, ನಾಗರಿಕ ಸಮಾಜದ ಸಂಘಟನೆಗಳ ಸಹಭಾಗಿತ್ವದ ಮೂಲಕ ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ. ಈ ಲೇಖನವು ಭಾರತದಲ್ಲಿ ಮಾನವ ಹಕ್ಕುಗಳ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಹಕ್ಕು ಉಲ್ಲಂಘನೆಗಳ ವರದಿ, ಜಾಗೃತಿ ಕಾರ್ಯಕ್ರಮಗಳು, ಕಾನೂನು ನೆರವು ಮತ್ತು ಜನತೆಯ ಮೇಲ್ವಿಚಾರಣೆಯ ಕ್ರಮಗಳ ಮತ್ತು “ಅರುಣಾ ಶಾನಭಾಗ್” ಪ್ರಕರಣದಲ್ಲಿ ನಾಗರಿಕ ಸಮಾಜದ ಸಂಘಟನೆಗಳು ಹೇಗೆ ಪ್ರಭಾವವನ್ನು ಬೀರಿವೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಇಷ್ಟೆಲ್ಲಾ ಕ್ರಮಗಳನ್ನು ತೆಗೆದುಕೊಂಡರೂ ಹಣಕಾಸಿನ ನಿರ್ಬಂಧಗಳು, ರಾಜಕೀಯ ಒತ್ತಡ, ಕಾನೂನು ನಿಯಂತ್ರಣಗಳು ಮತ್ತು ಭಯಭೀತಿಯಂತಹ ಪರಿಸ್ಥಿತಿಯ ಸವಾಲುಗಳಿಂದ ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಈ ಸಂಘಟನೆಗಳ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತಿವೆ. ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಮಾತ್ರ ಭಾರತದಲ್ಲಿ ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Basu.D. D.( 2018). “Introduction to the constitution of India”. Delhi: Lexis Nexis.
ರಾಜಶೇಖರ.ಹೆಚ್.ಎಂ.(2015).“ಭಾರತ ಸಂವಿಧಾನ ಮತ್ತು ಸರ್ಕಾರ”. ಮೈಸೂರು: ಪ್ರಬೋಧ ಮುದ್ರಣ ಮತ್ತು ಪ್ರಕಟನಾಲಯ.
ಪ್ರಜಾವಾಣಿ: 11-12-2025.
ವಿಜಯ ಕರ್ನಾಟಕ: 11-12-2018.
Gupta, V.C.(2022)“Handbook of Human Rights”. Jersey City: Alexis Press.
Gupta, V.P.(2011) “Human Rights and Civil Society in India” IJPS.(Vol. LXXII.No 2).pp.363-375.
Kishore, R.R.(2016). “Aruna Shanbaug and the right to die with dignity: the battle continues”. Indian Journal of Medical Ethics.(Vol XIII No 1).pp.38-46.