ದಾಂಪತ್ಯ ಸಮರಸ

Main Article Content

ಮಂಜುಳ ಎಂ.ಕೆ.

Abstract

ದುಗ್ಗೇನಹಳ್ಳಿ ಸಿದ್ದೇಶ ಅವರ ‘ಗುರುವಿನ ಜೋಳಿಗೆ’ ಕವನ ಸಂಕಲನದಲ್ಲಿನ ಆಯ್ದ ಕವಿತೆಗಳ ಹಿನ್ನೆಲೆಯಲ್ಲಿ ದಾಂಪತ್ಯದ ಸಾಮರಸ್ಯ ಮತ್ತು ಸೌಂದರ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಪತ್ನಿಯನ್ನು ‘ಸಖಿ’ ಎಂದು ಗೌರವಪೂರ್ವಕವಾಗಿ ಸಂಬೋಧಿಸುವ ಈ ಕವನಗಳು, ಗಂಡ-ಹೆಂಡತಿಯ ನಡುವಿನ ಪ್ರೀತಿ, ತ್ಯಾಗ, ನಿರಹಂಕಾರ ಹಾಗೂ ಸಹನಾಶೀಲತೆಯನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತವೆ. ಇಂದಿನ ಕೌಟುಂಬಿಕ ಬಿಕ್ಕಟ್ಟುಗಳಿಗೆ ಸಾಂತ್ವನ ನೀಡುವಂತಹ ಚಿಕಿತ್ಸಕ ಗುಣ ಈ ಕವಿತೆಗಳಲ್ಲಿದೆ. ‘ಮಾಘಮಾಸ’, ‘ಸಖಿಯ ಹಾಡು’, ‘ಜೊತೆಗಾತಿ’ ಮುಂತಾದ ಕವನಗಳನ್ನು ಕುವೆಂಪು, ದ.ರಾ. ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ ಅವರ ಕಾವ್ಯಮಾದರಿಗಳು ಹಾಗೂ ಜನಪದ ಸಾಹಿತ್ಯದೊಂದಿಗೆ ತುಲನಾತ್ಮಕವಾಗಿ ಚರ್ಚಿಸಲಾಗಿದೆ. ದಾಂಪತ್ಯವೆಂದರೆ ಕೇವಲ ವಿವಾಹದ ಬಂಧವಲ್ಲ, ಅದು ಪರಸ್ಪರ ಅರ್ಥಮಾಡಿಕೊಳ್ಳುವ ಹಾಗೂ ನಂಬಿಕೆಯಿಂದ ಬೆಸೆಯುವ ಸಮರಸದ ಬದುಕು ಎಂಬ ಉದಾತ್ತ ಆಶಯವನ್ನು ಕವಿಯ ಕಾವ್ಯದೃಷ್ಟಿಯ ಮೂಲಕ ಸಮರ್ಥವಾಗಿ ಮಂಡಿಸಲಾಗಿದೆ.

Article Details

Section

Research Articles

Author Biography

ಮಂಜುಳ ಎಂ.ಕೆ.

ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್.

How to Cite

ಮಂಜುಳ ಎಂ.ಕೆ. (2026). ದಾಂಪತ್ಯ ಸಮರಸ. ಅಕ್ಷರಸೂರ್ಯ (AKSHARASURYA), 14(02), 61 to 68. https://aksharasurya.com/index.php/latest/article/view/666

References

ಹಲಸಂಗಿಯ ಗೆಳೆಯರು (ಸಂಗ್ರಾಹಕರು), (1990), ಗರತಿಯ ಹಾಡು, ಧಾರವಾಡ: ಸಮಾಜ ಪುಸ್ತಕಾಲಯ.

ನರಸಿಂಹಸ್ವಾಮಿ ಕೆ.ಎಸ್., (2007), ಮೈಸೂರುಮಲ್ಲಿಗೆ, ಬೆಂಗಳೂರು: ಸ್ಟ್ಯಾಂಡರ್ಡ್ ಪ್ರೆಸ್.

ಚೆನ್ನಯ್ಯ ಎಚ್‌.ಎಂ. ಮತ್ತು ಇತರರು (ಸಂ), (2004), ಆಧುನಿಕ ಕನ್ನಡ ಕಾವ್ಯ, ಮೈಸೂರು: ಪ್ರಸಾರಾಂಗ (ಮೈಸೂರು ವಿಶ್ವವಿದ್ಯಾನಿಲಯ).

ಅಶೋಕ ಟಿ.ಪಿ., (1991), ಸಾಹಿತ್ಯ ಸಂದರ್ಭ, ಸಾಗರ: ಅಕ್ಷರ ಪ್ರಕಾಶನ.

ಕೀರ್ತಿನಾಥ ಕುರ್ತಕೋಟಿ, (1962), ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಧಾರವಾಡ: ಮನೋಹರ ಗ್ರಂಥಮಾಲೆ.