ಅಲೆಮಾರಿಯ ಅಂಡಮಾನ್ ಮತ್ತು ವರ್ತಮಾನದ ಮುಖಾಮುಖಿ
Main Article Content
Abstract
ಪೂರ್ಣಚಂದ್ರ ತೇಜಸ್ವಿಯವರ ‘ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್’ ಕೃತಿಯು ಕೇವಲ ಸಾಂಪ್ರದಾಯಿಕ ಪ್ರವಾಸ ಕಥನವಾಗಿರದೆ, ಅಂಡಮಾನಿನ ಭೌಗೋಳಿಕ, ಸಾಮಾಜಿಕ ಮತ್ತು ರಾಜಕೀಯ ವಾಸ್ತವಗಳ ತೀಕ್ಷ್ಣ ವಿಶ್ಲೇಷಣೆಯಾಗಿದೆ. ಪ್ರವಾಸಿ ತಾಣಗಳ ವರ್ಣನೆಗಿಂತ ಹೆಚ್ಚಾಗಿ, ಹಡಗುಯಾನದ ಏಕತಾನತೆ, ಸಹಪ್ರಯಾಣಿಕರ ಮನಸ್ಥಿತಿ ಹಾಗೂ ಭಾರತೀಯ ಸಮಾಜದ ಭ್ರಷ್ಟಾಚಾರ, ಬಡತನದಂತಹ ಜಾಡ್ಯಗಳನ್ನು ಲೇಖಕರು ಇಲ್ಲಿ ಮುಖಾಮುಖಿಯಾಗಿಸಿದ್ದಾರೆ. ಝರವಾ ಬುಡಕಟ್ಟು ಜನರ ಮೇಲಿನ ಆಧುನಿಕತೆಯ ದೌರ್ಜನ್ಯ, ವಂಡೂರಿನ ಹವಳದ ದಂಡೆಗಳ ಜೈವಿಕ ವಿಸ್ಮಯ ಹಾಗೂ ಅಂಡಮಾನಿನ ಅನನ್ಯ ಜಾತ್ಯತೀತ ವಾತಾವರಣವನ್ನು ವೈಜ್ಞಾನಿಕ ಮತ್ತು ಮಾನವೀಯ ಕಾಳಜಿಯೊಂದಿಗೆ ಕಟ್ಟಿಕೊಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶಮಾಡುತ್ತಿರುವ ವರ್ತಮಾನದ ಬಿಕ್ಕಟ್ಟುಗಳಿಗೆ ಈ ಕೃತಿಯು ಇಂದಿಗೂ ಹೇಗೆ ಪ್ರಸ್ತುತವಾಗಿದೆ ಎಂಬುದನ್ನು ಲೇಖನದಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಪೂರ್ಣಚಂದ್ರ ತೇಜಸ್ವಿ, (1993), ಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್, ಮೈಸೂರು: ಪುಸ್ತಕ ಪ್ರಕಾಶನ.
ಸಂಗನಾಳಮಠ ಯು.ಎನ್. (ಸಂ.), (2009), ಕಾಡಿನ ಸಂತ ಪೂರ್ಣಚಂದ್ರ ತೇಜಸ್ವಿ, ಬೆಂಗಳೂರು: ಸಿ.ವಿ.ಜಿ. ಇಂಡಿಯಾ.
ನರೇಂದ್ರ ರೈ ದೇರ್ಲ, (2015), ಪೂರ್ಣಚಂದ್ರ ತೇಜಸ್ವಿ, ಬೆಂಗಳೂರು: ಪುಸ್ತಕಮನೆ.
ಶಿವಾರೆಡ್ಡಿ ಕೆ.ಸಿ., (2010), ಕೆ.ಪಿ. ಪೂರ್ಣಚಂದ್ರ ತೇಜಸ್ವಿ: ಬದುಕು ಬರಹ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.