‘ಟೆಡ್ ಹ್ಯೂಸ್’ ಮತ್ತು ‘ಸಿಲ್ವಿಯಾ ಪ್ಲಾತ್’: ಕಾವ್ಯ ಚಿತ್ರಿಸಿದ ದುರಂತ ಚಿತ್ರಗಳು.

Main Article Content

ಚೈತ್ರ ಪಿ.

Abstract

ಪ್ರಸ್ತುತ ಲೇಖನವು ನಟರಾಜ್ ಹುಳಿಯಾರ್ ಅವರ 'ಕವಿಜೋಡಿಯ ಆತ್ಮಗೀತ' ಎಂಬ ವಿಶಿಷ್ಟ ಕಥಾಕಾವ್ಯದ ಹಿನ್ನೆಲೆಯಲ್ಲಿ ಜಾಗತಿಕ ಸಾಹಿತ್ಯದ ಪ್ರಸಿದ್ಧ ಕವಿಗಳಾದ ಟೆಡ್ ಹ್ಯೂಸ್ ಮತ್ತು ಸಿಲ್ವಿಯಾ ಪ್ಲಾತ್ ಅವರ ಜೀವನದ ಏರಿಳಿತಗಳನ್ನು ವಿಶ್ಲೇಷಿಸುತ್ತದೆ. ಅಮೆರಿಕದ ಸಿಲ್ವಿಯಾ ಮತ್ತು ಇಂಗ್ಲೆಂಡಿನ ಟೆಡ್ ಅವರ ಬಾಲ್ಯ, ಕವಿತೆಗಳ ಮೂಲಕ ಬೆಸೆದ ಪ್ರೇಮ ಸಂಬಂಧ, ದಾಂಪತ್ಯದ ಬಿರುಕು ಹಾಗೂ ಅಂತಿಮವಾಗಿ ಸಿಲ್ವಿಯಾಳ ಆತ್ಮಹತ್ಯೆಯಂತಹ ದುರಂತದ ಘಟನೆಗಳನ್ನು ಈ ಪ್ರಬಂಧವು ಚರ್ಚಿಸುತ್ತದೆ. ಆಧುನಿಕ ಮಹಾಕಾವ್ಯದ ಶೈಲಿಯಲ್ಲಿರುವ ಈ ಕೃತಿಯು ಕೇವಲ ಇಬ್ಬರು ಕವಿಗಳ ಜೀವನ ಚರಿತ್ರೆಯಾಗದೆ, ಪ್ರೇಮ, ಕಾಮ, ಅನುಮಾನ ಮತ್ತು ಸ್ತ್ರೀವಾದಿ ನೆಲೆಗಟ್ಟುಗಳ ಸಂಕೀರ್ಣತೆಯನ್ನು ಅನಾವರಣಗೊಳಿಸುತ್ತದೆ. ಭಾರತೀಯ ದಾಂಪತ್ಯ ಮೌಲ್ಯಗಳಿಗೂ ಮತ್ತು ಪಾಶ್ಚಾತ್ಯರ ವ್ಯಕ್ತಿಗತ ಸ್ವಾತಂತ್ರ್ಯಕ್ಕೂ ಇರುವ ವ್ಯತ್ಯಾಸಗಳನ್ನು ಗುರುತಿಸುತ್ತಾ, ಕವಿತೆಯು ಇಬ್ಬರ ನಡುವೆ ಸೇತುವೆಯಾಗಲು ಸೋತ ಬಗೆಯನ್ನು ಇಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.

Article Details

Section

Research Articles

Author Biography

ಚೈತ್ರ ಪಿ.

ಪ್ರಥಮ ಎಂ.ಎ. ವಿದ್ಯಾರ್ಥಿನಿ, ಕನ್ನಡ ವಿಭಾಗ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಪೆರಿಯಾ, ಕಾಸರಗೋಡು.

How to Cite

ಚೈತ್ರ ಪಿ. (2022). ‘ಟೆಡ್ ಹ್ಯೂಸ್’ ಮತ್ತು ‘ಸಿಲ್ವಿಯಾ ಪ್ಲಾತ್’: ಕಾವ್ಯ ಚಿತ್ರಿಸಿದ ದುರಂತ ಚಿತ್ರಗಳು. ಅಕ್ಷರಸೂರ್ಯ (AKSHARASURYA), 1(01), 23 to 28. https://aksharasurya.com/index.php/latest/article/view/7

References

ಕವಿಜೋಡಿಯ ಆತ್ಮಗೀತ, ನಟರಾಜ್ ಹುಳಿಯಾರ್, 2021, ಪಲ್ಲವ ಪ್ರಕಾಶನ.